ಆರು ವರ್ಷ ಬಳಿಕ ಯಾದಗಿರಿಯಲ್ಲಿ ಅಗ್ನಿಪಥ ಸೇನಾ ನೇಮಕಾತಿ rally, ಏನಿದರ ವೈಶಿಷ್ಟ್ಯ?

ಆರು ವರ್ಷಗಳ ಬಳಿಕ ಮತ್ತೊಮ್ಮೆ ಯಾದಗಿರಿ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದೆ. ಈ ರ್ಯಾಲಿಯಲ್ಲಿ ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳಿಗೆ ಡಿ. 14 ರ ವರೆಗೆ ನೇಮಕಾತಿ ರ್ಯಾಲಿ ನಡೆಯಲಿದೆ. ಸೇನಾ ನೇಮಕಾತಿ ರ್ಯಾಲಿ‌ ನಡೆಯುವ ಸ್ಥಳದಲ್ಲಿ ಯಾದಗಿರಿ ಜಿಲ್ಲಾ ಪೊಲೀಸರಿಂದ ಪೊಲೀಸ್ ಸಿಬ್ಬಂದಿ ನೇಮಕ ಕೂಡ ಮಾಡಲಾಗಿದೆ.

ಆರು ವರ್ಷ ಬಳಿಕ ಯಾದಗಿರಿಯಲ್ಲಿ ಅಗ್ನಿಪಥ ಸೇನಾ ನೇಮಕಾತಿ rally, ಏನಿದರ ವೈಶಿಷ್ಟ್ಯ?
6 ವರ್ಷ ಬಳಿಕ ಯಾದಗಿರಿ ಜಿಲ್ಲೆಯಲ್ಲಿ ಅಗ್ನಿಪಥ ಸೇನಾ ನೇಮಕಾತಿ rally
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on: Dec 09, 2023 | 9:45 AM

ಆ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ (Army recruitment) ನಡೆಯುತ್ತಿದೆ. ರ್ಯಾಲಿಯಲ್ಲಿ ಸಾವಿರಾರು ಯುವಕರು ಹಾಜರಾಗಿ ದೈಹಿಕ ಪರೀಕ್ಷೆ ಎದುರಿಸುತ್ತಿದ್ದಾರೆ.. ದೇಶ ಸೇವ ಮಾಡಬೇಕಾಗಿ ಏನಾದ್ರು ಕೊಡುಕೆ ನೀಡಬೇಕು ಅಂತ ಯುವಕರು ಪರೀಕ್ಷೆ ದೌಡಾಯಿಸಿದ್ದಾರೆ.. ಲಿಖಿತ ಪರೀಕ್ಷೆ ಬರೆದು ಪಾಸ್ ಆಗಿರುವ ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಪಾಸ್ ಆಗಲು ಮುಂದಾಗಿದ್ದಾರೆ.. ಹಾಗಾದ್ರೆ ಹೇಗೆ ನಡೆಯುತ್ತಿದೆ ಅಗ್ನಿಪಥ ಸೇನಾ ರ್ಯಾಲಿ ಅಂತೀರಾ ಈ ಸ್ಟೋರಿ ನೋಡಿ.. ಯಾದಗಿರಿಯಲ್ಲಿ (Yadgiri) ನಡೆಯುತ್ತಿದೆ ಸೇನಾ ನೇಮಕಾತಿ ರ್ಯಾಲಿ.. ಅಗ್ನಿಪಥ ಸೇನಾ ರ್ಯಾಲಿಗೆ (Agnipath Army recruitment rall) ಹಾಜರಾಗುತ್ತಿದ್ದಾರೆ ಸಾವಿರಾರು ಅಭ್ಯರ್ಥಿಗಳು.. ಆರು ವರ್ಷಗಳ ಬಳಿಕ ಮತ್ತೊಮ್ಮ ಯಾದಗಿರಿಯಲ್ಲಿ ಸೇನಾ ರ್ಯಾಲಿ.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದಲ್ಲಿ.. ಹೌದು ಯಾದಗಿರಿ ಜಿಲ್ಲೆಯಲ್ಲಿ ಆರು ವರ್ಷಗಳ ಬಳಿಕ ಮತ್ತೊಮ್ಮೆ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದೆ.

ಭಾರತೀಯ ರಕ್ಷಣಾ ಇಲಾಖೆಯಿಂದ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ರಾಜ್ಯದ ನಾನಾ ಭಾಗದಿಂದ ಸಾವಿರಾರು ಯುವಕರು ಬಂದು ಹಾಜರಾಗುತ್ತಿದ್ದಾರೆ.. ರಾಷ್ಟ್ರದ ಭದ್ರತೆಗೆ ಕೊಡುಗೆ ನೀಡಲು ಮತ್ತು ಸಮರ್ಪಣೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಲು ಯುವಕರು ಮುಂದಾಗುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಅಗ್ನಿಪಥ ಸೇನಾ ನೇಮಕಾತಿಗಾಗಿ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗಳನ್ನ ಬರೆದಿದ್ದಾರೆ. ಪರೀಕ್ಷೆಯಲ್ಲಿ ಅರ್ಹತೆಯನ್ನ ಪಡೆದವರಿಗೆ ದೈಹಿಕ ಪರೀಕ್ಷೆಯಲ್ಲಿ ಹಾಜರಾಗಲು ಅನುಮತಿ ನೀಡಲಾಗಿದೆ. ಹೀಗಾಗಿ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಸಾವಿರಾರು ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಹಾಜರಾಗುತ್ತಿದ್ದಾರೆ.. ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಇದೆ ಡಿಸೆಂಬರ್ 4 ರಿಂದ ಸೇನಾ ನೇಮಕಾತಿ ರ್ಯಾಲಿ ನಡೆದಿದೆ. ನಿತ್ಯ ಸಾವಿರಾರು ಅಭ್ಯರ್ಥಿಗಳ ದೈಹಿಕ ಪರೀಕ್ಷೆಯನ್ನ ನಡೆಸಲಾಗುತ್ತಿದೆ. ಡಿಸೆಂಬರ್ 4 ರಿಂದ ಡಿಸೆಂಬರ್ 14 ರ ವರೆಗೆ ನೇಮಕಾತಿಯ ದೈಹಿಕ ಪರೀಕ್ಷೆ ಯಾದಗಿರಿಯಲ್ಲಿ ನಡೆಯುತ್ತೆ.‌

ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನೇಮಕಾತಿ ರ್ಯಾಲಿಗಾಗಿ ವ್ಯವಸ್ಥೆಯನ್ನ ಮಾಡಲಾಗಿದೆ. ನೇಮಕಾತಿಯ ದೈಹಿಕ ಪರೀಕ್ಷೆಯ ಇಡೀ ಪ್ರಕ್ರಿಯೆಯನ್ನ ಭಾರತೀಯ ಸೇನೆಯ ಅಧಿಕಾರಿಗಳಿಂದ‌ ನಡೆಯುತ್ತಿದೆ. ನಿತ್ಯ ಬೆಳಗ್ಗೆ 4 ಗಂಟೆಗೆ ರ್ಯಾಲಿ ಆರಂಭವಾಗುತ್ತಿದೆ.‌ಬೆಳಗಿನ ಜಾವ ಕೇವಲ ರನ್ನಿಂಗ್ ಮಾಡಿಸಲಾಗುತ್ತಿದೆ. ರನ್ನಿಂಗ್ ನಲ್ಲಿ ಪಾಸಾದವರಿಗೆ ಬೇರೆ ಪರೀಕ್ಷೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬಳಿಕ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ.. ಬೆಳಗ್ಗೆ 4 ಗಂಟೆಯಿಂದ 7 ಗಂಟೆ ವರೆಗೆ ರನ್ನಿಂಗ್ ನಡೆಸಿದ್ರೆ ಇದರ ಬಳಿಕ ಸಂಜೆ ವರೆಗೆ ಬೇರೆ ಬೇರೆ ಪರೀಕ್ಷೆಗಳನ್ನ ನಡೆಸಲಾಗುತ್ತಿದೆ.

Also Read: ಇಂದಿನಿಂದ ಡಿಸೆಂಬರ್ 13ರವರೆಗೆ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ

ಇನ್ನು ಒಟ್ಟು 9521 ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಅರ್ಹತೆಯನ್ನ ಪಡೆದುಕೊಂಡಿದ್ದಾರೆ.. ಈಗಾಗ್ಲೇ ಕಳೆದ ನಾಲ್ಕು ದಿನಗಳಿಂದ ಪರೀಕ್ಷೆ ನಡೆಯುತ್ತಿದ್ದು 3795 ಅಭ್ಯರ್ಥಿಗಳು ಹಾಜರಾಗಿದ್ದಾರೆ. ಇನ್ನು ಆರು ದಿನಗಳಲ್ಲಿ 5726 ಅಭ್ಯರ್ಥಿಗಳಿಗಾಗಿ ದೈಹಿಕ ಪರೀಕ್ಷೆ ನಡೆಸಲಿದ್ದಾರೆ.. ದೇಶ ಸೇವೆ ಮಾಡಬೇಕು ದೇಶಕ್ಕಾಗಿ ಏನಾದ್ರು ಕೊಡುಗೆ ಕೊಡಬೇಕು ದೇಶಕ್ಕೆ ಸಮರ್ಪಣೆ ಸಲ್ಲಿಸಬೇಕೆಂದ ಯುವಕರು ಸೇನೆಗೆ ಸೇರಲು ಮುಂದಾಗುತ್ತಿದ್ದಾರೆ. ಇದರ ಜೊತೆಗೆ ಸೇನೆಗೆ ಸೇರಿ ಜೀವನ ಕೂಡ ಕಟ್ಟಿಕೊಳ್ಳಬಹುದು ಅಂತ ಯುವ ಸಮುದಾಯ ಮುಂದಾಗಿದೆ.

ಸೇನಾ ನೇಮಕಾತಿ ರ್ಯಾಲಿ‌ ನಡೆಯುವ ಸ್ಥಳದಲ್ಲಿ ಯಾದಗಿರಿ ಜಿಲ್ಲಾ ಪೊಲೀಸರಿಂದ ಪೊಲೀಸ್ ಸಿಬ್ಬಂದಿ ನೇಮಕ ಕೂಡ ಮಾಡಲಾಗಿದೆ. ರ್ಯಾಲಿ‌ ವೇಳೆ ಯಾವುದೇ ಘಟನೆ ಸಂಭವಿಸಿದ್ರೆ ತಕ್ಷಣವೇ ಚಿಕಿತ್ಸೆ ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ಸಹ ನಿಯೋಜನೆ ಮಾಡಲಾಗಿದೆ.. ಇನ್ನು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಯನ್ನ ಮಾಡಲಾಗಿದೆ. ಯುವಕರಿಗೆ ರಾತ್ರಿ ವೇಳೆ ಉಳಿದುಕೊಳ್ಳಲು ಸಮುದಾಯ ಭವನಗಳ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ ಅಂತಾರೆ ಶರಣಪ್ಪ ಕೋಟಪ್ಪಗೋಳ- ಯಾದಗಿರಿ ಜಿಲ್ಲಾ ಅಪರ ಜಿಲ್ಲಾಧಿಕಾರಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್