Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ ಜಿಲ್ಲೆಯಲ್ಲಿ ಶುರುವಾಗಿದೆ ಸೀತಾಫಲ ಕ್ರಾಂತಿ; ಮಾರಾಟಗಾರರ ಮುಖದಲ್ಲಿ ಮಂದಹಾಸ

ವರ್ಷದಲ್ಲಿ 2 ತಿಂಗಳ ಅವಧಿಯಲ್ಲಿ ಸಿಗುವ ಮತ್ತು ಹೆಚ್ಚು ದಿನ ಶೇಕರಿಸಲಾಗದ ಕಾರಣ ಮತ್ತು ಕೇವಲ 4 ರಿಂದ 5 ದಿನಗಳ ವರೆಗೆ ಈ ಸೀತಾಫಲ ಬಾಳುವುದರಿಂದ ಈ ಹಣ್ಣನ್ನು ಇಷ್ಟಪಡುವ ಗ್ರಾಹಕರಿಗೂ ಮತ್ತು ಮಾರಾಟಗಾರರಿಗೂ ಈಗ ಸುಗ್ಗಿಯ ಸಂಭ್ರಮವಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಶುರುವಾಗಿದೆ ಸೀತಾಫಲ ಕ್ರಾಂತಿ; ಮಾರಾಟಗಾರರ ಮುಖದಲ್ಲಿ ಮಂದಹಾಸ
ಮುಗಿಬಿದ್ದು ಖರೀದಿಯಲ್ಲಿ ತೋಡಗಿರು ಜನ
Follow us
TV9 Web
| Updated By: preethi shettigar

Updated on: Sep 13, 2021 | 8:27 AM

ಯಾದಗಿರಿ : ಸೀತೆಯ ಹೆಸರಿನೊಂದಿಗೆ ನಂಟು ಹೊಂದಿದ ಹಣ್ಣು ಸೀತಾಫಲ. ಬೀಜಗಳು ಜಾಸ್ತಿ, ತಿನ್ನಲು ತುಸು ಕಸರತ್ತು ಮಾಡಬೇಕೆನ್ನುವ ಹೋರತಾಗಿ ಸೀತಾಫಲ ಸಿಹಿಯ ಜೊತೆ ಸ್ವಾದಿಷ್ಟ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಸರ್ವ ರೋಗಗಳಿಗೆ ರಾಮಬಾಣದಂತಿರುವ ಸೀತಾಫಲ ಹಣ್ಣು ಕೇವಲ ಎರಡು ತಿಂಗಳು ಮಾತ್ರ ಸಿಗುವ ಕಾರಣ ಜನ ಮುಗಿಬಿದ್ದು ಖರೀದಿ ಮಾಡುತ್ತಾರೆ. ಅಷ್ಟಕ್ಕೂ ಸೀಲಾಫಲ ಹಣ್ಣೀನ ತವರೂರು ಯಾವುದು ಎನ್ನುವುದು ಇನ್ನೂ ಹೆಚ್ಚಿನವರಿಗೆ ಗೊತ್ತಿಲ್ಲ. ಅದಕ್ಕೆ ಉತ್ತರ ಇಲ್ಲಿದೆ.

ಯಾದಗಿರಿ ಜಿಲ್ಲೆಯ ಹಳೆ ಬಸ್ ನಿಲ್ದಾಣದ ಮುಂದೆ ಹಾಗೂ ಹತ್ತಿಕುಣಿ ಕ್ರಾಸ್ ಬಳಿಯ ರಸ್ತೆ ಈ ಎರಡು ತಿಂಗಳಗಳ ಕಾಲ ಸೀತಾಫಲ ಹಣ್ಣುಗಳ ಮಾರಕಟ್ಟೆಯಾಗಲಿದೆ. ಇನ್ನು ವಿಶೇಷ ಅಂದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೀತಾಫಲ ಹಣ್ಣಿನ ತವರು ಎಂದು ಯಾದಗಿರಿ ಜಿಲ್ಲೆ ಪ್ರಸಿದ್ಧ. ಇಲ್ಲಿಯ ರುಚಿರುಚಿ ಸ್ವಾದಿಷ್ಟ ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ.

