ದೇಶದ ಹಿರಿಯ ನಾಗರಿಕರಿಗೆ ಸಿಗುತ್ತಾ ಬಿಗ್ ರಿಲೀಫ್? ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ಸಲಹೆ
ಕರ್ನಾಟಕ ಹೈಕೋರ್ಟ್, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 9 ರ 10 ಸಾವಿರ ರೂ ಭತ್ಯೆ ಮಿತಿಯನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆಧುನಿಕ ಜೀವನ ವೆಚ್ಚದ ಏರಿಕೆಯನ್ನು ಗಮನಿಸಿ, ಈ ಮಿತಿಯನ್ನು ಪ್ರಕರಣಕ್ಕೆ ಅನುಗುಣವಾಗಿ ಹೆಚ್ಚಿಸುವಂತೆ ಸೂಚಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 11: ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 9ಅನ್ನು ಮರುಪರಿಶೀಲಿಸುವಂತೆ ಕರ್ನಾಟಕ (Karnataka) ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗಿರುವ 10 ಸಾವಿರ ಮಿತಿಯನ್ನು ಆಯಾ ಪ್ರಕರಣಗಳಿಗೆ ಅನುಗುಣವಾಗಿ ವಾಸ್ತವಾಂಶಗಳ ಆಧಾರದಡಿ ಏರಿಕೆ ಮಾಡಲು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಆ ಮೂಲಕ ದೇಶಾದ್ಯಂತ ಹಿರಿಯ ನಾಗರಿಕರಿಗೆ ಹೈಕೋರ್ಟ್ನ (High Court) ಈ ನಿರ್ಧಾರ ಸಂತಸ ತಂದಿದೆ.
ಪೋಷಕರು ಅಥವಾ ಹಿರಿಯರಿಗೆ ನೀಡಲಾಗುವ ಮಾಸಿಕ ಭತ್ಯಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ: ಹೈಕೋರ್ಟ್ಗೆ ಮತ್ತೆರಡು ಪಿಐಎಲ್ ಸಲ್ಲಿಕೆ
ಈ ಕಾಯ್ದೆಯು 2007 ಡಿಸೆಂಬರ್ 29 ರಂದು ಜಾರಿಗೆ ಬಂದಿರುವುದನ್ನು ಪೀಠವು ಗಮನಿಸಿದೆ. ಈ ನಿಬಂಧನೆಗಳು ಹಲವು ತಿದ್ದುಪಡಿಗಳಿಗೆ ಒಳಗಾಗಿವೆ. ಇದನ್ನು 2019ರ ಕಾಯ್ದೆ 34ರ ಮೂಲಕ ತಿದ್ದುಪಡಿ ಮಾಡಲಾಗಿದೆ. ಆದರೆ ಒಂದು ನಿಬಂಧನೆಯು ಹಾಗೆಯೇ ಉಳಿದಿದೆ.
2007ರಲ್ಲಿ ಹಿರಿಯರ ಅಗತ್ಯತೆಗಳು ಇದ್ದಂತೆ ಈಗ ಇಲ್ಲ. 18 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಾಗಿವೆ. ಜೀವನ ವೆಚ್ಚದಲ್ಲಿ ಅಪಾರ ಏರಿಕೆ ಆಗಿದೆ. 2007ರಲ್ಲಿ ಹತ್ತು ಸಾವಿರ ರೂ ಸಾಕಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಅದು ಯಾವುದಕ್ಕೂ ಸಾಲುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸದ್ಯ ಆಧುನಿಕ ಜೀವನದಲ್ಲಿ ಆಹಾರ, ವಸತಿ, ಔಷಧ ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆ ಆಗಿದೆ. ಆದರೆ ಪೋಷಕರ ಪಾಲನೆಯ ಭತ್ಯೆದ ಮಿತಿ ಮಾತ್ರ ಹತ್ತು ಸಾವಿರ ರೂ ದಾಟಿಲ್ಲ. ನಿರ್ವಹಣೆ ಅಷ್ಟು ಕಡಿಮೆ ಇರುವುದರಿಂದ ಕಾಯ್ದೆಯ ಉದ್ದೇಶಗಳು ಸಾಧಿಸಲು ಸಾಧ್ಯವೇ? ಸೆಕ್ಷನ್ 9 ರ ಮಿತಿಯೊಳಗೆ ನಾಗರಿಕನು ಘನತೆ, ಜೀವನಾಧಾರ ಮತ್ತು ವೈದ್ಯಕೀಯ ಸಹಾಯವನ್ನು ಪಡೆಯಬಹುದೆ ಎಂದು ನ್ಯಾಯಲಯ ಪ್ರಶ್ನಿಸಿದೆ. ಇದಕ್ಕೆ ಚಿಂತನೆ ಅಗತ್ಯವಿದೆ. ಒಂದು ವೇಳೆ ಕಡೆಗಣಿಸಿದರೇ ಹಿರಿಯರ ಜೀವನವನ್ನು ‘ಪ್ರಾಣಿಗಳ ಅಸ್ತಿತ್ವಕ್ಕೆ ಇಳಿಸಿದಂತ್ತಾಗುತ್ತದೆ’ ಎಂದು ಪೀಠವೂ ಎಚ್ಚರಿಕೆ ನೀಡಿದೆ.
ಪ್ರಕರಣ ಏನು?
ಬೆಂಗಳೂರಿನ ಜಯನಗರ ಮೂಲದ ವೃದ್ಧ ದಂಪತಿ ಮತ್ತು ಅವರ ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಸಕ್ಷಮ ಪ್ರಾಧಿಕಾರದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ವಿಚಾರಣೆ ಮಾಡಿದ್ದರು. ಅರ್ಜಿದಾರರು ತಮ್ಮ ಪೋಷಕರಿಗೆ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ 5 ಲಕ್ಷ ರೂ ಪರಿಹಾರವನ್ನು ಪಾವತಿಸಬೇಕೆಂದು ನಿರ್ದೇಶಿಸಿ ನ್ಯಾಯಮಂಡಳಿಯ ಸಹಾಯಕ ಆಯುಕ್ತರು ಆದೇಶಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಇನ್ಮುಂದೆ ಜಿಬಿಎ ವ್ಯಾಪ್ತಿಯಲ್ಲಿ 1200 ಚದರ ಅಡಿ ವರೆಗಿನ ನಿವೇಶನಗಳ ವಸತಿ ಕಟ್ಟಡಗಳಿಗೆ ಒಸಿ, ಸಿಸಿ ಅಗತ್ಯವಿಲ್ಲ!
ಈ ಆದೇಶವನ್ನು ಪ್ರಶ್ನಿಸಿ ವೃದ್ಧ ದಂಪತಿಯ ನಾಲ್ವರು ಗಂಡು ಮಕ್ಕಳು ಮತ್ತು ಓರ್ವ ಸೊಸೆ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ಮಾಡಿದರು. ವೃದ್ಧ ದಂಪತಿಯ ಪರವಾಗಿ ಹೈಕೋರ್ಟ್ ವಕೀಲ್ ಎಂ. ವಿನೋದ್ ಕುಮಾರ್ ವಾದ ಮಂಡಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:52 am, Thu, 11 September 25
