ಯಾದಗಿರಿ: ಅಪ್ರಾಪ್ತೆಯೊಂದಿಗೆ ಪ್ರೀತಿಯ ನಾಟಕ, 2 ವರ್ಷ ಲೈಂಗಿಕ ದೌರ್ಜನ್ಯವೆಸಗಿದ ಪೊಲೀಸ್ ಕಾನ್ಸ್​ಟೇಬಲ್​

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಸೈದಾಪುರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್​​ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಎರಡು ವರ್ಷ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಬಾಲಕಿ 18 ವರ್ಷದವಾಳದ ಮೇಲೆ ಮದುವೆ ಮಾಡಿಕೊಂಡದರೂ ಪೊಲೀಸ್ ಕಾನ್ಸ್ಟೇಬಲ್ ಆಕೆಯನ್ನು ಮನೆ ಸೇರಿಸಿಕೊಂಡಿಲ್ಲ. ಸದ್ಯ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಯಾದಗಿರಿ: ಅಪ್ರಾಪ್ತೆಯೊಂದಿಗೆ ಪ್ರೀತಿಯ ನಾಟಕ, 2 ವರ್ಷ ಲೈಂಗಿಕ ದೌರ್ಜನ್ಯವೆಸಗಿದ ಪೊಲೀಸ್ ಕಾನ್ಸ್​ಟೇಬಲ್​
ಪೊಲೀಸ್ ಕಾನ್ಸ್​ಟೇಬಲ್ ಬಲರಾಮ
Edited By:

Updated on: Apr 09, 2025 | 11:56 AM

ಯಾದಗಿರಿ, ಏಪ್ರಿಲ್​ 09: ಜನರಿಗೆ ಪೊಲೀಸರು (police) ಅಂದರೆ ಭಯ, ಗೌರವ ಎರಡೂ ಇದೆ. ನಾಡಿನ ಗಡಿಯ ರಕ್ಷಣೆಗೆ ಸೈನಿಕನಂತೆ, ಸಮಾಜದ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಸದಾ ಮುಂದಿರುತ್ತಾರೆ. ತಮ್ಮ ಜೀವನವನ್ನು ಲೆಕ್ಕಿಸದೇ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ ಇವರ ನಡುವೆಯೇ ಇರುವ ಕೆಲ ಪೊಲೀಸರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಇದೀಗ ಓರ್ವ ಪೊಲೀಸ್ ಕಾನ್ಸ್​ಟೇಬಲ್​ಯಿಂದ (police constable) ಇಲಾಖೆಗೆ ಕಳಂಕ ತರುವಂತಹ ಘಟನೆಯೊಂದು ನಡೆದಿದೆ. ಪ್ರೀತಿಯ ನಾಟಕವಾಡಿ ಅಪ್ರಾಪ್ತೆ ಮೇಲೆ 2 ವರ್ಷ ನಿರಂತರ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ.

ಸೈದಾಪುರ ಠಾಣೆ ಕಾನ್ಸ್​ಟೇಬಲ್ ಬಲರಾಮನಿಂದ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಬಾಲಕಿಯು 16 ವರ್ಷದವಳಿದ್ದಾಗಲೇ ಪುಸಲಾಯಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಪೊಲೀಸ್ ಪೇದೆ, ಬಳಿಕ ಎರಡು ವರ್ಷ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಗರ್ಭಿಣಿ ಆಗಿದ್ದ ಬಾಲಕಿಗೆ ಟ್ಯಾಬ್ಲೆಟ್ ಕೊಟ್ಟು ಮಗು ತೆಗೆಸಿದ ಆರೋಪ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಪ್ರೇಮ ವಿವಾಹಕ್ಕೆ ಐವರ ಕೊಲೆ ಕೇಸ್​: ಮೂವರಿಗೆ ಗಲ್ಲು, 9 ಮಂದಿಗೆ ಜೀವಾವಧಿ ಶಿಕ್ಷೆ

ಇದನ್ನೂ ಓದಿ
ರಾಯಚೂರು ಪೊಲೀಸರು ಥಳಿಸಿದ್ದಕ್ಕೆ ವ್ಯಕ್ತಿ ಸಾವು ಕೇಸ್​ಗೆ ಟ್ವಿಸ್ಟ್
ಹೆಂಡ್ತಿ ಜೀವನಾಂಶ ಕೇಳಿದ್ದಕ್ಕೆ ಯುಗಾದಿಯಂದೇ ಗಂಡ ರಾಕ್ಷಸ ಅವತಾರ!
ಬೆಚ್ಚಿಬೀಳಿಸಿದ್ದ ಭೀಕರ ಕೊಲೆ: 31 ಬಾರಿ ಇರಿದು ಕೊಂದವರು ಸಿಕ್ಕಿಬಿದ್ದರು
ಅಪಘಾತ: ಮಂತ್ರಾಲಯ ಸಂಸ್ಕೃತ ಶಾಲೆಯ 3 ವಿದ್ಯಾರ್ಥಿಗಳು ಸೇರಿ ನಾಲ್ವರ ಸಾವು

ಬಾಲಕಿಗೆ 18 ವರ್ಷ ತುಂಬುತ್ತಿದ್ದಂತೆ 2024ರ ಡಿಸೆಂಬರ್​ನಲ್ಲಿ ಪಿಸಿ ಬಲರಾಮ ರಿಜಿಸ್ಟರ್ ‌ಮ್ಯಾರೇಜ್ ಆಗಿದ್ದಾರೆ. ಇತ್ತ ಬಲರಾಮ ಕುಟುಂಬ ಬಾಲಕಿಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಬಾಲಕಿಗೂ, ನನಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಪಿಸಿ ಬಲರಾಮ. ಹೀಗಾಗಿ ಬಾಲಕಿ ಮತ್ತು ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಲರಾಮ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ.

