ಕಾಮಗಾರಿ ಬಿಲ್ ಬಾಕಿ: ಬಿಬಿಎಂಪಿ ವಿರುದ್ಧ ಸಮರ ಸಾರಿದ ಗುತ್ತಿಗೆದಾರರು

ಬಾಕಿ ಬಿಲ್​ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್​ಗೂ ಗುತ್ತಿಗೆದಾರರು ಮನವಿ ಮಾಡಿದ್ದಾರೆ. ಇನ್ನೂ ಬಾಕಿ ಪಾವತಿಯಾಗದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಿ ನಾಳೆ ಮುಷ್ಕರಕ್ಕೆ ಗುತ್ತಿಗೆದಾರರು ಮುಂದಾಗಿದ್ದಾರೆ.  ಇನ್ನು ನಾಳೆಯಿಂದ ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನಲ್ಲಿ ಪಾಲಿಕೆ ಕಾಮಗಾರಿಗಳಿಗೆ ಬ್ರೇಕ್ ಬೀಳಲಿದೆ.

ಕಾಮಗಾರಿ ಬಿಲ್ ಬಾಕಿ: ಬಿಬಿಎಂಪಿ ವಿರುದ್ಧ ಸಮರ ಸಾರಿದ ಗುತ್ತಿಗೆದಾರರು
ಕಾಮಗಾರಿ ಬಿಲ್ ಬಾಕಿ : ಬಿಬಿಎಂಪಿ ವಿರುದ್ಧ ಸಮರ ಸಾರಿದ ಗುತ್ತಿಗೆದಾರರು
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 01, 2024 | 4:14 PM

ಬೆಂಗಳೂರು, ಆಗಸ್ಟ್​ 01: ಬಿಬಿಎಂಪಿ (BBMP) ವ್ಯಾಪ್ತಿಯ ಕಾಮಗಾರಿಗಳ ಶೇ.25ರಷ್ಟು ಬಿಲ್ ಬಾಕಿ ಹಿನ್ನೆಲೆ ಬಿಬಿಎಂಪಿ ಗುತ್ತಿಗೆದಾರರು ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಕಳೆದ 2 ವರ್ಷದಿಂದ ಬರೋಬ್ಬರಿ 1,600 ಕೋಟಿ ರೂ. ಹಣವನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದೆ. ಶೇ.75ರಷ್ಟು ಕಾಮಗಾರಿ ಬಿಲ್ ಮಾತ್ರ ಪಾಲಿಕೆ ಪಾವತಿಸಿದ್ದು, ಉಳಿದ ಶೇಕಡಾ 25ರಷ್ಟು ಬಿಲ್​ ಪಾವತಿಗೆ ಗುತ್ತಿಗೆದಾರರು ಒತ್ತಾಯಿಸಿದ್ದಾರೆ.

ಬಾಕಿ ಬಿಲ್​ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್​ಗೂ ಗುತ್ತಿಗೆದಾರರು ಮನವಿ ಮಾಡಿದ್ದಾರೆ. ಇನ್ನೂ ಬಾಕಿ ಪಾವತಿಯಾಗದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಿ ನಾಳೆ ಮುಷ್ಕರಕ್ಕೆ ಗುತ್ತಿಗೆದಾರರು ಮುಂದಾಗಿದ್ದಾರೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ

ಇನ್ನು ನಾಳೆಯಿಂದ ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನಲ್ಲಿ ಪಾಲಿಕೆ ಕಾಮಗಾರಿಗಳಿಗೆ ಬ್ರೇಕ್ ಬೀಳಲಿದೆ. ಪಾಲಿಕೆಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗೆ ಬ್ರೇಕ್ ಬೀಳಲಿದೆ. ಬಾಕಿ ಬಿಲ್ ಪಾವತಿಯಾಗುವ ತನಕ ಕಾಮಗಾರಿ ಸ್ಥಗಿತಕ್ಕೆ ಚಿಂತನೆ ಮಾಡಲಾಗುತ್ತಿದೆ.

