ಗ್ಯಾಂಗ್ ಕಟ್ಕೊಂಡು ಹಣ ವಸೂಲಿ ಮಾಡುವ ರೇಂಜ್​​ಗೆ ಬೆಳೆದಿದ್ದ ಫೇಕ್ ಅಧಿಕಾರಿ! ಅಂಗಡಿ ಮಾಲೀಕರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದರು

ಆ ವ್ಯಕ್ತಿ ಗ್ಯಾಂಗ್ ಕಟ್ಟಿಕೊಂಡು ಅಧಿಕಾರಿಯ ಸೋಗಿನಲ್ಲಿ ಬಂದಿದ್ದ. ನಾನು ಆಹಾರ ಇಲಾಖೆ ಅಧಿಕಾರಿ ಅಂತ ಹೇಳಿಕೊಂಡು ಅಂಗಡಿಗಳಿಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ. ಕೊನೆಗೆ ಹಣ ವಸೂಲಿ ಮಾಡುವಾಗ ಫೇಕ್ ಅಧಿಕಾರಿ ಲಾಕ್ ಆಗಿದ್ದಾನೆ. ಹಣ ಕೊಡಿ ಇಲ್ಲ ಲೈಸನ್ಸ್ ಕ್ಯಾನ್ಸಲ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದ ನಕಲಿ ಅಧಿಕಾರಿಗೆ ಅಂಗಡಿ‌ ಮಾಲೀಕರು ಸಕತ್ ಗೂಸಾ ಕೊಟ್ಟಿದ್ದಾರೆ.

ಗ್ಯಾಂಗ್ ಕಟ್ಕೊಂಡು ಹಣ ವಸೂಲಿ ಮಾಡುವ ರೇಂಜ್​​ಗೆ ಬೆಳೆದಿದ್ದ ಫೇಕ್ ಅಧಿಕಾರಿ! ಅಂಗಡಿ ಮಾಲೀಕರು  ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದರು
ಫೇಕ್ ಅಧಿಕಾರಿ ವಿಜಯ ಕುಮಾರ್ ಗಡ
Follow us
ಅಮೀನ್​ ಸಾಬ್​
| Updated By: ಆಯೇಷಾ ಬಾನು

Updated on:Dec 16, 2023 | 3:03 PM

ಯಾದಗಿರಿ, ಡಿ.16: ಆಹಾರ ಅಧಿಕಾರಿ (Fake Food Officer) ಅಂತ ಹೇಳಿಕೊಂಡು ಅಂಗಡಿಗಳಿಗೆ ನುಗ್ಗಿ ಹಣ ಕೊಡಿ ಇಲ್ಲ ಲೈಸನ್ಸ್ ಕ್ಯಾನ್ಸಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯ ಅಸಲಿಯತ್ತು ಬಯಲಾಗಿದೆ. ಕೊನೆಗೆ ನಕಲಿ ಅಧಿಕಾರಿಯನ್ನ ಹಿಡಿದು ಅಂಗಡಿ ಮಾಲೀಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ (Yadgir) ಜಿಲ್ಲೆಗೆ ನಕಲಿ ಅಧಿಕಾರಿಗಳ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ಅದರಲ್ಲೂ ಆಗಾರ ಸುರಕ್ಷತಾ ಇಲಾಖೆ ಅಧಿಕಾರಿ ಅಂತ ಹೇಳಿಕೊಂಡು ಅಂಗಡಿಯಿಂದ ಅಂಗಡಿಗೆ ಹೋಗಿ ಹಣ ವಸೂಲಿ ಮಾಡುತ್ತಿತ್ತು. ಸದ್ಯ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿರುವ ಕಿರಾಣಿ ಅಂಗಡಿಗೆ ಬಂದಿದ್ದ ನಕಲಿ ಅಧಿಕಾರಿ ಲಾಕ್ ಆಗಿದ್ದಾನೆ.

ಕಿರಾಣಿ ಅಂಗಡಿಗೆ ಬಂದಿದ್ದ ನಕಲಿ ಆಹಾರ ಸುರಕ್ಷತಾ ಅಧಿಕಾರಿ ಕೆಲ ವಸ್ತುಗಳನ್ನ ಪರಿಶೀಲನೆ ಮಾಡಿದ್ದಾನೆ. ವಸ್ತುಗಳ ಅವಧಿ ಮುಗಿದ್ರು ಮಾರಾಟ‌ ಮಾಡ್ತಾಯಿದ್ದಿರಾ ಜೊತೆಗೆ ಕಳಪೆ ಪದಾರ್ಥಗಳನ್ನ ಮಾರಾಟ ಮಾಡ್ತಾಯಿದ್ದೀರಾ ಅಂತ ಹೆದರಿಸಿದ್ದಾನೆ. ಅಂಗಡಿ‌ ಮಾಲೀಕ ಏಕಾಏಕಿ ಶಾಕ್ ಆಗಿದ್ದಾನೆ. ತಿಂಗಳಿಗೆ ಒಮ್ಮೆ ಬರುವ ಆಹಾರ ಸುರಕ್ಷತಾ ಅಧಿಕಾರಿಗಳು ಪರಿಚಯ ಇದ್ದಾರೆ. ಆದರೆ ಇವಯ್ಯಾರು ಹೊಸ ಅಧಿಕಾರಿಗಳು ಅಂತ ಕಕ್ಕಾಬಿಕ್ಕಿಯಾಗಿದ್ದಾನೆ. ಕೂಡ್ಲೆ ಓರಿಜನ್ ಆಹಾರ ಸುರಕ್ಷತಾ ಅಧಿಕಾರಿಗೆ ಫೋನ್ ಮಾಡಿ ಅಂಗಡಿಗೆ ಕರೆದಾಗ ನಕಲಿ ಅಧಿಕಾರಿಯ ಬಣ್ಣ ಬಯಲಾಗಿದೆ.