ವಿಧವೆ ಮಹಿಳೆಯ ಜೊತೆ ಲವ್, ಸೆಕ್ಸ್ ದೋಖಾ

ಇತ್ತೀಚೆಗೆ ಜಿಲ್ಲೆಯ ಶಹಾಪುರ ತಾಲೂಕಿನ ಬಸವಂತಪುರ ಗ್ರಾಮದಲ್ಲೊಂದು ಲವ್, ಅತ್ಯಾಚಾರ ಮಾಡಿ ದೋಖಾ ಮಾಡಿದ್ದ ಘಟನೆಯೊಂದು ನಡೆದಿತ್ತು. ಹತ್ತು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡ ವಿಧವೆ ಮಹಿಳೆ, ತನಗಿರುವ ಒಬ್ಬ ಮಗನನನ್ನು ಓದಿಸುತ್ತಾ ಹೇಗೋ ಸಂಸಾರ ಮಾಡುತ್ತಿದ್ದಳು. ಸಂಕಷ್ಟದ ಸಮಯದಲ್ಲಿ ವಿಧವೆ ಮಹಿಳೆಗೆ ಪರಿಚಯವಾದ ಓರ್ವ  ವ್ಯಕ್ತಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದ. ನಯವಂಚಕನ ಬಣ್ಣ ಬಣ್ಣದ ಮಾತಿಗೆ ಮರುಳಾಗಿದ್ದ ವಿಧವೆ ಮಹಿಳೆ ಮೋಸ ಹೋಗಿದ್ದಳು. ಅದು ಕೂಡ ಲಕ್ಷಾಂತರ ರೂ. ಹಣ ಲಪಟಾಯಿಸಿ ನಡು ನೀರಲ್ಲಿ ಕೈ ಬಿಟ್ಟಿದ್ದ.

ವಿಧವೆ ಮಹಿಳೆ ಸುವರ್ಣಾಳ ಜೊತೆ ಪ್ರೀತಿ-ಪ್ರೇಮದ ನಾಟಕವಾಡಿದ ಮಾಳಪ್ಪ, ಗಂಡನನ್ನು ಕಳೆದುಕೊಂಡ‌ ನಿನಗೆ ಗಂಡನ ಸ್ಥಾನ ಕೊಡುತ್ತೇನೆ, ನಾವಿಬ್ಬರು ಹಾಲು-ಜೇನಿನಂತೆ ಸುಖ-ಸಂಸಾರದಿಂದ ಕೂಡಿ ಬಾಳೋಣ ಅಂತ ಹೇಳಿದ್ದ.

ಇದನ್ನೂ ಓದಿ: ಕೋಟ್ಯಂತರ ರೂ. ದೋಚಿದ್ದವ ಸಿಕ್ಕಿಬಿದ್ದ: ಲಕ್ಕಿ ಭಾಸ್ಕರ್ ಆಗಲು ಹೋದ ಬ್ಯಾಂಕ್​ ಮ್ಯಾನೇಜರ್​ನ ಅನ್​ ಲಕ್ಕಿ ಕಥೆ!

ಮಾಳಪ್ಪ ಮೇಲಿನ ಪ್ರೀತಿ, ವಿಶ್ವಾಸದಿಂದ ಈ ಸುವರ್ಣಾ ತೆಲಂಗಾಣದಲ್ಲಿರುವ ತನ್ನ ನಾಲ್ಕುವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ದರು. ಜಮೀನು ಮಾರಿದ ಸುಮಾರು 80 ಲಕ್ಷ ರೂ. ಹಣವನ್ನು ನಂಬಿಸಿ ಮಾಳಪ್ಪ ತೆಗೆದುಕೊಳ್ಳುತ್ತಾನೆ. ಆಕೆಯ ಹೆಸರಿನಲ್ಲಿದ್ದ ಇನ್ನು ಆಸ್ತಿ-ಪಾಸ್ತಿ, ದುಡ್ಡು-ಬಂಗಾರವನ್ನು ಸಹ ಮಾರಿಕೊಂಡು ತಿಂದಿದ್ದಾನೆ. ವಂಚನೆ ಗೊತ್ತಾದ ಬಳಿಕ ಸುವರ್ಣಾ ಶಹಾಪುರ ಪೋಲಿಸ್ ಠಾಣೆಯಲ್ಲಿ ಮಾಳಪ್ಪನ ವಿರುದ್ಧ ದೂರು ನೀಡಿದ್ದು, ಕೇಸ್ ಸಹ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:54 am, Wed, 9 April 25