ಯಾವ ಯಾವ ಕಾಮಕಾರಿ ಸ್ಥಗಿತ

  • ರಸ್ತೆ ಕಾಮಗಾರಿ
  • ಮೂಲಭೂತ ಸೌಕರ್ಯ ವಿಭಾಗದ ಕಾಮಗಾರಿಗಳು
  • ವಾರ್ಡ್ ಮಟ್ಟದ ನಿರ್ವಹಣಾ ಕಾಮಗಾರಿಗಳು
  • ಬೃಹತ್ ನೀರುಗಾಲುವೆ
  • ವೈಟ್ ಟಾಪಿಂಗ್ ಕಾಮಗಾರಿ
  • ಬಿಬಿಎಂಪಿ ಎಲೆಕ್ಟ್ರಿಕ್ ವಿಭಾಗದ ಕಾಮಗಾರಿಗಳು

ಬಿಬಿಎಂಪಿ ಗುತ್ತಿಗೆದಾರರ ಪತ್ರದಲ್ಲೇನಿದೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಅನುದಾನದ ಅಡಿಯಲ್ಲಿ ಮತ್ತು ಸರ್ಕಾರದ ಅನುದಾನದ ಅಡಿಯಲ್ಲಿ ನಿರ್ವಹಿಸಿರುವ ಕಾಮಗಾರಿಗಳಿಗೆ ಪಾವತಿಸಬೇಕಾದ ಬಿಲ್ಲುಗಳಲ್ಲಿ ಶೇ.25% ರಷ್ಟು ಹಣವನ್ನು ತಡೆಹಿಡಿದು, ಶೇ.75% ರಷ್ಟು ಹಣವನ್ನು ಮಾತ್ರ ಪಾವತಿ ಮಾಡಲಾಗುತ್ತಿರುತ್ತದೆ (ಇದರಲ್ಲಿ ಪೂರ್ಣ ಮೊತ್ತಕ್ಕೆ ಬಿಎಸ್‌ಟಿ 18% ಮತ್ತು ಇತರೆ ಕಟಾವಣೆಗಳೂ ಒಳಗೊಂಡಿದೆ) ಬಿಲ್ ಸಲ್ಲಿಸಿ 3 ವರ್ಷಗಳಾದರೂ ಸಹ ಬಿಲ್ಲಿನ ಸಂಪೂರ್ಣ ಹಣ ಗುತ್ತಿಗೆದಾರರಿಗೆ ಪಾವತಿಯಾಗದೇ ಇರುವ ಕಾರಣ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: ಬ್ಯಾನ್ ಆದ್ರೂ ಸಿಂಥೆಟಿಕ್ ಡೈ ಕಲರ್ ಬಳಕೆ: ಮಕ್ಕಳ ಹೊಟ್ಟೆ ಸೇರ್ತಿದೆ ಸ್ಲೋ ಪಾಯಿಸನ್

ಗುತ್ತಿಗೆದಾರರು ಬ್ಯಾಂಕ್ ಹಾಗೂ ಇತರೆ ಮೂಲಗಳಿಂದ ಸಾಲ ಮಾಡಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ನೀಡುತ್ತಿರುವ ಶೇ.75% ರಷ್ಟಲ್ಲಿ ಗುತ್ತಿಗೆದಾರರು ಹಾಕಿರುವ ಬಂಡವಾಳ ಸಹ ಹಿಂದಿರುಗಿರುವುದಿಲ್ಲ. ಇದರಿಂದಾಗಿ ಹಲವು ಗುತ್ತಿಗೆದಾರರುಗಳು ಬ್ಯಾಂಕ್ ಬಡ್ಡಿ ಮತ್ತು ಜಿಎಸ್‌ಟಿ ಪಾವತಿಸಲು ಸಾಧ್ಯವಾಗದೇ ಕಂಗಾಲಾಗಿದ್ದು, ಶೇ.25% ರಷ್ಟು ಬಾಕಿ ಮೊತ್ತವನ್ನು ನೀಡಿದಲ್ಲಿ ಮಾತ್ರ ಗುತ್ತಿಗೆದಾರರು ಸಂಕಷ್ಟದಿಂದ ಪಾರಾಗುವ ಸಾಧ್ಯತೆ ಇದೆ. ಆದುದರಿಂದ ದಯಮಾಡಿ ತಡೆಹಿಡಿದಿರುವ ಬಾಕಿ ಶೇ.25% ರಷ್ಟು ಹಣವನ್ನು ಬಿಡುಗಡೆ ಮಾಡಿ ಗುತ್ತಿಗೆದಾರರಿಗೆ ಪಾವತಿಸಲು ಮುಖ್ಯ ಆಯುಕ್ತರು, ಬಿಬಿಎಂಪಿಯವರಿಗೆ ನಿರ್ದೇಶಿಸುವಂತೆ ಬಿಬಿಎಂಪಿ ಗುತ್ತಿದಾರರ ಸಂಘದ ವತಿಯಿಂದ ತಮ್ಮಲ್ಲಿ ಮನವಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:04 pm, Sun, 1 September 24

‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?