ವಕ್ಫ್​ ಆಸ್ತಿ ವಿವಾದ: ರೈತರಿಗೆ ನೀಡಿದ ನೋಟಿಸ್​ ಸಮರ್ಥಿಸಿಕೊಂಡ ಸಚಿವ ಜಮೀರ್

ರೈತರ ಭೂಮಿಯನ್ನ ವಕ್ಫ್​ ಬೋರ್ಡ್​ ಕಬಳಿಸುತ್ತಿದೆ ಎನ್ನುವ ರಾಜ್ಯದ ಹಲವು ಜಿಲ್ಲೆಗಳ ರೈತರ ಆರೋಪ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಹರಿಹಾಯ್ತಿದ್ರೆ. ಅತ್ತ ಕಾಂಗ್ರೆಸ್ ಕೂಡಾ ಬಿಜೆಪಿ ಅವಧಿಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ದಾಖಲೆಯನ್ನ ಬಿಟ್ಟು ತಿರುಗೇಟು ಕೊಟ್ಟಿದೆ. ಈ ಮಧ್ಯೆ ಖುದ್ದು ಸಿಎಂ ಸಿದ್ದರಾಮಯ್ಯ ರೈತರಿಗೆ ಅಭಯ ನೀಡಿದ್ದಾರೆ. ಇನ್ನು ವಿಜಯಪುರದಲ್ಲಿ ರೈತರಿಗೆ ನೋಟಿಸ್ ನೀಡಿರುವುದನ್ನ ಸಚಿವ ಜಮೀರ್ ಅಹಮ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಮೊದಲು ತಾವೊಬ್ಬ ಹಿಂದೂಸ್ಥಾನಿ ಎಂದು ಗುಡುಗಿದ್ದಾರೆ.

ವಕ್ಫ್​ ಆಸ್ತಿ ವಿವಾದ: ರೈತರಿಗೆ ನೀಡಿದ ನೋಟಿಸ್​ ಸಮರ್ಥಿಸಿಕೊಂಡ ಸಚಿವ ಜಮೀರ್
ಜಮೀರ್ ಅಹಮ್ಮದ್ ಖಾನ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 29, 2024 | 10:51 PM

ಹಾವೇರಿ, (ಅಕ್ಟೋಬರ್ 29): ರೈತರ ಭೂಮಿಯನ್ನ ವಕ್ಫ್​ ಬೋರ್ಡ್​ ಕಬಳಿಸುತ್ತಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದೇ ವಿಚಾರವಾಗಿ ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ನೋಟಿಸ್ ನೀಡಲಾಗಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರೈತರು ಸಿಡಿದೆದ್ದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡು ಸಿಎಂ ಸಿದ್ದರಾಮಯ್ಯ, ರೈತರಿಗೆ ಏನು ಆಗುವುದಿಲ್ಲ. ಈಗಾಗಲೇ ನೀಡಿರುವ ನೋಟಿಸ್ ವಾಪಸ್ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೆ, ಇತ್ತ​ ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮ್ಮದ್ ಖಾನ್ ಮಾತ್ರ ನೋಟಿಸ್​ ನೀಡಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಹಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮ್ಮದ್ ಖಾನ್, ಬಿಜೆಪಿಯವರು ಈ ತರಹ ರಾಜಕಾರಣ ಮಾಡಬಾರದು. ವಿಜಯಪುರ ಜಿಲ್ಲೆಯಲ್ಲಿ 1200 ಎಕರೆ ಇಲ್ಲವೇ ಇಲ್ಲ. ಕೇವಲ ಇರೋದು ಕೇವಲ 12 ಎಕರೆ. ಅಲ್ಲಿ 11 ಎಕರೆ ಸ್ಮಶಾನ ಇದೆ. ನಾವು ಒಂದಿಂಚೂ ಜಾಗ ತಗೆದುಕೊಂಡಿಲ್ಲ. ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಬೇರೆಯವರು ಆಸ್ತಿ ತೆಗೆದುಕೊಳ್ಳುವುದಕ್ಕೆ ನಾವು ಯಾರು? ರೈತರ ಆಸ್ತಿ ಮುಟ್ಟೋಕೆ ಸಾಧ್ಯ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ವಕ್ಫ್​ ವಿವಾದ: ಸಚಿವ ಜಮೀರ್ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ ಎಂದ ಡಿಸಿ

ನಮಗೆ ಒಂದು ಲಕ್ಷ 12 ಸಾವಿರ ಎಕರೆ ದಾನ ಮಾಡಿದ್ದಾರೆ. ನಾನು 11 ಜಿಲ್ಲೆಯಲ್ಲಿ ವಕ್ಫ್​ ಅದಾಲತ್ ಮಾಡಿದ್ದೇನೆ. ಅಧಿಕಾರಿಗಳ ಸಭೆ ಮಾಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಸಭೆ ಮಾಡಿದಾಗ ಯತ್ನಾಳ್​ಗೆ ಅಹ್ವಾನ‌ ಕೊಟ್ಟಿದ್ವಿ. ರೈತರಿಗೆ ಅನ್ಯಾಯ ಆದ್ರೆ ಯತ್ನಾಳ್ ಯಾಕೆ ಸಭೆಗೆ ಬರಲಿಲ್ಲ? ರೈತರ ಆಸ್ತಿ ತಗೋಳೊಕೆ ಸಾಧ್ಯನಾ..? ಅಧಿಕಾರಿ ಅಷ್ಟು ಸುಲಭವಾಗಿ ಮಾಡ್ತಾರಾ.? ರೈತರ ಆಸ್ತಿಯನ್ನು ಮುಟ್ಟೋಕೆ ಆಗಲ್ಲ, ಇದೊಂದು ರಾಜಕೀಯ ಪಿತೂರಿ ಎಂದರು.

