AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ವರ್ಷಗಳ ಕಾಲ ಬಾಕಿ ಉಳಿದಿದ್ದ ಅಷ್ಟಬಂಧ ಬ್ರಹ್ಮಕಳಶ ಕೊಲ್ಲೂರು ಮೂಕಾಂಬಿಕಾ ದೇವಿಗೆ ಸಮರ್ಪಣೆ

ಬರೋಬ್ಬರಿ12 ವರ್ಷಗಳ ಕಾಲ ಬಾಕಿ ಉಳಿದಿದ್ದ ಅಷ್ಟಬಂಧ ಬ್ರಹ್ಮಕಳಶ ಕೊಲ್ಲೂರು ಮೂಕಾಂಬಿಕಾ ದೇವಿಗೆ ಸಮರ್ಪಣೆ ಆಗಲಿದೆ. ಇದೀಗ ಏಪ್ರಿಲ್ 30 ರಿಂದ ಮೇ 11 ರವರೆಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಒಟ್ಟು ಐದು ಕೋಟಿ ವೆಚ್ಚದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

12 ವರ್ಷಗಳ ಕಾಲ ಬಾಕಿ ಉಳಿದಿದ್ದ ಅಷ್ಟಬಂಧ ಬ್ರಹ್ಮಕಳಶ ಕೊಲ್ಲೂರು ಮೂಕಾಂಬಿಕಾ ದೇವಿಗೆ ಸಮರ್ಪಣೆ
12 ವರ್ಷಗಳ ಕಾಲ ಬಾಕಿ ಉಳಿದಿದ್ದ ಅಷ್ಟಬಂಧ ಬ್ರಹ್ಮಕಳಶ ಕೊಲ್ಲೂರು ಮೂಕಾಂಬಿಕಾ ದೇವಿಗೆ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ
TV9 Web
| Edited By: |

Updated on:Mar 01, 2023 | 12:20 PM

Share

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಶಕ್ತಿಪೀಠ. ರಾಜ್ಯ ಮಾತ್ರ ಅಲ್ಲ ಹೊರ ರಾಜ್ಯ, ಹೊರದೇಶದ ಭಕ್ತರು ಕೊಲ್ಲೂರಿನ ಕಾರಣಿಕಕ್ಕೆ ಸಾಕ್ಷಿ. ರಾಜ್ಯದ ಎರಡನೇ ಅತಿ ಹೆಚ್ಚು ವರಮಾನದ ದೇವಸ್ಥಾನದಲ್ಲಿ ಕಳೆದ 12 ವರ್ಷಗಳಿಂದ ಧಾರ್ಮಿಕ ಸಂಪ್ರದಾಯ ಒಂದು ನಿಂತುಬಿಟ್ಟಿತ್ತು. 2007 ರ ನಂತರ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದೇ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಇದರಿಂದ ಕಂಟಕಗಳು ಇವೆ ಎಂಬ ಅರಿವಿದ್ದರೂ ಅರ್ಚಕ, ಜನಪ್ರತಿನಿಧಿಗಳು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಜಟಾಪಟಿಯಿಂದ ನಿಂತಿತ್ತು. ಇದೀಗ ಈ ಕಾರ್ಯಕ್ರಮಕ್ಕೆ ಏಪ್ರಿಲ್ ತಿಂಗಳಲ್ಲಿ ದಿನಾಂಕ ನಿಗದಿಯಾಗಿದೆ.

ಅಷ್ಟಬಂಧ ಬ್ರಹ್ಮ ಕಲಶ ಎಂದರೆ, ಎಂಟು ಬಗೆಯ ದ್ರವ್ಯಗಳ ದೇವರ ಪೀಠಕ್ಕೆ ಲೇಪಿಸಲಾಗುತ್ತದೆ. ಪೀಠಕ್ಕೆ ಲೇಪ ಹಾಕಿ 48 ದಿನಗಳ ಕಾಲ ಅದನ್ನು ಒಣಗಲು ಬಿಡಬೇಕು. ಉತ್ಸವ, ಮೂಕಾಂಬಿಕಾ ದೇವಾಲಯದ ಜಾತ್ರೆ ಇರುವ ಕಾರಣ ಅಭಿಷೇಕಾಧಿಗಳು ನಡೆಯುತ್ತಿರುತ್ತದೆ. ಬ್ರಹ್ಮ ಕಲಶ ಯಾರ ಕಾಲದಲ್ಲಿ ಆಗಬೇಕು ಎಂಬ ಅರ್ಚಕರ ನಡುವೆ ವಿಳಂಬವಾಗಿತ್ತು. ಇದೀಗ ಏಪ್ರಿಲ್ 30 ರಿಂದ ಮೇ 11 ರವರೆಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಒಟ್ಟು ಐದು ಕೋಟಿ ವೆಚ್ಚದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

ಇದನ್ನೂ ಓದಿ:ಉಡುಪಿ: ಜಿಲ್ಲೆಯ ಪ್ರಸಿದ್ಧ ಕಂಬಳ ಅದ್ದೂರಿಯಾಗಿ ನಡೆದಿದ್ದು, ಕೋಣಗಳ ಓಟ ನೋಡಿ ಕಂಬಳ ಪ್ರಿಯರು ಸಂತಸ ಪಟ್ಟರು; ಫೋಟೋಗಳಲ್ಲಿ ನೋಡಿ

ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿರುವುದರಿಂದ ರಾಜಕಾರಣಿಗಳ ಅಬ್ಬರ ಇಲ್ಲದೆ ಶಾಸ್ತ್ರೋತ್ಸವವಾಗಿ ಮೂಕಾಂಬಿಕಾ ದೇವಸ್ಥಾನದ ಬ್ರಹ್ಮಕಲಶ ನಡೆಯಬಹುದು. ಚುನಾವಣಾ ನಿಯಮಗಳ ಕಡಿವಾಣ ಇರುವುದರಿಂದ ಕೇಂದ್ರ ರಾಜ್ಯದ ನಾಯಕರು ಕೇವಲ ಭಕ್ತರಾಗಿ ದೇಗುಲಕ್ಕೆ ಭೇಟಿ ಕೊಡುವ ಅವಕಾಶವನ್ನು ಮಾತ್ರ ಪಡೆಯಲಿದ್ದಾರೆ. ತರಾತುರಿ ಬೇಡ, ವೈಭವದಿಂದ ಬ್ರಹ್ಮಕಲಶ ನಡೆಸೋಣ ಎಂಬುದು ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟರ ಅಭಿಪ್ರಾಯವಾಗಿತ್ತು. ಸಮಿತಿ ಅರ್ಚಕರ ತೀರ್ಮಾನದ ನಂತರ ಏನೇನು ಬೆಳವಣಿಗೆಗಳು ಆಗುತ್ತದೆ ಎಂಬ ಕುತೂಹಲ ಭಕ್ತರಲ್ಲಿದೆ.

ದಿನೇಶ್ ಯಲ್ಲಾಪುರ್ ಟಿವಿ9 ಉಡುಪಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Wed, 1 March 23

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