ರಾಮನಗರದಲ್ಲಿ ತಮಿಳು ರಿಯಾಲಿಟಿ ಶೋಗೆ ಚಾಲನೆ; ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದ ನಟ ವಿಜಯ್ ಸೇತುಪತಿ
Vijay Sethupathi: ನಟ ವಿಜಯ್ ಸೇತುಪತಿ, ನಟ ಸುದೀಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಈ ಹಿಂದೆ ತಾವು ಕನ್ನಡದಲ್ಲಿ ನಟಿಸಿದ್ದ ‘ಅಖಾಡ’ ಚಿತ್ರದ ಡೈಲಾಗ್ ಹೇಳುವ ಮೂಲಕ ಕನ್ನಡದ ಮೇಲಿನ ಪ್ರೀತಿಯನ್ನು ತೊರ್ಪಡಿಸಿದರು.
ರಾಮನಗರ: ದಕ್ಷಿಣ ಭಾರತದ ಸ್ಟಾರ್ ಕಲಾವಿದ ನಟ ವಿಜಯ್ ಸೇತುಪತಿ ಬಹುಭಾಷೆಯಲ್ಲಿ ಫೇಮಸ್. ಅವರ ಕೈಯಲ್ಲಿ ಸಿಕ್ಕಾಪಟ್ಟೆ ಆಫರ್ಗಳಿವೆ. ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿ ಇರುವಾಗಲೇ ಅವರು ಸಿನಿಮಾ ಹೊರತಾದ ಒಂದು ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ(Vijay Sethupathi)ಯವರು ನಿನ್ನೆ ( ಜುಲೈ 12) ಮಾಸ್ಟರ್ ಚೆಫ್ (Master Chef) ಎಂಬ ತಮಿಳಿನ ರಿಯಾಲಿಟಿ ಶೋ ಗೆ ಚಾಲನೆ ನೀಡಿದ್ದಾರೆ. ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಾಲನೆ ನೀಡಿದ್ದು, ಆಗಸ್ಟ್ನಲ್ಲಿ ತಮಿಳಿನ ಖಾಸಗಿ ಚಾನೇಲ್ನಲ್ಲಿ ಈ ಕಾರ್ಯಕ್ರಮ ಮೂಡಿ ಬರಲಿದೆ.
ತಮಿಳಿನಲ್ಲಿ ನಡೆಯುತ್ತಿರುವ ಮಾಸ್ಟರ್ ಚೆಫ್ ಕಾರ್ಯಕ್ರಮನ್ನು ನಟ ವಿಜಯ್ ಸೇತುಪತಿ ನಿರೂಪಿಸಲಿದ್ದಾರೆ. ಹೀಗಾಗಿ ರಾಮನಗರದಲ್ಲಿ ಈ ಅಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇನ್ನು ಕಾರ್ಯಕ್ರಮ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ವಿಜಯ್ ಸೇತುಪತಿ, ತಮಗೂ ಕರ್ನಾಟಕಕ್ಕೂ ಇರುವ ನಂಟನ್ನು ಮೆಲಕು ಹಾಕಿದರು.
ಮಡಿಕೇರಿ ನನಗೆ ಸಾಕಷ್ಟು ಇಷ್ಟುವಾದ ಸ್ಥಳವಾಗಿದೆ. ಈ ಹಿಂದೆ ಬೆಂಗಳೂರು, ಮೈಸೂರಿಗೂ ಕೂಡ ಬಂದಿದೆ. ಅಲ್ಲದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಹಾಗೂ ಮೈಸೂರಿನ ಪ್ಯಾಲೇಸ್ಗೂ ಭೇಟಿ ನೀಡಿದ್ದೇನೆ. ಈ ಸ್ಥಳಗಳು ತುಂಬಾ ಚೆನ್ನಾಗಿದೆ ಎಂದು ತಮಿಳು ನಟ ವಿಜಯ್ ಸೇತುಪತಿ ಅಭಿಪ್ರಾಯ ಹಂಚಿಕೊಂಡರು.
ಬಳಿಕ ಮಾತನಾಡಿದ ನಟ ವಿಜಯ್ ಸೇತುಪತಿ, ನಟ ಸುದೀಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಈ ಹಿಂದೆ ತಾವು ಕನ್ನಡದಲ್ಲಿ ನಟಿಸಿದ್ದ ‘ಅಖಾಡ’ ಚಿತ್ರದ ಡೈಲಾಗ್ ಹೇಳುವ ಮೂಲಕ ಕನ್ನಡದ ಮೇಲಿನ ಪ್ರೀತಿಯನ್ನು ತೊರ್ಪಡಿಸಿದರು.
ಇದನ್ನೂ ಓದಿ: ವಿಜಯ್ ಸೇತುಪತಿ ಮೇಲೆ ಕಣ್ಣಿಟ್ಟ ‘ದಿ ಫ್ಯಾಮಿಲಿ ಮ್ಯಾನ್’ ತಂಡ; 3ನೇ ಸೀಸನ್ನಲ್ಲಿ ಬಿಗ್ ಸರ್ಪ್ರೈಸ್?
ಹುಟ್ಟುಹಬ್ಬದಂದು ತಲ್ವಾರ್ನಲ್ಲಿ ಕೇಕ್ ಕತ್ತರಿಸಿ ವಿವಾದ ಸೃಷ್ಟಿಸಿದ ನಟ ವಿಜಯ್ ಸೇತುಪತಿ..
Published On - 10:57 am, Tue, 13 July 21