ಉದ್ಭವವಾಗಿದೆ ಮಾನವ-ಮಾನವ ಪೂರ್ವಜರ ನಡುವೆ ಸಂಘರ್ಷ! ಇದ್ದಬದ್ದ ಬೆಳೆಯೆಲ್ಲಾ ನಾಶ – ಯಾಕೀ ವಾನರ ಪ್ರಕೋಪ?
Monkeys on a rampage: ನಾಲ್ಕು ವರ್ಷಗಳಿಂದ ಇದೆ ಸ್ಥಳದಲ್ಲಿ ವಾಸ್ತವ್ಯ ಹೂಡಿರುವ ಕೋತಿಗಳು ವರ್ಷದಿಂದ ವರ್ಷಕ್ಕೆ ತಮ್ಮ ಸಂತತಿಯನ್ನ ಬೆಳೆಸಿಕೊಂಡಿವೆ. ಇದೆ ಕಾರಣಕ್ಕೆ ನೂರರಷ್ಟು ಇದ್ದ ಕೋತಿಗಳು ಈಗ 500 ಕ್ಕೂ ಅಧಿಕವಾಗಿವೆ. ಬೆಟ್ಟದಲ್ಲಿ ಸಿಗುವ ಆಹಾರವನ್ನ ತಿಂದು ಬದುಕುತ್ತಿದ್ದ ಕೋತಿಗಳಿಗೆ ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆ ಆಗದ ಕಾರಣಕ್ಕೆ ಆಹಾರ ಸಿಗುತ್ತಿಲ್ಲ.
ಬರಗಾಲ ಆವರಿಸಿದ್ದರಿಂದ ಅನ್ನದಾತರು ಅಕ್ಷರಶಃ ಕಂಗಲಾಗಿದ್ದಾರೆ. ಇರೋ ಬರೋ ಬೆಳೆಯನ್ನ ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದಾರೆ. ಆದ್ರೆ ಆ ಜಿಲ್ಲೆಯ ರೈತರು ಬೋರವೆಲ್ ನೀರು ಬಳಸಿಕೊಂಡು ಹತ್ತಿ ಬೆಳೆಯನ್ನ ಬೆಳೆದಿದ್ದಾರೆ. ಸಮರ್ಪಕವಾಗಿ ನೀರು ಸಿಕ್ಕದ್ದರಿಂದ ಭರ್ಜರಿಯಾಗಿ ಬೆಳೆಯನ್ನ ಬೆಳೆದಿದ್ದಾರೆ. ಆದ್ರೆ ಭರ್ಜರಿಯಾಗಿ ಬೆಳೆದು ನಿಂತ ಬೆಳೆಗೆ ಕೋತಿಗಳ ಕಾಟ ಶುರುವಾಗಿದೆ. ಹಿಂಡು ಹಿಂಡಾಗಿ ಜಮೀನುಗಳಿಗೆ ನುಗ್ಗುತ್ತಿರುವ ಕೋತಿಗಳು ಬೆಳೆಗಳನ್ನ ಹಾಳು ಮಾಡ್ತಾಯಿದ್ದಾವೆ. ಕೋತಿಗಳು ಸಾರ್ ಕೋತಿಗಳು ಎಲ್ಲಿ ನೋಡಿದ್ರು ಕೋತಿಗಳು.. ಕೋತಿಗಳ ಕಾಟಕ್ಕೆ ಸಾಕಪ್ಪ ಸಾಕು ಎನ್ನುತ್ತಿರುವ ರೈತರು.. ರೈತರಿಗೆ ಡೋಂಟ್ ಕೇರ್ ಎನ್ನುತ್ತಾ ಜಮೀನುಗಳಿಗೆ ನುಗ್ಗುತ್ತಿರುವ ವಾನರೆ ಸೇನೆ. ಜಮೀನಿಗೆ ನುಗ್ಗಿದ್ದೇ ತಡ ಕೋತಿ ಚೇಷ್ಟೆ ಮಾಡ್ತಾ, ಬೆಳೆ ನಾಶಕ್ಕೆ ಮುಂದಾಗುತ್ತಿರುವ ಕೋತಿಗಳು (Monkeys on a rampage). ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದಲ್ಲಿ.
ಹೌದು ಗುರುಸಣಗಿ ಗ್ರಾಮದಲ್ಲಿ ಕೋತಿಗಳು ಕಾಟಕ್ಕೆ ಅನ್ನದಾತರು ಅಕ್ಷರಶಃ ಕಂಗಲಾಗಿದ್ದಾರೆ. ವಾನರ ಸೇನೆ ಹಿಂಡು ಜಮೀನುಗಳಿಗೆ ನುಗ್ಗಿ ಇರೋ ಬರೋ ಬೆಳೆಯನ್ನ ಹಾಳು ಮಾಡುತ್ತಿದ್ದಾವೆ. ಇದೆ ಕಾರಣಕ್ಕೆ ಕಣ್ಣಲ್ಲಿ ಕಣ್ಣಿಟ್ಟು ಬೆಳೆದಿದ್ದ ಬೆಳೆ, ವಾನರ ಸೇನೆಯ ಕಪಿಚೇಷ್ಟೆಯಿಂದಾಗಿ ಹಾಳಾಗಿ ಹೋಗುತ್ತಿದೆ.
