AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಅಧಿಕಾರಕ್ಕೆ ಬಂದ ಮೇಲೆ 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ: ಡಿಕೆ ಶಿವಕುಮಾರ್

ನಾವು ಸರ್ಕಾರಿ ನೌಕರರ ಪರವಾಗಿ ಇದ್ದೇವೆ. ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರುತ್ತೆ ಯಾರಿಗೂ ಅನುಮಾನ ಬೇಡ. ನಾವು ಅದಿಕಾರಕ್ಕೆ ಬಂದ ಕೂಡಲೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಮಕುಮಾರ್​​ ಹೇಳಿದ್ದಾರೆ.

ನಾವು ಅಧಿಕಾರಕ್ಕೆ ಬಂದ ಮೇಲೆ 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ: ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (ಸಂಗ್ರಹ ಚಿತ್ರ)
ವಿವೇಕ ಬಿರಾದಾರ
|

Updated on: Mar 01, 2023 | 11:50 AM

Share

ಹಾಸನ: ನಾವು ಸರ್ಕಾರಿ ನೌಕರರ ಪರವಾಗಿ ಇದ್ದೇವೆ. ಕಾಂಗ್ರೆಸ್ (Congress) ಖಂಡಿತ ಅಧಿಕಾರಕ್ಕೆ ಬರುತ್ತೆ ಯಾರಿಗೂ ಅನುಮಾನ ಬೇಡ. ನಾವು ಅದಿಕಾರಕ್ಕೆ ಬಂದ ಕೂಡಲೆ 7ನೇ ವೇತನ ಆಯೋಗದ (7th Pay Commission)ಶಿಫಾರಸುಗಳನ್ನು ಜಾರಿ ಮಾಡುತ್ತೇವೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar)​​ ಹೇಳಿದ್ದಾರೆ. ಏಳನೇ ವೇತನ ಆಯೋಗ ಜಾರಿ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ. ಇದೊಂದು ಭ್ರಷ್ಟ ಸರ್ಕಾರ, ಎಲ್ಲ ಕಡೆಯೂ ಭ್ರಷ್ಟಾಚಾರ ಹೆಚ್ಚಾಗಿದೆ. ಹೋರಾಟ ನಿಮ್ಮ ಹಕ್ಕು, ನೌಕರರು ಕೇಳುತ್ತಿರುವುದು ಸರಿಯಾಗಿ ಇದೆ ಎಂದರು.

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಬೆಲೆಗಳು ಏರಿಕೆ ಆಗಿದೆ. ನಮ್ಮ ರಾಜ್ಯದಲ್ಲಿ ಅತಿವೃಷ್ಠಿ ಆಯ್ತು ಆಗ ಬರಲಿಲ್ಲ, ಕೊರೊನಾ ವೇಳೆಯಲ್ಲಿ ಜನರು ಆಕ್ಸಿಜನ್ ಇಲ್ಲದೆ ನರಳಾಡಿದರು. ಆಗ ಬಿಜೆಪಿ ಕೇಂದ್ರ ನಾಯಕರು ಬರಲಿಲ್ಲ, ಬಂದು ವೈಮಾನಿಕ ಸಮೀಕ್ಷೆ ಮಾಡಲಿಲ್ಲ. ಜನರು ಸತ್ತಾಗ ಇವರು ಬರಲಿಲ್ಲ. ಓರ್ವ ಕೇಂದ್ರ ಸಚಿವರು ಕೊರೊನದಿಂದ ಮೃತರಾದಾಗ, ಅವರ ಮೃತದೇಹ ರಾಜ್ಯಕ್ಕೆ ತರಲು ಇಲ್ಲಿಯ ನಾಯಕರಿಂದ ಆಗಲಿಲ್ಲ. ಈಗ ಚುನಾವಣೆ ಇದೆ ಅಂತ ಬಿಜೆಪಿಯ ಕೇಂದ್ರ ನಾಯಕರು ಬರುತ್ತಿದ್ದಾರೆ. ಇದು ಕಿವಿ ಕಣ್ಣು ಹೃದಯ ಇಲ್ಲದ ಸರ್ಕಾರ ಎಂದು ಟೀಕೆ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