ವರ್ಷದಲ್ಲಿ 2 ತಿಂಗಳ ಅವಧಿಯಲ್ಲಿ ಸಿಗುವ ಮತ್ತು ಹೆಚ್ಚು ದಿನ ಶೇಕರಿಸಲಾಗದ ಕಾರಣ ಮತ್ತು ಕೇವಲ 4 ರಿಂದ 5 ದಿನಗಳ ವರೆಗೆ ಈ ಸೀತಾಫಲ ಬಾಳುವುದರಿಂದ ಹಣ್ಣನ್ನು ಇಷ್ಟಪಡುವ ಗ್ರಾಹಕರಿಗೂ ಮತ್ತು ಮಾರಾಟಗಾರರಿಗೂ ಈಗ ಸುಗ್ಗಿಯ ಸಂಭ್ರಮವಾಗಿದೆ. ಗುಡ್ಡಗಾಡು ಪ್ರದೇಶ ಹೊಂದಿರುವ ಯಾದಗಿರಿ ಜಿಲ್ಲೆಯಲ್ಲಿ ಈ ಹಣ್ಣು ಹೇರಳವಾಗಿ ಸಿಗುತ್ತದೆ. ಹೀಗಾಗಿ ಗುಡ್ಡಗಾಡು ಪ್ರದೇಶಗಳಿಂದ ಹಳ್ಳಿ ಜನ ಸೀತಾಫಲ ಹಣ್ಣಗಳನ್ನು ತಂದು ನಗರ ಪ್ರದೇಶದಲ್ಲಿ ಮಾರಾಟ ಮಾಡುತ್ತಾರೆ.

ನಗರ ಪ್ರದೇಶದ ಜನ ಎರಡು ತಿಂಗಳ ಕಾಲ ಸೀಲಾಫಲ ಸೀಜನ್ ಅನ್ನು ಸಂಭ್ರಮಿಸುತ್ತಾರೆ. ಇನ್ನು ಈ ವರ್ಷವಂತು ಮುಂಗಾರು ಮಳೆ ಅಬ್ಬರಿಸಿದ್ದರಿಂದ ಸೀತಾಫಲ ಹಣ್ಣುಗಳ ಉತ್ಪಾದನೆ ಕೂಡ ಹೆಚ್ಚಾಗಿದೆ. ಹೀಗಾಗಿ ಊರಿನ ಜನರಷ್ಟೇ ಅಲ್ಲ. ಬೇರೆ ಊರಲ್ಲಿರುವ ನೆಂಟರು ಇಷ್ಟ ಪಟ್ಟು ಕೇಳುವುದ್ದರಿಂದ ಯಾದಗಿರಿ ಜನ ಬೇರೆ ಊರುಗಳಿಗೆ ಪಾರ್ಸಲ್ ಸಹ ಕಳುಹಿಸಿ ಕೊಡುತ್ತಾರೆ ಎಂದು ಗ್ರಾಹಕರಾದ ವೀರುಪಾಕ್ಷಯ್ಯ ಸ್ವಾಮಿ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಮತ್ತು ಯಾದಗಿರಿ ತಾಲೂಕುಗಳ ಬೆಟ್ಟ ಗುಡ್ಡಗಳು ಸೇರಿಯೇ ಯಾದಗಿರಿ ಜಿಲ್ಲೆ ಗಿರಿನಾಡೆಂದು ಕರೆಸಿಕೊಂಡಿದೆ. ಹಚ್ಚ ಹಸುರಿನ ಗಿರಿಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಸೀತಾಫಲದ 2 ತಿಂಗಳ ಸುಗ್ಗಿ ಈ ಭಾಗದ ಅನೇಕ ಬಡ ಕುಟುಂಬಗಳಗೆ ತಕ್ಕ ಮಟ್ಟಿನ ಆದಾಯ ಮೂಲವಾಗಿದೆ.

