ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರನ್ನು ನಿಂದಿಸಿ ಮಾತನಾಡಿದ ಮಾಜಿ ಸಚಿವ ಮಾಲಕರೆಡ್ಡಿ ಆಡಿಯೋ ವೈರಲ್
ಬೆಂಬಲಿಗನೊಬ್ಬನ ಜೊತೆ ಮಾತನಾಡಿದ್ದ ಮಾಲಕರೆಡ್ಡಿ, ಖರ್ಗೆ ಅವರನ್ನ ಹಿಯಾಳಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಲಕರೆಡ್ಡಿ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿದೆ.
ಯಾದಗಿರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಾತಿ ಪ್ರಸ್ತಾಪಿಸಿ ನಿಂದನೆ ಮಾಡಿ ಮಾತನಾಡಿರುವ ಮಾಜಿ ಸಚಿವ ಡಾ.ಎ.ಬಿ. ಮಾಲಕರೆಡ್ಡಿ ಅವರ ಆಡಿಯೋ ವೈರಲ್ ಆಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಈ ಆಡಿಯೋ ಹರಿದಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಜಿದ್ದಿಗೆ ಬಿದ್ದು ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದ ಮಾಲಕರೆಡ್ಡಿ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಹೊರ ಬಂದು ಖರ್ಗೆ ವಿರೋಧಿ ಟೀಂನಲ್ಲಿದ್ದರು. ಕಾಂಗ್ರೆಸ್ ಟಿಕೆಟ್ಗೆ ಮಗಳಿಂದ ಅರ್ಜಿ ಹಾಕಿಸಿದ್ದರು. ಆದ್ರೆ ಅರ್ಜಿ ಹಾಕಿದ್ರೂ ರಾಜ್ಯ ಕಾಂಗ್ರೆಸ್ ನಾಯಕರು ಕೇರ್ ಮಾಡಿರಲಿಲ್ಲ. ಇದೇ ಕಾರಣಕ್ಕೆ ಬೆಂಬಲಿಗನೊಬ್ಬನ ಜೊತೆ ಮಾತನಾಡಿದ್ದ ಮಾಲಕರೆಡ್ಡಿ, ಖರ್ಗೆ ಅವರನ್ನ ಹಿಯಾಳಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಾಲಕರೆಡ್ಡಿ ಆಡಿಯೋದಲ್ಲೇನಿದೆ?
ಕಾಂಗ್ರೆಸ್ನವರಿಗೆ ಎಲ್ಲಾ ಗೊತ್ತಿದೆ ಆದರೂ ನನಗೆ ಟಿಕೆಟ್ ಕೊಡುವ ಬಗ್ಗೆ ಡಿಲೇ ಮಾಡುತ್ತಾ ಇದ್ದಾರೆ ಅಂತ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎ.ಬಿ.