ಯಾದಗಿರಿ: ನಕಲಿ ದಾಖಲೆ ಸೃಷ್ಟಿಸಿ 18ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿ ಪರಭಾರೆ, ನೋಟಿಸ್ ಜಾರಿ

ಕಳೆದ ನಾಲ್ಕು ವರ್ಷದಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಕೃಷಿ‌‌ ಜಮೀನಿನಲ್ಲಿ ಮನೆ ‌ನಿರ್ಮಾಣಕ್ಕೆ ಖಾತಾಗಳನ್ನ ನೀಡಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಂದ‌ ಲಂಚದ ರೂಪದಲ್ಲಿ‌ ಹಣವನ್ನ ಪಡೆದು ಈ ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ಇದೆ ಕಾರಣಕ್ಕೆ ಯಾದಗಿರಿ ನಗರಾಭಿವೃದ್ದಿ ಕೋಶಾದ ಯೋಜನಾ ನಿರ್ದೇಶಕರು ನೋಟಿಸ್ ನೀಡಿ ಉತ್ತರಿಸುವಂತೆ ತಿಳಿಸಿದ್ದಾರೆ.

ಯಾದಗಿರಿ: ನಕಲಿ ದಾಖಲೆ ಸೃಷ್ಟಿಸಿ 18ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿ ಪರಭಾರೆ, ನೋಟಿಸ್ ಜಾರಿ
ಪ್ರಾತಿನಿಧಿಕ ಚಿತ್ರ
Follow us
ಅಮೀನ್​ ಸಾಬ್​
| Updated By: ಆಯೇಷಾ ಬಾನು

Updated on: Aug 19, 2023 | 12:42 PM

ಯಾದಗಿರಿ, ಆ.19: ನಗರಸಭೆಯಲ್ಲಿ ಬಾರಿ ಗೋಲ್ಮಾಲ್ ನಡೆದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಧಿಕಾರಿಗಳು ಲಂಚದ ಆಸೆಗೆ ಬಾರಿ ಮೋಸದ ಕೆಲಸ ಮಾಡಿ ಸರ್ಕಾರಕ್ಕೆ ಬಾರಿ ನಷ್ಟ ಆಗುವಂತೆ ಮಾಡಿದ್ದಾರೆ. ಸರ್ಕಾರಕ್ಕೆ‌ ಬೊಕ್ಕಸಕ್ಕೆ ಸೇರಬೇಕಿದ್ದ 18 ಕೋಟಿ ಹಣವನ್ನ ಉಳ್ಳವರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಜೇಬು ಸೇರುವಂತೆ ಮಾಡಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.

ಸರ್ಕಾರಕ್ಕೆ ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ನೋಟಿಸ್

ಯಾದಗಿರಿ ನಗರಸಭೆ ಅಧಿಕಾರಿಗಳ ವಿರುದ್ಧ ಕಾರಣ‌ ಕೇಳಿ ನೋಟಿಸ್ ಜಾರಿ‌ ಮಾಡಲಾಗಿದೆ. 2019 ರಿಂದ 2023 ರ‌ ಮಾರ್ಚ್ ವರೆಗೆ ಯಾದಗಿರಿ ನಗರಸಭೆಯ ಪೌರಾಯುಕ್ತರಾಗಿದ್ದ ರಮೇಶ್ ಸುಣಗಾರ, ಬಕ್ಕಪ್ಪ, ಬಿ.ಟಿ‌.ನಾಯಕ ಹಾಗೂ ಶರಣಪ್ಪ ಅವರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ಇವರ ಜೊತೆಗೆ ಹಿಂದೆ ಕಂದಾಯ ಅಧಿಕಾರಿಯಾಗಿದ್ದ ವಿಶ್ವಪ್ರತಾಪ್ ಅಲೆಕ್ಸಾಂಡರ್, ಈಗಿನ ಕಂದಾಯ ಅಧಿಕಾರಿ ನರಸಿಂಹರೆಡ್ಡಿ‌ ಹಾಗೂ ಹಿಂದಿನ ಎಫ್‌ಡಿಎ ರಿಯಾಜೋದ್ದಿನ್ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.

ನೋಟಿಸ್ ಜಾರಿಗೆ ಕಾರಣವಾದ್ರು ಏನು?

ನಗರಸಭೆ ಈ ಆರು ಜನ ಅಧಿಕಾರಿಗಳು ಕಳೆದ ನಾಲ್ಕು ವರ್ಷದಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಕೃಷಿ‌‌ ಜಮೀನಿನಲ್ಲಿ ಮನೆ ‌ನಿರ್ಮಾಣಕ್ಕೆ ಖಾತಾಗಳನ್ನ ನೀಡಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಂದ‌ ಲಂಚದ ರೂಪದಲ್ಲಿ‌ ಹಣವನ್ನ ಪಡೆದು ಈ ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ಇದೆ ಕಾರಣಕ್ಕೆ ಯಾದಗಿರಿ ನಗರಾಭಿವೃದ್ದಿ ಕೋಶಾದ ಯೋಜನಾ ನಿರ್ದೇಶಕರು ನೋಟಿಸ್ ನೀಡಿ ಉತ್ತರಿಸುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ: ವಿದೇಶಿ ಉಡುಗೊರೆ ಹಗರಣ: ಫೇಸ್ ಬುಕ್ ಸ್ನೇಹಿತರಿಂದ ಬೆಂಗಳೂರಿನ ವ್ಯಕ್ತಿಗೆ 5 ಲಕ್ಷ ರೂ ವಂಚನೆ

ಆಗಿರುವ ಹಗರಣವಾದ್ರು ಏನು?

