AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಹೇಳಿದ ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ದುಬೈನ 'ಕನ್ನಡ ಪಾಠ ಶಾಲೆ'ಯನ್ನು ಶ್ಲಾಘಿಸಿದ್ದಾರೆ. ಅನಿವಾಸಿ ಕನ್ನಡಿಗರ ಮಕ್ಕಳಿಗೆ  ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸಲು 2014ರಿಂದ ಈ ಶಾಲೆ ಕಾರ್ಯನಿರ್ವಹಿಸುತ್ತಿದೆ. ವಾರಾಂತ್ಯದಲ್ಲಿ ಸ್ವಯಂಸೇವಕ ಶಿಕ್ಷಕರಿಂದ ಉಚಿತ ತರಗತಿಗಳು ಇರಲಿದ್ದು, ಕನ್ನಡ ಮಿತ್ರರು ಸಂಘಟನೆ ಶಾಲೆಯನ್ನು ನಡೆಸುತ್ತಿದೆ.

ಮೋದಿ ಹೇಳಿದ ದುಬೈನ 'ಕನ್ನಡ ಪಾಠ ಶಾಲೆ' ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ
ದುಬೈನ 'ಕನ್ನಡ ಪಾಠ ಶಾಲೆ' ಬಗ್ಗೆ ಮೋದಿ ಉಲ್ಲೇಖ
ಪ್ರಸನ್ನ ಹೆಗಡೆ
|

Updated on:Dec 28, 2025 | 12:39 PM

Share

ಬೆಂಗಳೂರು, ಡಿಸೆಂಬರ್​​ 28: 2025ನೇ ಸಾಲಿನ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ಉಲ್ಲೇಖಿಸಿದ್ದಾರೆ. ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆ ಎಂಬ ಉದ್ದೇಶದಿಂದ ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ‌ವಾಯ್ತು ಎಂದಿದ್ದಾರೆ. ಆ ಮೂಲಕ ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಯಾವುದು ಇದು ದುಬೈನ ‘ಕನ್ನಡ ಪಾಠ ಶಾಲೆ’?

ಕರ್ನಾಟಕದ ಹೊರಗಿನ ಅತಿದೊಡ್ಡ ಕನ್ನಡ ಭಾಷಾ ಶಾಲೆ ಆಗಿರುವ ‘ಕನ್ನಡ ಪಾಠ ಶಾಲೆ’ ದುಬೈನಲ್ಲಿ 2014ರಿಂದ ಕಾರ್ಯನಿರ್ವಹಿಸುತ್ತಿದೆ. ದುಬೈನಲ್ಲಿರುವ ಕನ್ನಡಿಗ ಮಕ್ಕಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶದಿಂದ ಈ ಶಾಲೆ ಕನ್ನಡಿಗರಿಂದಲೇ ಆರಂಭವಾಗಿದ್ದು, ವಾರಾಂತ್ಯಗಳಲ್ಲಿ ತರಗತಿಗಳು ನಡೆಯುತ್ತವೆ. ಸ್ವಯಂಸೇವಕ ಶಿಕ್ಷಕರು ಉಚಿತವಾಗಿ ಕನ್ನಡ ಕಲಿಸೋದು ಕೂಡ ಇದರ ವಿಶೇಷ. ‘ಕನ್ನಡ ಮಿತ್ರರು’ ಎಂಬ ಸಂಘಟನೆ ಈ ಶಾಲೆಯನ್ನು ನಡೆಸಿಕೊಂಡು ಬಂದಿದೆ.

ಇದನ್ನೂ ಓದಿ: ಬೆಂಗಳೂರಿನ ಐಐಎಸ್​ಸಿಯನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

‘ಕನ್ನಡ ಪಾಠ ಶಾಲೆ’ ಆರಂಭ ಆಗಿದ್ಯಾಕೆ?

ಕೆಲಸಕ್ಕಾಗಿ ದುಬೈಗೆ ಸಾವಿರಾರು ಕನ್ನಡಿಗರು ವಲಸೆ ಬರುತ್ತಾರೆ. ಹೀಗಾಗಿ ಅವರ ಮಕ್ಕಳು ತಮ್ಮ ಮೂಲ ನೆಲದ ಭಾಷೆಯನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಪೋಷಕರು ಕೂಡ ಕೆಲಸಕ್ಕೆ ಹೋಗುವ ಕಾರಣ ಅವರಿಗೂ ಮಕ್ಕಳಿಗೆ ತಮ್ಮ ಭಾಷೆಯ ಬಗ್ಗೆ ಹೇಳಿಕೊಡಲು ಸಮಯ ಇರುವುದಿಲ್ಲ. ಹೀಗಾಗಿ ಅಂತಹ ಮಕ್ಕಳಿಗೆ ಕನ್ನಡ ಕಲಿಸಬೇಕು ಎಂಬ ಉದ್ದೇಶದೊಂದಿಗೆ 50 ಜನರ ತಂಡ ಈ ಶಾಲೆಯನ್ನು ಆರಂಭಿಸಿದೆ. ಉಚಿತ ಕನ್ನಡ ಪಾಠದ ಜೊತೆಗೆ ಇದಕ್ಕೆ ಅಗತ್ಯವಿರುವ ಪಠ್ಯಕ್ರಮವನ್ನೂ ಇವರೇ ವಿನ್ಯಾಸಗೊಳಿಸಿದ್ದಾರೆ. ಹಂತ ಹಂತವಾಗಿಯೇ ಕನ್ನಡ ಪಾಠ ಇಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ವರ್ಣಮಾಲೆ, ಸಂಖ್ಯೆಗಳ ಪರಿಚಯ, ಎರಡನೇ ಹಂತದಲ್ಲಿ ಪದ ಮತ್ತು ವಾಕ್ಯಗಳ ರಚನೆ ಹೇಳಿಕೊಡಲಾಗುತ್ತೆ. ಮೂರನೇ ಹಂತದಲ್ಲಿ ವ್ಯಾಕರಣ ಸೇರಿ ಇತರ ವಿಷಯಗಳ ಪಾಠ ಹೇಳಿಕೊಡಲಾಗುತ್ತೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:36 pm, Sun, 28 December 25