ಯಾದಗಿರಿಯಲ್ಲಿ ಈ ದೇವರ ದರ್ಶನ ಪಡೆಯಬೇಕೆಂದರೆ ಹರಸಾಹಸ ಪಡಲೇಬೇಕು
ಈ ದೇವಸ್ಥಾನ ತುಂಬಾ ಶಕ್ತಿ ಶಾಲಿ. ರಾಜರು ಯುದ್ಧ ಮಾಡಲು ಹೋಗಬೇಕಾದರೆ ಈ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನ ಮಾಡಿಯೇ ಹೋಗುತ್ತಿದ್ದರಂತೆ. ಇನ್ನು ಈ ದೇವಸ್ಥಾನದ ಮುಂಭಾಗದಲ್ಲೇ ಒಂದು ಉದ್ದದ ಆಕಾರದಲ್ಲಿ ಬಾವಿಯಿದೆ.
ಯಾದಗಿರಿ: ನಗರದ ಮದ್ಯದಲ್ಲಿರುವ ಯಾದಗಿರಿ ಕೋಟೆಯ ಮೇಲೆ ರಾಮಾಂಜನೇಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯಬೇಕು ಅಂದರೆ ಹರಸಾಹಸ ಪಡಲೇಬೇಕು. ಯಾಕೆಂದರೆ ನೂರಾರು ಅಡಿ ಎತ್ತರದ ಬೆಟ್ಟದ ಮೇಲೆ ದೇವಸ್ಥಾನವಿದೆ. ಈ ದೇವಸ್ಥಾನವನ್ನ ಪುರಾತನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ನೂರಾರು ವರ್ಷಗಳ ಹಿಂದೆ ಯಾದಗಿರಿಯನ್ನ ಯಾದವರು ಆಳುತ್ತಿದ್ದರು. ಈ ಬೆಟ್ಟದ ಮೇಲೆ ಯಾದವ ರಾಜರು ವಾಸವಾಗಿದ್ದರು. ಇಲ್ಲಿ ರಾಜರ ಹಿಂದಿನ ಕಾಲದ ಮನೆ ಕೂಡ ಇದೆ. ರಾಜರು ಪೂಜೆ ಮಾಡುವ ಉದ್ದೇಶದಿಂದ ಈ ರಾಮಾಂಜನೇಯ ದೇವಸ್ಥಾನವನ್ನ ಕಟ್ಟಿದ್ದಾರೆ ಅಂತ ಹಿರಿಯರು ಹೇಳುತ್ತಾರೆ.
ಈ ದೇವಸ್ಥಾನ ತುಂಬಾ ಶಕ್ತಿ ಶಾಲಿ. ರಾಜರು ಯುದ್ಧ ಮಾಡಲು ಹೋಗಬೇಕಾದರೆ ಈ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನ ಮಾಡಿಯೇ ಹೋಗುತ್ತಿದ್ದರಂತೆ. ಇನ್ನು ಈ ದೇವಸ್ಥಾನದ ಮುಂಭಾಗದಲ್ಲೇ ಒಂದು ಉದ್ದದ ಆಕಾರದಲ್ಲಿ ಬಾವಿಯಿದೆ. ಇದೆ ಬಾವಿಯ ನೀರನ್ನ ಬಳಸಿಕೊಂಡು ರಾಜರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು. ಈಗಲೂ ಸಹ ಇದೆ ಬಾವಿಯ ನೀರನ್ನ ಬಳಸಿಕೊಂಡೆ ಅರ್ಚಕರು ಪೂಜಾ ಕಾರ್ಯಗಳನ್ನ ಮಾಡುತ್ತಾ ಬರುತ್ತಿದ್ದಾರೆ.
ಇನ್ನು ಯಾದವರ ಆಳ್ವಿಕೆ ಕಾಲದಲ್ಲಿ ಈ ಬೆಟ್ಟದ ಮೇಲೆ ಮನೆಯನ್ನ ಕಟ್ಟಿಕೊಂಡಿದ್ದರು. ರಾಜ ಮತ್ತು ರಾಣಿಯರು ಸ್ನಾನ ಮಾಡುವುದ್ದಕ್ಕಾಗಿ ಬಾವಿ ಕೂಡ ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ಈಗ ರಾಜರಾಣಿ ಬಾವಿ ಅಂತ ಕರೆಲಾಗುತ್ತದೆ. ರಾಜಾರಾಣಿ ಬಾವಿ ಹಾಗೂ ದೇವಸ್ಥಾನಕ್ಕೆ ಪೂಜೆ ಮಾಡಲು ನೀರು ಬಳಸುವ ಬಾವಿ ಎತ್ತರದ ಪ್ರದೇಶದಲ್ಲಿದ್ದರೂ ಸಹ ಬಾವಿಗಳ ನೀರು ಮಾತ್ರ ಎಂದಿಗೂ ಬತ್ತಿಲ್ಲ ಎನ್ನುವುದು ವಿಶೇಷವಾಗಿದೆ.
ದೇವಸ್ಥಾನದಲ್ಲಿ ಪ್ರತಿ ವರ್ಷ ಶಿವರಾತ್ರಿ ವೇಳೆ ಜಾಗರಣೆ ಮಾಡಲಾಗುತ್ತದೆ. ಜೊತೆಗೆ ಸಾಕಷ್ಟು ಮಂದಿ ಭಕ್ತರು ಸೇರಿ ವಿಶೇಷ ಪೂಜೆ ಮಾಡುತ್ತಾರೆ. ಶಿವರಾತ್ರಿಯ ಮಾರನೇ ದಿನ ರಾಮಾಂಜನೇಯ ಹೆಸರಲ್ಲಿ ಕಾಂಡ ಮಾಡಿ ಪ್ರಸಾದದ ವ್ಯವಸ್ಥೆ ಮಾಡುತ್ತಾರೆ. ದೇವಸ್ಥಾನ ಬೆಟ್ಟದ ಮೇಲಿದ್ದರೂ ಸಾಕಷ್ಟು ಭಕ್ತರು ದೇವರ ದರ್ಶನ ಪಡೆಯಲು ಬರುತ್ತಾರೆ.
ಇದನ್ನೂ ಓದಿ
ಒಮಿಕ್ರಾನ್ ಪ್ರಕರಣಗಳ ಏರಿಕೆ: ದೆಹಲಿಯಲ್ಲಿ ಕ್ರಿಸ್ಮಸ್, ಹೊಸ ವರ್ಷದ ಕೂಟಗಳಿಗೆ ನಿಷೇಧ
Uttar Pradesh Election 2022: ದೀವಾರ್ ಸಿನಿಮಾ ಡೈಲಾಗ್ನಂತೆ ಮೇರೆ ಪಾಸ್ ಬಹನೇ ಹೈ ಎಂದ ಪ್ರಿಯಾಂಕಾ ಗಾಂಧಿ