ಮಾಲಕರಡ್ಡಿ ಬಿಜೆಪಿ ಕಾರ್ಯಕರ್ತನ ಜೊತೆ ಮಾತಾಡಿರುವ ಆಡಿಯೋ ಸಂಭಾಷಣೆ ಬಾರಿ ವೈರಲ್ ಆಗಿದೆ. ಡಿಕೆ ಶಿವಕುಮಾರ್ ಅವರು ನನಗೆ ಟಿಕೆಟ್ ಕೊಡಬೇಕು ಅಂತ ಅಂದುಕೊಂಡಿದ್ದಾರೆ. ಆದರೆ ಮಲ್ಲಿಕಾರ್ಜುನ್ ಖರ್ಗೆ ಮಾತ್ರ ಇದಕ್ಕೆ ಒಪ್ಪಿಗೆ ಕೊಡುತ್ತಿಲ್ಲ ಅಂತ ಹೇಳಿದ್ದಾರೆ. ಖರ್ಗೆ ಭಾಷಣದಲ್ಲಿ ಪಕ್ಷ ಬಿಟ್ಟು ಹೋದವರು ವಾಪಸ್ ಬರಬೇಕು ಪಕ್ಷ ಸಂಘಟನೆ ಮಾಡಬೇಕು ಅಂತ ಹೇಳುತ್ತಾರೆ. ಆದರೆ ಖರ್ಗೆ ಫೋಟೋ ಹಿಡಿದು ಕುಳಿತುಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರು ಖರ್ಗೆ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಕೊಟ್ಟು ತಪ್ಪು ಮಾಡಿದ್ದಾರೆ ಅಂತ ಮಾಲಕರಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಧ್ರುವನಾರಾಯಣ ಹಳೆ ಮೈಸೂರು ಭಾಗದ ಅತ್ಯಂತ ಪ್ರಭಾವಿ ನಾಯಕ, ಅವರ ಸಾವು ಇಡೀ ಸಮಾಜಕ್ಕೆ ಬಹುದೊಡ್ಡ ನಷ್ಟ: ಸಿದ್ದರಾಮಯ್ಯ
ಕಾರ್ಯಕರ್ತ ಮಾತ್ರ ಉನ್ನತ ಹುದ್ದೆಯಲ್ಲಿದ್ದರೂ ಖರ್ಗೆ ಅವರು ಸಣ್ಣ ಬುದ್ದಿ ತೋರಿಸುತ್ತಿದ್ದಾರೆ ಅಂತಾನೆ. ಆದರೆ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚೆನ್ನಾರೆಡ್ಡಿ ತುನ್ನೂರ್ಗೆ ಕೊಟ್ಟರೆ ಗೆಲ್ಲುವುದಿಲ್ಲ ಅಂತ ಖರ್ಗೆ ಮುಂದೆ ಮಾತಾಡಿದ್ದಾರೆ ಅಂತ ಕಾರ್ಯಕರ್ತ ಸೂಗಪ್ಪ ಹೇಳುತ್ತಾರೆ. ಖರ್ಗೆ ಅವರು ನೀಮಗೆ ಟಿಕೆಟ್ ಕೊಡಬೇಕು ಅಂತ ಹೇಳಿದ್ದಾರೆ ಅಂತ ಮಾಲಕರಡ್ಡಿ ಮುಂದೆ ಹೇಳುತ್ತಾನೆ. ಇದರ ಮಧ್ಯೆ ಖರ್ಗೆ ಅವರ ಜಾತಿ ಬಗ್ಗೆ ನಿಂದನೆ ಕೂಡ ಮಾಡಿದ್ದಾರೆ. ಖರ್ಗೆ ದಲಿತ ಸಮೂದಾಯಕ್ಕೆ ಸೇರಿದವರಾಗಿದ್ದರಿಂದ ಅವರು ಕಾಲ ಕೆಳಗೆ ಇರಲು ಬಯಸುತ್ತಾರೆ. ಎಷ್ಟೇ ದೊಡ್ಡ ಹುದ್ದೆ ಹೋದರೂ ಕೆಳ ಹಂತದ್ದೇ ಯೋಚನೆ ಮಾಡುತ್ತಾರೆ ಅಂತ ಹೇಳಿದ್ದಾರೆ. ಇನ್ನು ಯಾದಗಿರಿ ಬಿಜೆಪಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಬಗ್ಗೆ ಸಹ ಮಾತಾಡಿದ್ದಾರೆ. ಶಾಸಕರು ಸಹೋದರೆ ಕೆಲಸ ಮಾಡಿ ನೂರಾರು ಕೋಟಿ ರೂ. ಲೂಟಿ ಮಾಡಿದ್ದಾರೆ ಅಂತ ಹೇಳಿದ್ದಾರೆ. ನಾನು ಮಾಡಿದ ಕೆಲಸವನ್ನ ತಾವು ಮಾಡಿದ್ದೇವೆ ಅಂತ ಭಾಷಣ ಮಾಡುತ್ತಾನೆ. ಅವನು ಹುಚ್ಚ ಅಲ್ಲ ಅರೆ ಹುಚ್ಚ ಎನ್ನುವ ಮಾತುಗಳನ್ನ ಹೇಳುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:43 pm, Sat, 11 March 23