AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಘಟನೆ: ಇಬ್ಬರು ಬಾಲಕರು ನದಿಪಾಲು, ಮಗನ ರಕ್ಷಣೆಗೆ ಹೋದ ತಾಯಿ ಜಲಸಮಾಧಿ

ಕರ್ನಾಟಕದಲ್ಲಿ (ಇಂದು)ಡಿಸೆಂಬರ್ 09) ಒಂದೇ ದಿನ ನಾಲ್ವರು ನೀರುಪಾಲಾಗಿದ್ದಾರೆ. ಕಾಲು ಜಾರಿ ಕೆರೆಗೆ ಬಿದ್ದ ಮಗನನ್ನು ರಕ್ಷಣೆ ಮಾಡಲು ಹೋಗಿ ತಾಯಿಯೂ ಸಹ ಜಲಸಮಾಧಿಯಾಗಿದ್ದಾಳೆ. ಮತ್ತೊಂದೆಡೆ ಈಜಾಡಲು ಹೋಗಿದ್ದ ಇಬ್ಬರು ಬಾಲಕರು ನದಿಪಾಲಾಗಿದ್ದಾರೆ. ಈ ಪ್ರತ್ಯೇಕ ಘಟನೆಯ ವಿವರ ಇಲ್ಲಿದೆ.

ಪ್ರತ್ಯೇಕ ಘಟನೆ: ಇಬ್ಬರು ಬಾಲಕರು ನದಿಪಾಲು, ಮಗನ ರಕ್ಷಣೆಗೆ ಹೋದ ತಾಯಿ ಜಲಸಮಾಧಿ
TV9 Web
| Edited By: |

Updated on:Dec 09, 2024 | 7:55 PM

Share

ರಾಯಚೂರು, (ಡಿಸೆಂಬರ್ 09): ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯು ಸಹ ಜಲಸಮಾಧಿಯಾಗಿರುವ ಘಟನೆ ರಾಯಚೂರು (Raichuru) ಜಿಲ್ಲೆಯ ಮಲಿಯಾಬಾದ್ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮಲಿಯಾಬಾದ್ (Maliabad) ಗ್ರಾಮದ ನಿವಾಸಿ ತಾಯಿ ರಾಧಮ್ಮ (32) ಹಾಗೂ ಮಗ ಕೆ.ಸಂಜು (5) ಎಂದು ಗುರುತಿಸಲಾಗಿದೆ. ರಾಧಮ್ಮ ಇಂದು (ಡಿಸೆಂಬರ್ 09) ತನ್ನ ಪುತ್ರನನ್ನು ಕರೆದುಕೊಂಡು ಸಂಜು ಬಟ್ಟೆ ತೊಳೆಯಲೆಂದು ಕೆರೆ ಹೋಗಿದ್ದಾಳೆ. ಆ ವೇಳೆ ಸಂಜು ಕಾಲು ಜಾರಿ ಕರೆಯೊಳಗೆ ಬಿದ್ದಿದ್ದಾನೆ. ಕೂಡಲೇ ತಾಯಿ ರಾಧಮ್ಮ ಸಹ ಸಂಜುನನ್ನು ಕಾಪಾಡಲು ಹೋಗಿ ಜಲಸಮಾಧಿಯಾಗಿದ್ದಾಳೆ.

5 ವರ್ಷದ ಸಂಜು ಇನ್ನೂ ಶಾಲೆಗೆ ಕೂಡ ದಾಖಲಾಗಿರಲಿಲ್ಲ. ಹೆತ್ತವರು ಬೆಟ್ಟದಷ್ಟು ಕನಸು ಕಂಡಿದ್ರು. ಆದ್ರೆ, ಎಲ್ಲವೂ ಜಲಸಮಾಧಿ. ನೀವು ಹೀಗೆ ಮಕ್ಕಳನ್ನು ಕರೆದುಕೊಂಡು ಕೆರೆ, ಕಾಲುವೆ, ಹಳ್ಳಗಳಿಗೆ ನೀರು ತರಲೋ ಅಥವಾ ಬಟ್ಟೆ ತೊಳೆಯೋದಕ್ಕೆಂದು ಹೋಗುತ್ತಿದ್ದರೆ ಹುಷಾರಾಗಿರಿ. ಎಲ್ಲಿಗಾದರೂ ಮಕ್ಕಳನ್ನ ಕರೆದುಕೊಂಡು ಹೋಗುವಾಗ ಅವರ ಬಗ್ಗೆ ಹೆಚ್ಚು ಗಮನವಿರಲಿ.

ಮಲಪ್ರಭಾ ನದಿ ಪಾಲಾದ ಇಬ್ಬರು ಬಾಲಕರು

ಬಾಗಲಕೋಟೆ: ಮತ್ತೊಂದೆಡೆ ಬಾಗಕೋಟೆಯಲ್ಲಿ ಮಲಪ್ರಭಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರ ನೀರುಪಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಬಳಿ ಈ ದುರ್ಘಟನೆ ನಡೆದಿದ್ದು.ಹುಚ್ಚೇಶ್ ಗೌಡರ(14), ರಾಜು ಮಡಿಕೇರಿ(12) ಮೃತ ಬಾಲಕರು. ಇನ್ನು ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಮೃತದೇಹಗಳ ಶೋಧಕಾರ್ಯ ನಡೆಸಿದರು. ಅಂತಿಮವಾಗಿ ಇಂದು(ಡಿಸೆಂಬರ್ 09) ಸಂಜೆ ಅಗ್ನಿಶಾಮಕ ಸಿಬ್ಬಂದಿ. ನದಿಯಿಂದ ಬಾಲಕರ ಶವಗಳನ್ನು ಹೊರತೆಗೆದರು.

ಬೈಕ್ ಸವಾರ ಸ್ಥಳದಲ್ಲೇ ಸಾವು

ಬಾಗಲಕೋಟೆ: ಇನ್ನೊಂದೆಡೆ ಕಾರು ಹಾಗೂ ಬೈಕ್ ಮಧ್ಯ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನೀಲನಗೌಡ ಗೌಡರ(45) ಮೃತ ವ್ಯಕ್ತಿ. ಆದ್ರೆ ಕಾರು ನಿಲ್ಲಿಸದೆ ಹೋಗಿದ್ದು, ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಪತ್ತೆಯಾಗಿದೆ. ಕಾರಿನ ನಂಬರ್ ಪ್ಲೇಟ್ ಹಾಗೂ ಅಂಕಲಗಿ‌ಮಠ ಎಂಬ ಬೋರ್ಡ್ ಪತ್ತೆಯಾಗಿದ್ದು, ಇದೊಂದು ಸ್ವಾಮೀಜಿಯವರ ಕಾರು ಎಂದು ಶಂಕೆ ವ್ಯಕೆ ವ್ಯಕ್ತವಾಗಿದೆ. ಹೀಗಾಗಿ ಕಾರಿನಲ್ಲಿ ಸ್ವಾಮೀಜಿಗಳಿದ್ರಾ? ಅಥವಾ ಚಾಲಕ‌ ಮಾತ್ರ ಇದ್ದನಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದು, ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:50 pm, Mon, 9 December 24

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್