Karnataka Budget: ಕರ್ನಾಟಕ ಬಜೆಟ್ ಯಾವಾಗ? ಈ ಬಾರಿಯ ಬಜೆಟ್ ವಿಶೇಷತೆ ಏನು, ಯಾಕೆ ಮಹತ್ವದ್ದು?
ಕರ್ನಾಟಕ ಬಜೆಟ್ 2023: ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಈ ಸರ್ಕಾರದ ಕೊನೆಯ ಆಯವ್ಯಯದ ಮೇಲೆ ಜನರ ದೃಷ್ಟಿ ನೆಟ್ಟಿದೆ. ಕರ್ನಾಟಕ ಬಜೆಟ್ ಯಾವಾಗ? ಈ ಬಾರಿಯ ಬಜೆಟ್ ವಿಶೇಷತೆ ಏನು, ಯಾಕೆ ಮಹತ್ವದ್ದು? ಇಲ್ಲಿದೆ ನೋಡಿ
ಬೆಂಗಳೂರು: ಇದೇ ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್(Karnataka Budget 2023) ಮಂಡಿಸಲಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿಯವರು(Basavaraj Bommai) ಎರಡನೇ ಬಾರಿಗೆ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ. ಮುಂದೆ ವಿಧಾನಸಭೆ ಚುನಾವಣೆ ಇರುವುದರಿಂದ ಜನಸಾಮಾನ್ಯರಿಗೆ ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ. ಹೌದು… ಫೆಬ್ರವರಿ 17ರಂದು ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. 2023ರ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮಯದಲ್ಲೇ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷಾಗಿದೆ. ಮತ್ತೆ ಅಧಿಕಾರಕ್ಕೇರುವ ಪ್ರಯತ್ನದಲ್ಲಿರುವ ಬಿಜೆಪಿ ರಾಜ್ಯದ ಜನರಿಗೆ ಭರ್ಜರಿ ಕೊಡುಗೆ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರ 2023-24ನೇ ಸಾಲಿನ ರಾಜ್ಯ ಬಜೆಟ್ ಮಹತ್ವ ಪಡೆದುಕೊಂಡಿದೆ.
ಫೆಬ್ರವರಿ 10 ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಫೆಬ್ರವರಿ 17 ಕ್ಕೆ ರಾಜ್ಯ ಬಜೆಟ್ ಮಂಡನೆ ಆಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರನ್ನು ಸೆಳೆಯಲು ಬಜೆಟ್ ಮಂಡನೆ ಮಾಡುವ ನಿರೀಕ್ಷೆಗಳಿವೆ. ಎಲೆಕ್ಷನ್ ಇರುವುದರಿಂದ ಒಳ್ಳೊಳ್ಳೆ ಯೋಜನೆಗಳನ್ನು ಘೋಷಣೆಯಾಗಲಿವೆ ಎಂದು ಜನರು ಸಹ ಬೆಟ್ಟದಷ್ಟು ನಿರೀಕ್ಷೆಗಳಿನ್ನಿಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಸಹ ಮುಂಬರುವ ಎಲೆಕ್ಷನ್ ಗಮನದಲ್ಲಿಟ್ಟುಕೊಂಡೇ ಬಜೆಟ್ ಮಂಡಿಸುತ್ತಾರೆ. ಅದರಂತೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಲೆಕ್ಷನ್ ಬಜೆಟ್ ನೀಡುವ ಸಾಧ್ಯೆತಗಳು ಹೆಚ್ಚಿವೆ.
ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಭರ್ಜರಿ ಘೋಷಣೆ ಸಾಧ್ಯತೆ
ಕೇವಲ ರಾಜ್ಯ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಮಾತ್ರವಲ್ಲದೇ ಬಿಬಿಎಂಪಿ ಚುನಾವಣೆ ಸಹ ಮುಂದೆ (BBMP Elections) ಬರುತ್ತಿದೆ ಮತ್ತು ಬಸವರಾಜ ಬೊಮ್ಮಾಯಿಯವರ ಬಳಿಯಲ್ಲೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಇದೆ. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆ ಆಗಿವೆ. ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ ಹಳ್ಳಿಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಕೊಡಲೇಬೇಕಾಗಿದೆ. ಆದುದರಿಂದ ರಾಜಧಾನಿ ಬೆಂಗಳೂರಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡುವ ನಿರೀಕ್ಷೆ ಇದೆ.
ಕುಟುಂಬ ಸಲಹಲು ಕಷ್ಟ ಪಡುತ್ತಿರುವ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶ, ರೈತರ ಜಮೀನುಗಳಿಗೆ ನೀರಾವರಿ ಯೋಜನೆ, ಅಂಗವಿಕಲರಿಗೆ, ಬಡವರಿಗೆ, ವಯಸ್ಕರರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಗಳಿವೆ. ಕೋವಿಡ್ ನಂತರದ, ಅಬಕಾರಿ ಇಲಾಖೆ ಸೇರಿದಂತೆ ತೆರಿಗೆ ಸಂಗ್ರಹಣೆಗಳು ಗಮನಾರ್ಹವಾಗಿ ಹೆಚ್ಚಾದ ಕಾರಣ, ಬೊಮ್ಮಾಯಿ ಅವರು ಈ ಬಾರಿ ಅನೇಕ ಹೊಸ ಯೋಜನೆಗಳನ್ನು ಘೋಷಿಸಲಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಗಾತ್ರವು ದೊಡ್ಡದಾಗಿರಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ಬಾರಿ ಜನಪರ ಬಜೆಟ್ ನೀಡಿದಂತೆ ಈ ಬಾರಿಯೂ ಜನಪರ ಆಯವ್ಯಯ ನೀಡಲಾಗುವುದು. ಇಡೀ ಕರ್ನಾಟಕವೇ ಬಜೆಟ್ ನಿರೀಕ್ಷೆ ಮಾಡಬಹುದು ಎಂದು ಸ್ವತ್ವಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎಲ್ಲಾ ಕ್ಷೇತ್ರಗಳನ್ನು ಗಮನದಲ್ಲಿರಿಸಿ ಈ ಬಾರಿ ಸೂಕ್ಷ್ಮ ಬಜೆಟ್ ಮಂಡನೆಯಾಗಲಿದ್ದು, ಕರಾವಳಿಗೆ ಭಾಗಕ್ಕೆ ಸೂಕ್ತ ಅನುದಾನ ನೀಡುವುದಾಗಿ ಸಹ ಈಗಾಗಲೇ ಸಿಎಂ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಚಿತ್ತ ಬೊಮ್ಮಾಯಿ ಬಜೆಟ್ನತ್ತ ನೆಟ್ಟಿದೆ.
ಒಟ್ಟಿನಲ್ಲಿ ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಮಂಡಿನೆ ಮಾಡುತ್ತಿರುವುದು ವಿಶೇಷವಾಗಿದ್ದು, ಒಳ್ಳೊಳ್ಳೆ ಯೊಜನೆಗಳು ಘೋಷಣೆಯಾಗು ನಿರೀಕ್ಷೆಗಳಿವೆ. ಮತದಾರರನ್ನು ಸೆಳೆಯಲು ಸಿಎಂ ಬೊಮ್ಮಾಯಿ ಯಾವುದಕ್ಕೆಲ್ಲ ಪ್ರಾಮುಖ್ಯತೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.
Published On - 6:20 am, Fri, 10 February 23