ಮಾನವ-ವಾನರ ಸಂಘರ್ಷಕ್ಕೆ ಕಾರಣವೇನು ಗೊತ್ತಾ!?
ಅಷ್ಟಕ್ಕೂ ಈ ಗ್ರಾಮದಲ್ಲಿ ಸುಮಾರು 500 ಕ್ಕೂ ಅಧಿಕ ಕೋತಿಗಳ ತಂಡವಿದೆ. ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮದಲ್ಲಿ ಕೋತಿಗಳ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಾಯಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕೋತಿಗಳ ಹಿಂಡನ್ನ ಗ್ರಾಮದ ಹೊರ ಭಾಗದ ಬೆಟ್ಟದಲ್ಲಿ ಯಾರೋ ರಾತ್ರೋರಾತ್ರಿ ಬಿಟ್ಟು ಹೋಗಿದ್ದಾರಂತೆ.
ಇದೆ ಕಾರಣಕ್ಕೆ ನಾಲ್ಕು ವರ್ಷಗಳಿಂದ ಇದೆ ಸ್ಥಳದಲ್ಲಿ ವಾಸ್ತವ್ಯ ಹೂಡಿರುವ ಕೋತಿಗಳು ವರ್ಷದಿಂದ ವರ್ಷಕ್ಕೆ ತಮ್ಮ ಸಂತತಿಯನ್ನ ಬೆಳೆಸಿಕೊಂಡಿವೆ. ಇದೆ ಕಾರಣಕ್ಕೆ ನೂರರಷ್ಟು ಇದ್ದ ಕೋತಿಗಳು ಈಗ 500 ಕ್ಕೂ ಅಧಿಕವಾಗಿವೆ. ಬೆಟ್ಟದಲ್ಲಿ ಸಿಗುವ ಆಹಾರವನ್ನ ತಿಂದು ಬದುಕುತ್ತಿದ್ದ ಕೋತಿಗಳಿಗೆ ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆ ಆಗದ ಕಾರಣಕ್ಕೆ ಆಹಾರ ಸಿಗುತ್ತಿಲ್ಲ.
ಇದೆ ಕಾರಣಕ್ಕೆ ಕೋತಿಗಳ ವಾನರ ಸೇನೆ ಹೊಟ್ಟೆ ತುಂಬಿಸಿಕೊಳ್ಳಲು ರೈತರ ಜಮೀನುಗಳಿಗೆ ಲಗ್ಗೆ ಇಡ್ತಾಯಿದ್ದಾವೆ. ಸದ್ಯ ರೈತರ ಜಮೀನಿನಲ್ಲಿ ಹತ್ತಿ ಬೆಳೆ ಕಾಯಿ ಕಟ್ಟುತ್ತಿದೆ ಹೀಗಾಗಿ ಕೋತಿಗಳು ಜಮೀನುಗಳಿಗೆ ಎಂಟ್ರಿ ಕೊಟ್ಟು ಕಾಯಿಗಳನ್ನ ಮನಸೋ ಇಚ್ಚೆ ತಿಂದು ಗಿಡುಗಳನ್ನ ಮುರಿದು ಹಾಕ್ತಾಯಿದ್ದಾವೆ. ಹೀಗಾಗಿ ರೈತರು ನಿತ್ಯ ಬೆಳಗ್ಗೆಯಿಂದ ಸಂಜೆ ತನಕ ಬೆಳೆಗಳನ್ನ ಉಳಿಸಿಕೊಳ್ಳಲು ಕೋತಿಗಳನ್ನ ಕಾಯುವಂತ ಪರಸ್ಥಿತಿ ನಿರ್ಮಾಣವಾಗಿದೆ ಅಂತಾರೆ ರೈತರು.
ಇನ್ನು ಗ್ರಾಮದ ಮಲ್ಲಣ್ಣಗೌಡ ಎಂಬ ರೈತ ತಮ್ಮ ನಾಲ್ಕು ಜಮೀನಿನಲ್ಲಿ ಹತ್ತಿಯನ್ನ ಬೆಳೆದಿದ್ದಾರೆ. ಆರಂಭದಲ್ಲಿ ಮಳೆ ಬಂದಿದ್ದರಿಂದ ಬಿತ್ತನೆ ಮಾಡಿದ್ರು ಸಾವಿರಾರು ರೂ. ಖರ್ಚು ಮಾಡಿ ಬೀಜ ರಸಗೊಬ್ಬರವನ್ನ ತಂದು ಹಾಕಿದ್ದಾರೆ. ಆದ್ರೆ ಬಿತ್ತನೆ ಮಾಡಿ ಒಂದು ತಿಂಗಳ ಬಳಿಕ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಬರಗಾಲ ಆವರಿಸಿಕೊಂಡಿದೆ. ಆದ್ರೆ ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿರುವ ಬೆಳೆ ಒಣಗಲು ಬಿಡಬಾರದು ಹೇಗಾದ್ರು ಮಾಡಿ ಉಳಿಸಿಕೊಳ್ಳಬೇಕು ಅಂತ ಬೋರವೆಲ್ ನಿಂದ ನೀರು ಹರಸಿ ಬೆಳೆಯನ್ನ ಬೆಳೆದಿದ್ದಾರೆ.
