ಕಂಠಪೂರ್ತಿ ಕುಡಿದು ಮಹಿಳೆ ರಂಪಾಟ, ಪೊಲೀಸರು ಹೈರಾಣ
ಜುಲೈ 11ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಯುತ್ತಿತ್ತು ಈ ವೇಳೆ ಮಹಿಳೆಯೊಬ್ಬರು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದರು. ಅವರನ್ನು ಹಿಡಿದ ಪೊಲೀಸರು ಹೈರಾಣಾಗಿದ್ದಾರೆ.
ಬೆಂಗಳೂರು: ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಮಹಿಳೆ ರಂಪಾಟ ಮಾಡಿದ ಘಟನೆ ಸಿಲಿನಾಕ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಮಹಿಳೆ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಸುಮಾರು 3 ಗಂಟೆಗಳ ಕಾಲ ನಡು ರಸ್ತೆಯಲ್ಲಿ ಮಹಿಳೆ ತೇಲಾಡಿದ್ದಾರೆ.
ಜುಲೈ 11ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಯುತ್ತಿತ್ತು ಈ ವೇಳೆ ಮಹಿಳೆಯೊಬ್ಬರು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದರು. ಅವರನ್ನು ಹಿಡಿದ ಪೊಲೀಸರು ಹೈರಾಣಾಗಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಮಹಿಳೆ ನಡು ರಸ್ತೆಯಲ್ಲೇ ರಂಪಾಟ ಮಾಡಿದ್ದಾರೆ. ಬುದ್ಧಿ ಹೇಳಿದ ಪೊಲೀಸರಿಗೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಮಹಿಳೆಯ ವಾಹನ ಸೀಜ್ ಮಾಡಿದ್ದ ಕಾರಣ ಆಕೆಯನ್ನು ಆಟೋದಲ್ಲಿ ಕೂರಿಸಿ ಮನೆಗೆ ಕಳಿಸೋಕೆ ಪೊಲೀಸರು ಯತ್ನಿಸಿದ್ರೆ ಅಲ್ಲಿಂದ ಓಡಿ ಹೋಗಿ ಬೀದಿಯಲ್ಲಿ ಬಯಲಾಟವಾಡಿದ್ದಾರೆ. ಎಸ್ಪಿನೇ ಸ್ಥಳಕ್ಕೆ ಬರಬೇಕೆಂದು ಮಹಿಳೆ ರಂಪಾಟ ಮಾಡಿದ್ದಾರೆ.
ಇಂತಹ ಘಟನೆಗಳು ಬೆಂಗಳೂರಿನಲ್ಲಿ ಅಪರೂಪವೇನಲ್ಲ. ಆಗಾಗ ಈ ರೀತಿ ನಡೆಯುತ್ತಲೇ ಇರುತ್ತದೆ. ಮಹಿಳೆಯರು ಕುಡಿದು ನಡು ರಸ್ತೆಗಳಲ್ಲೇ ರಂಪ ರಾದ್ಧಾಂತ ಮಾಡುತ್ತಾರೆ.
ಇದನ್ನೂ ಓದಿ: ಹುಳಿಮಾವು ಬಳಿ ಕುಡುಕನ ರಂಪಾಟ: ಸಿಗರೇಟ್ಗಾಗಿ ಕಿರಿಕ್.. ಪೊಲೀಸರ ಮುಂದೆ ಅಸಭ್ಯ ವರ್ತನೆ
Published On - 10:58 am, Tue, 13 July 21