custard apple

ಸೀತಾಫಲ

ವಿಶೇಷವಾಗಿ ಯಾದಗಿರಿ ತಾಲೂಕಿನ ಹತ್ತಿಕುಣಿ ಮೀಸಲು ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಹೀಗಾಗಿ ಜನ ಬೆಳಗ್ಗೆ ಬೇಗ ಎದ್ದು ಕೈಯಲ್ಲಿ ಚೀಲ ಹಿಡಿದುಕೊಂಡು ಅರಣ್ಯ ಪ್ರದೇಶದ ಒಳಗೆ ಹೊಕ್ಕರೆ ಚೀಲ ತುಂಬಿಕೊಂಡೆ ಹೊರ ಬರುತ್ತಾರೆ. ಇನ್ನು ಸೀತಾಫಲ ಹಣ್ಣುಗಳು ತಿನ್ನುವುದಕ್ಕೆ ರುಚಿಯಾಗಿದ್ದರೆ, ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

ಸೀತಾಫಲ ಗುಡ್ಡಗಾಡು ಪ್ರದೇಶದಲ್ಲಿ ಸಿಗುವ ಕಾರಣ ಯಾವುದೆ ಕೆಮಿಕಲ್ ಮಿಶ್ರಣದ ಭಯವಿಲ್ಲ. ಇನ್ನು ಸೀತಾಫಲ ಬೆಳೆಯುವುದಕ್ಕೆ ಗಿಡಗಳಿಗೆ ನೀರು ಹಾಕುವುದಿಲ್ಲ, ಗೊಬ್ಬರ ಹಾಕುವುದಿಲ್ಲ, ನೈಸರ್ಗಿಕವಾಗಿ ಬೆಳೆಯುವಂತ ಹಾಗೂ ಉಚಿತವಾಗಿ ಸಿಗುವಂತ ಹಣ್ಣಾಗಿವೆ. ಇನ್ನು ಯಾದಗಿರಿ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೀತಾಫಲ ಹಣ್ಣು ಸಿಗುವ ಕಾರಣ ಮುಂಬೈ, ಹೈದ್ರಾಬಾದ್, ಪುಣೆ ಸೇರಿದಂತೆ ನಾನಾ ಕಡೆ ರಫ್ತಾಗುತ್ತೆವೆ. ಇದಕ್ಕಾಗಿ ಸೀತಾಫಲ ಹಣ್ಣಿಗೆ ಎರಡು ತಿಂಗಳ ಕಾಲ ಸಾಕಷ್ಟು ಬೇಡಿಕೆ ಇದೆ. ಇನ್ನು ಸೀತಾಫಲ ಹಣ್ಣುಗಳು ಸರ್ವ ರೋಗಗಳಿಗೆ ರಾಮಬಾಣ ಎಂದು ಪರಿಸರ ಪ್ರೇಮಿ ಪ್ರಭು ಹೇಳಿದ್ದಾರೆ.

ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯ ಬೆಟ್ಟಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಸೀತಾಫಲ ಸಿಹಿಯಾಗಿದೆ. ಸೀತಾಫಲ ಹಣ್ಣು ಯಾರೂ ಸಂಪ್ರದಾಯಿಕ ಬಿತ್ತಿ ಬೆಳೆಯುವ ಹಣ್ಣಲ್ಲವಾದರೂ ವರ್ಷದಲ್ಲಿ ಕೇವಲ 2 ತಿಂಗಳ ಸೀತಾಫಲ ಸುಗ್ಗಿ ಇಲ್ಲಿಯ ಅನೇಕ ಬಡಜನರಿಗೆ ತಕ್ಕಮಟ್ಟಿನ ಆದಾಯ ಮೂಲವಾಗಿದೆ.

ವರದಿ: ಅಮೀನ್ ಹೊಸುರ್

ಇದನ್ನೂ ಓದಿ: ಮತ್ಸ್ಯಪ್ರಿಯರಿಗೆ ಸುಗ್ಗಿ; ತಾಜಾ ಮೀನು ತಿನ್ನುವ ಸಂಭ್ರಮಕ್ಕೆ ಮೀನಿನ ದರ ಇಳಿಕೆ ಸಾಥ್

ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತರ ಕೈ ಹಿಡಿಯಿತು ಡ್ರ್ಯಾಗನ್​ ಫ್ರೂಟ್; ಲಾಕ್​ಡೌನ್​ ಇದ್ದರೂ​ ಆದಾಯಕ್ಕೆ ಮೋಸವಿಲ್ಲ