ಬೇರೆಯವರು ಆಸ್ತಿ ತಗೋಳೋಕೆ ನಾವು ಯಾರು? ರೈತರ ಆಸ್ತಿ ಮುಟ್ಟೋಕೆ ಸಾಧ್ಯ ಇಲ್ಲ. ರೈತರು ಅನ್ನದಾತರು. ನಾವು ಅವರ ಆಸ್ತಿ ಮುಟ್ಟಿಸೋಕೆ ಸಾಧ್ಯನಾ.? ವಕ್ಫ್​ ಆಸ್ತಿ ಒಂದು ಲಕ್ಷ 12 ಸಾವಿರ ಎಕರೆ ಇದೆ. ನಮ್ಮ ಬಳಿ ದಾಖಲೆ ಇದೆ. ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಮುಜರಾಯಿ, ವಕ್ಫ್​ ಎರಡು ಒಂದೇ. ನಾವು ಅಲ್ಲ ಅಂತೀವಿ,ನೀವು ದೇವರ ಅಂತೀರಿ. ಅಲ್ಲ ನಮ್ಮ ನಂಬಿಕೆ. ಜೋಶಿ ಏನಾದರೂ ಹೇಳಲಿ. ನಾನು ಮೊದಲು ಹಿಂದೂಸ್ತಾನಿ. ಆಮೇಲೆ ಮುಸ್ಲಿಂ ಎಂದು ಟಾಂಗ್ ಕೊಟ್ಟರು.

ಇದು ಬಿಜೆಪಿಯ ಹುನ್ನಾರ

ರಾಜಕೀಯಕ್ಕೆ ಬಂದು ಜಾತಿ ಮಾಡಿದ್ರೆ, ಅವರು ನಾಲಾಯಕ್. ನಾವು ಜಾತಿ ನೋಡಿದ್ರೆ ನಿರ್ನಾಮ ಆಗುತ್ತೇವೆ. ಯಾವಾಗ ಯಾವಾಗ ಚುನಾವಣೆ ಆಗತ್ತೆ ಅವಾಗ ನಾವು ಸಾಧನೆ ಹೇಳತೀವಿ. ಬಿಜೆಪಿಯವರದು ಬರೀ ಹಿಂದೂ ಮುಸ್ಲಿಂ. ಸಾಧನೆ ಸೊನ್ನೆ. ರಾಜಕೀಯ ಬೇಳೆ ಬೇಯಸೋಕೆ ಇವರು ಮಾತಾಡುತ್ತಿದ್ದಾರೆ. ನಾವು ಯಾವ ರೈತರಿಗೂ ಕಾನೂನು ಬಾಹಿರವಾಗಿ ನೋಟಿಸ್ ಕೊಟ್ಟಿದ್ರೆ‌ ನಿಲ್ಲುಸುತ್ತೇನೆ. ಅಲ್ಲದೇ ನೋಟಿಸ್ ಕೊಟ್ಟವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ. ಬಿಜೆಪಿಯವರ ಬೆಕ್ಕಿನ ತರ. ಹಾಲು ಕುಡಿಯೋಕೆ ಬೆಕ್ಕು ಕಾಯುತಿರತ್ತೆ..ಅದೇ ರೀತಿ ಬಿಜೆಪಿಯವರು ಕಾಯುತ್ತಿದ್ದಾರೆ. ಇದು ಬಿಜೆಪಿಯ ಹುನ್ನಾರ. ಬಿಜೆಪಿಯವರ ಕಾಲದಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾನು ದಾಖಲೆ ಕೊಡುತ್ತೇನೆ ಎಂದು ಗುಡುಗಿದರು.

ಮುಜರಾಯಿ ಇಲಾಖೆ ಅಸ್ತಿ ಕೂಡಾ ಒತ್ತುವರಿ ಆಗಿದೆ. ಅದನ್ನು ಉಳಸೋಣ ನಡೆಯಿರಿ. ಇದಕ್ಕೆ ಮಾನ್ಯ ಯತ್ನಾಳ್ ಏನು ಹೇಳುತ್ತಾರೆ. ನನಗೆ ಹಿಂದೂ ಬ್ರದರ್ಸ್ ವೋಟ್ ಕೊಟ್ಟಿದ್ದಾರೆ. ನನಗೆ ಎಲ್ಲ ಸಮಾಜ ಒಂದೇ. ಎಲ್ಲ ಸಮಾಜ ಜೊತೆ ತಗೆದುಕೊಂಡು ಹೋಗೋರೆ ರಾಜಕಾರಣಿ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:45 pm, Tue, 29 October 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