ರಿಯಲ್ ಎಸ್ಟೇಟ್ ಉದ್ಯಮಿಗಳು ಲೇಔಟ್ ಮಾಡಿ ನಿವೇಶನಗಳನ್ನ‌ ಮಾರಾಟ ಮಾಡಬೇಕು ಅಂದ್ರೆ ಸರ್ಕಾರದ ಸಾಕಷ್ಟು ನಿಯಮಗಳನ್ನ ಪಾಲನೆ ಮಾಡಬೇಕಾಗುತ್ತೆ. ಮೊದಲನೆಯದಾಗಿ ಕೃಷಿ ಜಮೀನನ್ನ ಕೃಷಿ ಏತರ ಅಂದ್ರೆ‌ ಎನ್.ಎ ಮಾಡಿಸಿಕೊಳ್ಳಬೇಕೆಂದ್ರೆ ಜಿಲ್ಲಾಧಿಕಾರಿಗಳ‌ ಮೂಲಕ ಪ್ರತಿ ಎಕರೆ ಸರ್ಕಾರಿ ಫೀ‌ 25 ಸಾವಿರ‌ ಹಣ‌ ಕಟ್ಟಿ ಮಾಡಿಸಿಕೊಳ್ಳಬೇಕು. ಇದಾದ ಬಳಿಕ ಲೇಔಟ್ ನಿರ್ಮಾಣಕ್ಕೆ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಬಳಿಕ ಲೇಔಟ್ ಡೆವಲಪ್ಮೆಂಟ್ ಮಾಡಬೇಕು. ಹೀಗಾಗಿ ಒಂದು ಎಕರೆಯಲ್ಲಿ ಲೇಔಟ್ ನಿರ್ಮಾಣ ಮಾಡಿ ನಿವೇಶನಗಳನ್ನ ಮಾರಾಟ ಮಾಡಬೇಕು ಅಂದ್ರೆ ಸುಮಾರು 30 ರಿಂದ 35 ಲಕ್ಷ ಹಣ ಖರ್ಚು ಮಾಡಬೇಕು. ಆದ್ರೆ ಈ ಯಾವುದೇ ನಿಯಮ ಪಾಲನೆ ಮಾಡದೆ ಸರ್ಕಾರಕ್ಕೆ ಮೋಸ‌ ಮಾಡಿ ಅಧಿಕಾರಿಗಳ‌ ಜೇಬು ತುಂಬಿಸಿ ನಿವೇಶನಗಳನ್ನ ಮಾರಾಟ ಮಾಡಲಾಗಿದೆ.

ಅಧಿಕಾರಿಗಳು ಮಾಡಿದ್ದೇನು?

ರಿಯಲ್ ಎಸ್ಟೇಟ್ ಉದ್ಯಮಿಗಳು ಸರ್ಕಾರದ ಯಾವುದೇ‌ ನಿಯಮ ಪಾಲನೆ ಮಾಡದೆ ಲೇಔಟ್ ಮಾಡಿ ನಿವೇಶನಗಳನ್ನ ಮಾರಾಟ‌ ಮಾಡಿದ್ದಾರೆ. ಇನ್ನು ಇದ್ದಕ್ಕೆ ನಗರಸಭೆ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಿಂದ 12 ವರ್ಷಗಳ‌ ಹಿಂದೆ ಯಾದಗಿರಿ ನಗರಸಭೆ ಆಯುಕ್ತರಾಗಿ ಕೆಲಸ‌‌ ಮಾಡಿದ ಸದ್ಯ ಮೃತ ಪಟ್ಟಿರುವ ಎನ್‌ಡಿ‌‌ ಮನಗೂಳಿ ಹೆಸರಲ್ಲಿ‌ ದಾಖಲೆಗಳನ್ನ ಸೃಷ್ಟಿಸಿ ಸಮಾರು 45 ಎಕರೆ ಜಮೀನಿನಲ್ಲಿ 1310 ಖಾತಾಗಳನ್ನ ನೀಡಿದ್ದಾರೆ. ಈ ವಿಚಾರವನ್ನ ಈಗಿನ ನಗರಸಭೆ ಆಯುಕ್ತರ ಸಂಗಪ್ಪ ಉಪಾಸೆ ಅವರು ಬಯಲಿಗೆಳೆದು ಕಲಬುರ್ಗಿ ವಿಭಾಗೀಯ ಆಯುಕ್ತರಿಗೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಕೊಳ್ಳುವಂತೆ ದೂರು ನೀಡಿದ್ದಾರೆ. ಈಗ ನಗರಾಭಿವೃದ್ಧಿ ಕೋಶಾದ ಯೋಜನಾ ನಿರ್ದೇಶಕರು ಈ ಎಲ್ಲಾ ಏಳು ಜನರಿಗೆ ನೋಟಿಸ್ ನೀಡಿ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.

ಯಾದಗಿರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