ಹುಬ್ಬಳ್ಳಿ, ಅಕ್ಟೋಬರ್ 30: ವಿಜಯಪುರದಲ್ಲಿ ರೈತರು ಸರ್ಕಾರದ ವಿರುದ್ಧ ಬಂಡೆದ್ದಿದಾರೆ. ವಕ್ಫ್ ಆಸ್ತಿ (Waqf) ವಿವಾದ ಕುರಿತಂತೆ ರೈತರು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಇಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಥ್ ನೀಡಲಿದ್ದಾರೆ.
ವಿಜಯಪುರ ಜಿಲ್ಲೆಯ ರೈತರ ಸಾವಿರಾರು ಎಕರೆ ಜಮೀನು ವಕ್ಫ್ ಮಂಡಳಿ ಹೆಸರಿನಲ್ಲಿ ದಾಖಲಾಗಿರುವುದನ್ನು ಖಂಡಿಸಿ, ರೈತರು ವಿಜಯಪುರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ಆರಂಭಿಸಿದ್ದು, ಇಂದು ಧರಣಿ ನಿರತ ರೈತರನ್ನು ಭೇಟಿ ಮಾಡಿ ಬಳಿಕ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ವಿಜಯಪುರ ವಕ್ಫ್ ಆಸ್ತಿ ವಿವಾದ: ವಿಶೇಷ ಹೋರಾಟಕ್ಕೆ ಸಿದ್ಧವಾದ ರೈತ ಸಂಘಟನೆಗಳು
ರೈತರ ಜಮೀನುಗಳನ್ನು ವಕ್ಫ್ ಆಸ್ತಿಯಾಗಿ ಕಬಳಿಸುವುದರ ಹಿಂದೆ ಕಾಂಗ್ರೆಸ್ ಮತ್ತು ಸಚಿವ ಜಮೀರ್ ಕುಮ್ಮಕ್ಕು ಕೆಲಸ ಮಾಡಿರುವುದು ಸ್ಪಷ್ಟ. ಇವರೆಲ್ಲರೂ ಸೇರಿ, ರೈತರನ್ನು ಭಯಭೀತರನ್ನಾಗಿ ಮಾಡಿ ಅವರ ಜಮೀನನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ವಿಜಯಪುರ ಜಿಲ್ಲೆಯ ರೈತರ ಸಾವಿರಾರು ಎಕರೆ ಜಮೀನು ವಕ್ಫ್ ಮಂಡಳಿ ಹೆಸರಿನಲ್ಲಿ ದಾಖಲಾಗಿರುವುದನ್ನು ಖಂಡಿಸಿ, ರೈತರು ವಿಜಯಪುರದ ಜಿಲ್ಲಾಧಿಕಾರಿಯ ಕಛೇರಿಯ ಮುಂದೆ ಧರಣಿ ಆರಂಭಿಸಿದ್ದು ನಾಳೆ ಆ ಧರಣಿ ನಿರತ ರೈತರನ್ನು ಭೇಟಿ ಮಾಡಲಿದ್ದೇನೆ. ರೈತರ ಜಮೀನುಗಳನ್ನ ವಕ್ಫ್ ಆಸ್ತಿ ಎಂದು ಕಬಳಿಸುವುದರ ಹಿಂದೆ ಕಾಂಗ್ರೆಸ್ ಮತ್ತು ಜಮೀರ್ ಕುಮ್ಮಕ್ಕು ಕೆಲಸ… pic.twitter.com/8SYhzdafwK
— Pralhad Joshi (@JoshiPralhad) October 29, 2024
ರೈತರ ಜಮೀನು ಖಾತೆಯಿಂದ ವಕ್ಫ್ ಬೋರ್ಡನ ಹೆಸರು ತೆಗೆಸುವವರೆಗೆ ನಮ್ಮ ಹೋರಾಟ ನಡೆಯಲಿದೆ. ವಕ್ಫ್ ಬೋರ್ಡ್ ವಂಚನೆಯಲ್ಲಿ ಸಿಲುಕಿದ ರಾಜ್ಯದ ಪ್ರತಿ ರೈತರಿಗೆ ನ್ಯಾಯ ಸಿಗುವವರೆಗೆ ಹಾಗೂ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗುವವರೆಗೆ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.