ಏಪ್ರಿಲ್ ಅಂತ್ಯಕ್ಕೆ ಹೆಮ್ಮಾರಿ ಆಟ ಅಂತ್ಯ?
ಅಬ್ಬರಿಸಿ ಬೊಬ್ಬಿರಿದಿದ್ದ ಕೊರೊನಾ ಸದ್ಯ ಪತನದ ಹಾದಿ ಹಿಡಿದಿದೆ . ಸಾವಿನ ಸರಪಳಿ ಆರಂಭಿಸಿದ್ದ ಸೋಂಕು, ಈಗ ತಾನೇ ಸಾವಿನ ಮನೆಗೆ ಹತ್ತಿರವಾಗ್ತಿದೆ. ಅಷ್ಟಕ್ಕೂ ಕೊರೊನಾ ಯಾವಾಗ್ ಎಂಡ್ ಆಗುತ್ತೇ ಅನ್ನೋ ಬಗ್ಗೆ ತಜ್ಞರು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು: ಒಂದು ಎರಡು ಅಂತಾ ರಾಜ್ಯದೊಳಗೆ ಕಾಲಿಟ್ಟಿದ್ದ ಕೊರೊನಾ, ಇಡೀ ಕರುನಾಡನ್ನೇ ಕಂಟ್ರೋಲ್‌ಗೆ ತೆಗೆದುಕೊಂಡು ಬಿಡ್ತು. ಅದ್ರಲ್ಲೂ ಬೆಂಗಳೂರನ್ನೇ ರಾಜಧಾನಿ ಮಾಡಿಕೊಂಡು ಅಬ್ಬರಿಸ ತೊಡಗಿತ್ತು. ಹೀಗೆ ಹತ್ತು ತಿಂಗಳಿಂದ ಆರ್ಭಟಿಸಿದ್ದ ಕೊರೊನಾ ಮರೆಯಾಗು ಸಮಯ ಬಂದಿದೆ. ಗಂಟುಮೂಟೆ ಸಮೇತ ಕಾಲ್ಕಿಳ್ಳೋ ದಿನ ಹತ್ತಿರವಾಗ್ತಿದೆ.
ಕ್ರೂರಿಯ ಗ್ರಾಫ್ ನೋಡಿ ಭವಿಷ್ಯ ನುಡಿದ ತಜ್ಞರು! ಒಂದೇ ದಿನ 10 ಜನರಿಗೆ ಕೊರೊನಾ.. ಒಂದೇ ದಿನ ನೂರು ಜನ. ಐನೂರು.. ಸಾವಿರ ಅಂತಾ ರಾಜ್ಯದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿತ್ತು . ಹೀಗೆ ತನ್ನ ಶಕ್ತಿಯನ್ನ ವೃದ್ಧಿಸಿಕೊಂಡು ಹೊರಟಿದ್ದ ಕೊರೊನಾ ಇದುವರೆಗೆ 9 ಲಕ್ಷದ 37 ಸಾವಿರ ಜನರ ಮೇಲೆ ಅಟ್ಯಾಕ್ ಮಾಡಿದೆ. ಆದ್ರಲ್ಲೂ ಬೆಂಗಳೂರಿನಲ್ಲೇ ಇದುವರೆಗೆ 3 ಲಕ್ಷದ 97 ಸಾವಿರ ಜನ ಸೋಂಕಿತರಾಗಿದ್ದಾರೆ. ಈ ಅಂಕಿ ಅಂಶಗಳ ನಡುವೆ ಸದ್ಯ ಕೊರೊನಾ ಅಲೆ ಕಡಿಮೆಯಾಗ್ತಿದೆ. ನಿತ್ಯ ಸಾವಿರ ಸಾವಿರ ಬರ್ತಿದ್ದ ಸೋಂಕಿತರ ಸಂಖ್ಯೆ ಈಗ ನೂರಕ್ಕೆ ಇಳಿದಿದೆ. ಎರಡು ತಿಂಗಳ ಈ ಇಳಿಮುಖದ ಗ್ರಾಫ್ ನೋಡಿರೋ ತಜ್ಞರು, ಕ್ರೂರಿಯ ಸ್ಥಿತಿ ಹೀಗೆ ಮುಂದುವರಿದ್ರೆ ಏಪ್ರಿಲ್ ಅಂತ್ಯಕ್ಕೆ ಕೊರೊನಾದಿಂದ ಮುಕ್ತವಾಗ್ತೀವಿ ಅಂತಿದ್ದಾರೆ.
ರಾಜ್ಯದಲ್ಲಿ ಎರಡನೇ ಅಲೆ ಠುಸ್ ಅಷ್ಟಕ್ಕೂ ವಿಶ್ವದ ವಿವಿದ ರಾಷ್ಟ್ರಗಳಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದಿದ್ರೂ, ಬಳಿಕ ಎರಡನೇ ಅಲೆ ಆರ್ಭಟ ಸೃಷ್ಟಿಸಿತ್ತು. ಅದ್ರಲ್ಲೂ ಇಂಗ್ಲೆಂಡ್ ಮತೇ ಲಾಕ್ ಆಗಿತ್ತು . ಆದ್ರೆ ದೇಶದಲ್ಲಿ ಅದ್ರಲ್ಲೂ ರಾಜ್ಯದಲ್ಲಿ ಎರಡನೇ ಅಲೆಯ ಆಟ ಠುಸ್ ಆಗಿದೆ. ಇಂಗ್ಲೆಂಡ್‌ನಿಂದ ವಕ್ಕರಿಸಿದ್ದ ಬೇರೆ ತಳಿಯ ಕೊರೊನಾ ಇಷ್ಟೊತ್ತಿಗಾಗಲೇ ಆಟ ಶುರು ಮಾಡಬೇಕಿತ್ತು. ಆದ್ರೆ ಅದು ಅಷ್ಟೊಂದು ಪ್ರಮಾಣದಲ್ಲಿ ಪರಿಣಾಮ ಬೀರಿಲ್ಲ. ಇದ್ರ ನಡುವೆ ಸದ್ಯ ವ್ಯಾಕ್ಸಿನ್ ಕೂಡಾ ಎಂಟ್ರಿಯಾಗಿದೆ. ಹೀಗಾಗಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಕತೆ ಮುಗಿಯಬಹುದು ಅನ್ನೋದು ತಜ್ಞರ ನಿರೀಕ್ಷೆ.
ಒಟ್ನಲ್ಲಿ ನಿತ್ಯ ಸಾವಿರ ಸಂಖ್ಯೆಯನ್ನೇ ಹೊತ್ತು ಬರ್ತಿದ್ದ ಕೊರೊನಾ, ಈಗ ನೂರಕ್ಕೆ ಇಳಿದಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ಇವತ್ತು ಕೇವಲ 227 ಜನ ಮಾತ್ರ ಸೋಂಕಿತರಾಗಿದ್ದಾರೆ. ಹೀಗೆ ಪತನದ ಹಾದಿ ಇಡಿದಿರೋ ಸೋಂಕು ಇನ್ನೂ ಮೂರು ತಿಂಗಳಲ್ಲಿ ಮುಕ್ತಿ ನೀಡಲಿದೆ.
Published On - 7:08 am, Thu, 28 January 21