ನನ್ನ ಮಗಳ ಹೇಳಿಕೆ ಪಡೆಯುವಾಗ ಕಾಂಗ್ರೆಸ್ ಪದಾಧಿಕಾರಿ ಯಾಕೆ ಉಪಸ್ಥಿತರಿದ್ದರು? ಇದು ಕಾನೂನು ಬಾಹಿರ ಪ್ರಕ್ರಿಯೆ: ಸಿಡಿ ಸಂತ್ರಸ್ತೆಯ ತಂದೆಯಿಂದ ಆರೋಪ
ಇನ್ನು ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ವೈದ್ಯಕೀಯ ಪರೀಕ್ಷೆಯೇ ಮುಖ್ಯ. ಆದರೆ ನನ್ನ ಮಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸದೆ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ನಾನು, ಕುಟುಂಬದ ಸದಸ್ಯರು, ಪುತ್ರಿ ರಾಜಕೀಯದ ಬಲಿಪಶುಗಳಾಗಿದ್ದೇವೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಸಿಡಿ ಸಂತ್ರಸ್ತೆಯ ನಿನ್ನೆಯಷ್ಟೇ ಜಡ್ಜ್ ಎದುರು ಬಂದು ದೂರಿನ ರೂಪದಲ್ಲಿ ಹೇಳಿಕೆ ನೀಡಿದ್ದಳು. ಆದರೆ ಇದೀಗ ಆಕೆಯ ತಂದೆ ಈ ಹೇಳಿಕೆಯನ್ನು ಪರಿಗಣಿಸಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಅಂತಿಮ ಆದೇಶದವರೆಗೂ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳ ಹೇಳಿಕೆಯನ್ನು ಪಡೆಯುವಾಗ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಉಪಸ್ಥಿತಿ ಇದ್ದಿದ್ದು ಯಾಕೆಂದು ಪ್ರಶ್ನೆ ಮಾಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರೆ, ನನ್ನ ಮಗಳು ಹೇಳಿಕೆ ನೀಡುವಾಗ ಸೂರ್ಯಮುಕುಂದ ರಾಜ್ ಇರುವುದು ಸ್ಪಷ್ಟವಾಗುತ್ತದೆ. ಸಿಆರ್‌ಪಿಸಿ 164ರಡಿ ಹೇಳಿಕೆ ದಾಖಲು ಮಾಡಿಕೊಳ್ಳುವಾಗ ಕಾಂಗ್ರೆಸ್ ಪದಾಧಿಕಾರಿ ಇದ್ದಿದ್ದು ಯಾಕೆ? ನನ್ನ ಮಗಳ ಹೇಳಿಕೆ ದಾಖಲು ಪ್ರಕ್ರಿಯೆಯೇ ಕಾನೂನು ಬಾಹಿರವಾಗಿದೆ. ಆಕೆಯ ಗೌರವ-ಘನತೆ, ವ್ಯಕ್ತಿತ್ವಕ್ಕೆ ಧಕ್ಕೆ ತರುವ ಬೆಳವಣಿಗೆ ನಡೆದಿದೆ ಎಂದು ಹೈಕೋರ್ಟ್ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ ಮುಖ್ಯ ಇನ್ನು ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ವೈದ್ಯಕೀಯ ಪರೀಕ್ಷೆಯೇ ಮುಖ್ಯ. ಆದರೆ ನನ್ನ ಮಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸದೆ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ನಾನು, ಕುಟುಂಬದ ಸದಸ್ಯರು, ಪುತ್ರಿ ರಾಜಕೀಯದ ಬಲಿಪಶುಗಳಾಗಿದ್ದೇವೆ. ನಮ್ಮ ಕುಟುಂಬದ ಘನತೆ, ಗೌರವಕ್ಕೆ ಧಕ್ಕೆ ತರುವ ಎಲ್ಲ ಬೆಳವಣಿಗೆಗಳೂ ಆಗಿವೆ. ಸಂವಿಧಾನದ 21ನೇ ವಿಧಿ ಅಡಿ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದೆಲ್ಲಕ್ಕೂ ಗೃಹ ಇಲಾಖೆ, ಎಸ್‌ಐಟಿ, ಕಬ್ಬನ್ ಪಾರ್ಕ್ ಪೊಲೀಸರೇ ಹೊಣೆ ಎಂದು ಅರ್ಜಿಯಲ್ಲಿ ತಿಳಿಸಿರುವ ಯುವತಿಯ ತಂದೆ, ಸಿಆರ್‌ಪಿಸಿ 164 ಹೇಳಿಕೆ ರದ್ದುಪಡಿಸಲು ಮನವಿ ಮಾಡಿದ್ದಾರೆ. ನಾವೀಗ ಬೇರೆ ದಾರಿ ಕಾಣದೆ ಹೈಕೋರ್ಟ್ ಮೆಟ್ಟಿಲೇರಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಸಿಡಿ ಸಂತ್ರಸ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಗಳ ಹೇಳಿಕೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ತಂದೆ
Published On - 7:38 pm, Wed, 31 March 21