ಯಾದಗಿರಿ ಜನರಿಗೆ ವರದಾನವಾದ ಇಸ್ರೇಲ್​ನಿಂದ ಬಂದ ಆಕ್ಸಿಜನ್ ಕಂಟೇನರ್

ಇಸ್ರೇಲ್​ನಿಂದ ಬಂದ ಆಕ್ಸಿಜನ್ ಕಂಟೇನರ್​ ಯಾದಗಿರಿ ಜಿಲ್ಲಾ ಕೊವಿಡ್ ಆಸ್ಪತ್ರೆ ಬಳಿ ಅಳವಡಿಸಲಾಗಿದೆ. ನಿತ್ಯ 50 ರಿಂದ 60 ರೋಗಿಗಳಿಗೆ ನಿರಂತರ ಆಕ್ಸಿಜನ್ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿದೆ. ಕಂಟೇನರ್​ನಿಂದ ದಿನದ 24 ಗಂಟೆಗಳ ಕಾಲ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ.

ಯಾದಗಿರಿ ಜನರಿಗೆ ವರದಾನವಾದ ಇಸ್ರೇಲ್​ನಿಂದ ಬಂದ ಆಕ್ಸಿಜನ್ ಕಂಟೇನರ್
ಆಕ್ಸಿಜನ್ ಕಂಟೇನರ್

ಯಾದಗಿರಿ: ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತರು ಕಂಗಾಲಾಗಿದ್ದರು. ಆದರೆ ಇಸ್ರೇಲ್ನಿಂದ ಬಂದ ಆಕ್ಸಿಜನ್ ಕಂಟೇನರ್ ಜಿಲ್ಲೆಯ ಜನರಿಗೆ ವರದಾನವಾಗಿದೆ. ಇಸ್ರೇಲ್ ಸರ್ಕಾರ ಆಕ್ಸಿಜನ್ ಕಂಟೇನರ್​ ದಾನವಾಗಿ ನೀಡಿತ್ತು. ನೀಡಿದ್ದ ಕಂಟೇನರ್ ಆಕ್ಸಿಜನ್ ಸಮಸ್ಯೆಯನ್ನು ನೀಗಿಸಿದೆ. ಆಕ್ಸಿಜನ್ ಕಂಟೇನರ್ ನಿಮಿಷಕ್ಕೆ 1,500 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುತ್ತದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ.

ಇಸ್ರೇಲ್​ನಿಂದ ಬಂದ ಆಕ್ಸಿಜನ್ ಕಂಟೇನರ್​ ಯಾದಗಿರಿ ಜಿಲ್ಲಾ ಕೊವಿಡ್ ಆಸ್ಪತ್ರೆ ಬಳಿ ಅಳವಡಿಸಲಾಗಿದೆ. ನಿತ್ಯ 50 ರಿಂದ 60 ರೋಗಿಗಳಿಗೆ ನಿರಂತರ ಆಕ್ಸಿಜನ್ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿದೆ. ಕಂಟೇನರ್​ನಿಂದ ದಿನದ 24 ಗಂಟೆಗಳ ಕಾಲ ಆಕ್ಸಿಜನ್ ಉತ್ಪಾದನೆ ಆಗುತ್ತಿದ್ದು, ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಸದ್ಯ 123 ಮಂದಿ ಸೋಂಕಿತರು ಆಕ್ಸಿಜನ್ ಬೆಡ್​ಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.

300 ಬೆಡ್ಗಳ ಸಾಮರ್ಥ್ಯ ಉಳ್ಳ ಆಸ್ಪತ್ರೆಯಲ್ಲಿ 140 ಬೆಡ್ಗಳಿಗೆ ಆಕ್ಸಿಜನ್ ಸಪ್ಲೈ ಇದೆ. ಇದೆ ಮೇ 11 ರಂದು ಇಸ್ರೇಲ್ನಿಂದ ಆಕ್ಸಿಜನ್ ಕಂಟೇನರ್ ಯಾದಗಿರಿಗೆ ಬಂದಿತ್ತು. ಕಂಟೇನರ್ ಬಂದ 10 ದಿನಗಳ ಬಳಿಕ ಆಕ್ಸಿಜನ್ ಉತ್ಪಾದನೆ ಆರಂಭವಾಗಿದೆ. ಇಸ್ರೇಲ್​ನಿಂದ ದೇಶಕ್ಕೆ ಮೂರು ಕಂಟೇನರ್ ನೀಡಲಾಗಿದೆ. ಅದರಲ್ಲಿ ಎರಡು ನಮ್ಮ ರಾಜ್ಯಕ್ಕೆ ಕೊಡಲಾಗಿದೆ. ಒಂದು ಯಾದಗಿರಿ ಮತ್ತು ಇನ್ನೊಂದು ಕೋಲಾರ ಜಿಲ್ಲೆಗೆ ನೀಡಲಾಗಿದೆ.

ಬೆಂಗಳೂರಿನ ಭಾರತಿ ಆಸ್ಪತ್ರೆಯಲ್ಲಿ ಬೇಜವಾಬ್ದಾರಿ ವರ್ತನೆ; ಪೊಲೀಸರ ತನಿಖೆ ವೇಳೆ ಮುಖವಾಡ ಬಯಲು

ಸೋಷಿಯಲ್ ಮೀಡಿಯಾ, ಒಟಿಟಿಗೆ ಹೊಸ ಕಾನೂನು; ಟ್ವಿಟ್ಟರ್, ಫೇಸ್​ಬುಕ್ ಕೆಲಸ ಮಾಡೋದು ನಿಲ್ಲಿಸುತ್ತಾ?

(oxygen container provided by Israeli government is very helpful to Yadgir people)