ಇದನ್ನೂ ಓದಿ: ಮಂಗಳೂರು ವಿವಿ ವಸತಿ ನಿಲಯ ಕಾಮಗಾರಿ ಗೋಲ್​ಮಾಲ್: ಮಾಧ್ಯಮಗಳ ಪ್ರಶ್ನೆಗೆ ಸಚಿವ ಎಂಸಿ ಸುಧಾಕರ್ ಅಚ್ಚರಿ

ಆಹಾರ ಇಲಾಖೆ ಅಧಿಕಾರಿ ಅಂತ ಹೇಳಿಕೊಂಡು ಯಾದಗಿರಿ ಜಿಲ್ಲೆಯಲ್ಲಿ ಹಣ ವಸೂಲಿ ಮಾಡಿಕೊಂಡು ಓಡಾಡುತ್ತಿದ್ದ ವ್ಯಕ್ತಿ ರಾಯಚೂರು ಜಿಲ್ಲೆ ಮೂಲದ ವಿಜಯ ಕುಮಾರ್ ಅಂತ ತಿಳಿದುಬಂದಿದೆ. ಕಳೆದ ಒಂದು ವಾರದ ಹಿಂದೆ ಯಾದಗಿರಿ ಜಿಲ್ಲೆಗೆ ಗ್ಯಾಂಗ್ ಕಟ್ಟಿಕೊಂಡು ಬಂದಿದ್ದ. ನಾಲ್ಕೈದು ಜನರ ಟೀಮ್ ಮಾಡಿಕೊಂಡು ಬಂದು ಕಳೆದ ಒಂದು ವಾರದಿಂದ ಯಾದಗಿರಿ ನಗರ, ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣ, ವಡಗೇರ ಪಟ್ಟಣ ಸೇರಿದಂತೆ ಜಿಲ್ಲೆಯ ನಾನಾ ಕಡೆ ಆಹಾರ ಸುರಕ್ಷತಾ ಅಧಿಕಾರಿಗಳು ಅಂತ ಓಡಾಡಿಕೊಂಡು ಹಣ ವಸೂಲಿ ಮಾಡಿದ್ದಾರೆ. ಆದರೆ ಈ ವಿಜಯ ಕುಮಾರ್ ಕಳೆದ ಎರಡು ದಿನಗಳಿಂದ ಯಾದಗಿರಿ ನಗರದಲ್ಲಿ ಕಿರಾಣಿ ಅಂಗಡಿ, ಬೇಕರಿ, ರೈಸ್ ಮೀಲ್​ಗಳಿಗೆ ಹೋಗಿ ಹಣ ವಸೂಲಿ ಮಾಡಿದ್ದಾನೆ‌‌. ಸುಮಾರು 200 ರಿಂದ 250 ಅಂಗಡಿಗಳಿಗೆ ಭೇಟಿ ಕೊಟ್ಟು ನಾನಾ ಕಾರಣಗಳನ್ನ ಹೇಳಿಕೊಂಡು ಹಣ ವಸೂಲಿ ಮಾಡಿದ್ದಾನೆ. ಇನ್ನು ಸುಮಾರು 10 ಲಕ್ಷಕ್ಕೂ ಅಧಿಕ ಹಣವನ್ನ ವಸೂಲಿ ಮಾಡಿದ್ದಾನೆ ಅಂತ ಗೊತ್ತಾಗಿದೆ. ವಿಜಯ ಕುಮಾರ್ ಲಾಕ್ ಆಗಿ ಅಂಗಡಿ ಮಾಲೀಕರಿಂದ ಗೂಸಾ ತಿಂದ ವಿಷಯ ಗೊತ್ತಾಗುತ್ತಿದ್ದಂತೆ ಈ ವಿಜಯ ಕುಮಾರ್ ಗ್ಯಾಂಗ್ ಪರಾರಿಯಾಗಿದೆ. ಇನ್ನು ವಿಜಯ ಕುಮಾರ್ ಗಡ ಯಾದಗಿರಿ ನಗರ ಠಾಣೆಯ ಪೊಲೀಸರಿಗೆ ಅಂಗಡಿ ಮಾಲೀಕರು ಒಪ್ಪಿಸಿ ದೂರು ದಾಖಲು ಮಾಡಿದ್ದಾರೆ.

ಒಟ್ನಲ್ಲಿ ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಆಹಾರ ಸುರಕ್ಷತಾ ಅಧಿಕಾರಿ ಅಂತ ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಕೊನೆಗೂ ಲಾಕ್ ಆಗಿ ಧರ್ಮದೇಟು ತಿಂದು ಪೊಲೀಸರ ಅತಿಥಿಯಾಗಿದ್ದಾನೆ‌.

ಯಾದಗಿರಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:02 pm, Sat, 16 December 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