ಸತತ ಎರಡು ತಿಂಗಳ ಕಾಲ ಬೋರವೆಲ್ ನೀರು ಬಿಟ್ಟ ಕಾರಣಕ್ಕೆ ಹತ್ತಿ ಬೆಳೆ ಭರ್ಜರಿಯಾಗಿ ಬೆಳೆದು ನಿಂತಿದೆ. ಸದ್ಯ ಹಚ್ಚ ಹಸಿರಾಗಿರುವ ಹತ್ತಿ ಗಿಡಗಳಿಗೆ ಕಾಯಿ ಕಟ್ಟುತ್ತಿದೆ. ಇನ್ನು 15 ದಿನಗಳ ಕಳೆದ್ರೆ ಹತ್ತಿ ರಾಶಿ ಆಗಿ ಹೋಗುತ್ತೆ. ಆದ್ರೆ ರಾಶಿ ಆಗುವ ಮುನ್ನವೆ ಕೋತಿಗಳ ಕಾಟದಿಂದ ಬೆಳೆ ಹಾಳಾಗಿ ಹೋಗ್ತಾಯಿದೆ. ಇನ್ನು ಬೆಳಗ್ಗೆಯಿಂದ ಸಂಜೆ 7 ಗಂಟೆ ವರೆಗೆ ಕೋತಿಗಳನ್ನ ಜಮೀನಿನಲ್ಲಿ ಬರದ ಹಾಗೆ ನೋಡಿಕೊಳ್ಳಬೇಕು ಐದು ನಿಮಿಷ ಬಿಟ್ರೆ ಸಾಕು ಇಡೀ ಜಮೀನೆ ಕೋತಿಗಳು ಹಾಳು ಮಾಡುತ್ತವೆ. ನೂರಾರು ಕೋತಿಗಳು ಏಕ ಕಾಲದಲ್ಲಿ ಜಮೀನಿಗೆ ನುಗ್ಗಿ ಹತ್ತಿ ಕಾಯಿಗಳನ್ನ ತಿಂದು ಗಿಡಗಳನ್ನ ಮುರಿದು ಹಾಕುತ್ತವೆ.
ಇದೆ ಕಾರಣಕ್ಕೆ ಕೇವಲ ಮಲ್ಲಣ್ಣಗೌಡ ಮಾತ್ರ ಅಲ್ದೆ ಈ ಗ್ರಾಮದ ಹತ್ತಾರು ಮಂದಿ ರೈತರು ಕೋತಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ಇದಕ್ಕೆ ಕಾರಣಕ್ಕೆ ಅಂದ್ರೆ ಬೆಟ್ಟದ ಪಕ್ಕದಲ್ಲೇ ಜಮೀನುಗಳು ಇರೋದ್ದರಿಂದ ಜಮೀನಿಗೆ ನುಗ್ಗಿ ಹತ್ತಿ ಕಾಯಿಗಳನ್ನ ತಿಂದು ವಾಪಸ್ ಬೆಟ್ಟಕ್ಕೆ ಕೋತಿಗಳು ಹೋಗುತ್ತವೆ. ಈ ಬಗ್ಗೆ ರೈತರು ಸಾಕಷ್ಟು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನ ಆಗಿಲ್ಲ. ಇನ್ನು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೇಳಿದ್ರೆ ಬೆಳೆ ಹಾಳಾಗಿದ್ರೆ ಪರಿಹಾರ ಕೊಡಿಸಲಾಗುತ್ತೆ ಅಂತಾರೆ.
ಒಟ್ನಲ್ಲಿ ಬರಗಾಲದ ಭೀಕರತೆಯಲ್ಲೂ ಅನ್ನದಾತರು ಬೋರವೆಲ್ ನೀರು ಬಳಸಿಕೊಂಡು ಬಂಗಾರದಂತ ಹತ್ತಿ ಬೆಳೆಯನ್ನ ಬೆಳೆದಿದ್ದಾರೆ. ಆದ್ರೆ ಕೋತಿಗಳ ವಿಪರೀತ ಕಾಟದಿಂದ ಬೆಳೆಗಳನ್ನ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಮುಂದಾಗಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