ಬ್ಯಾನರ್‌ನಲ್ಲಿ ಖರ್ಗೆ, ಪರಮೇಶ್ವರ್ ನಾಪತ್ತೆ! ವಾಗ್ವಾದ.. ಎಲ್ಲಿ?

ಬ್ಯಾನರ್‌ನಲ್ಲಿ ಖರ್ಗೆ, ಪರಮೇಶ್ವರ್ ನಾಪತ್ತೆ! ವಾಗ್ವಾದ.. ಎಲ್ಲಿ?

ಚಿತ್ರದುರ್ಗ: ಬ್ಯಾನರ್‌ನಲ್ಲಿ ಖರ್ಗೆ, ಪರಮೇಶ್ವರ್ ಭಾವಚಿತ್ರ ಹಾಕದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ‘ಆರೋಗ್ಯ ಹಸ್ತ’ ಕಾರ್ಯಕ್ರಮದಲ್ಲಿ ವಾಗ್ವಾದ ನಡೆದಿದೆ.

ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಚಿತ್ರದುರ್ಗದ ಉಮಾಪತಿ ಕಲ್ಯಾಣ ಮಂಟಪದಲ್ಲಿ ‘ಆರೋಗ್ಯ ಹಸ್ತ’ ಕಾರ್ಯಕ್ರಮ ನಡೆಯುತ್ತಿತ್ತು. ಕೆಪಿಸಿಸಿ ಪ್ರತಿನಿಧಿಗಳಾಗಿ ಆಗಮಿಸಿದ್ದ ಆರ್.ಧ್ರುವನಾರಾಯಣ, ಬಿ.ಎನ್.ಚಂದ್ರಪ್ಪ, ಹೆಚ್.ಆಂಜನೇಯ ಸಮ್ಮುಖದಲ್ಲೇ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರ ಭಾಷಣದ ವೇಳೆ ವಾಗ್ವಾದ ಶುರುವಾಗಿದೆ.

ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಭಾವಚಿತ್ರ ಹಾಕದ ಹಿನ್ನೆಲೆ ಲಿಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಅದ್ಯಕ್ಷ ಓ.ಶಂಕರ್ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದ ನಡೆಸಿದ್ರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ರು.

Click on your DTH Provider to Add TV9 Kannada