AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಂತರ ರೂ. ದೋಚಿದ್ದವ ಸಿಕ್ಕಿಬಿದ್ದ: ಲಕ್ಕಿ ಭಾಸ್ಕರ್ ಆಗಲು ಹೋದ ಬ್ಯಾಂಕ್​ ಮ್ಯಾನೇಜರ್​ನ ಅನ್​ ಲಕ್ಕಿ ಕಥೆ!

ಇತ್ತೀಚೆಗೆ ತೆಲುಗಿನ ‘ಲಕ್ಕಿ ಭಾಸ್ಕರ್’ ಸಿನಿಮಾ ತೆರೆಕಂಡು ಭರ್ಜರಿ ಯಶಸ್ವಿ ಕಂಡಿತ್ತು. ಆ ಚಿತ್ರದಲ್ಲಿ ನಟ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್​​ನಲ್ಲೇ ಹಣವನ್ನು ಕದ್ದು ಬೇರೆಡೆ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡುತ್ತಾನೆ. ಅದರಂತೆ ರಾಯಚೂರಿನಲ್ಲೊಬ್ಬ ಲಕ್ಕಿ ಭಾಸ್ಕರ್‌ ಸಿನಿಮಾ ಶೈಲಿಯಲ್ಲಿ ವಂಚನೆ ಮಾಡಿದ್ದವ ಸಿಕ್ಕಿಬಿದ್ದಿದ್ದಾನೆ. ಲಕ್ಕಿ ಭಾಸ್ಕರ್ ಆಗಲು ಹೋದ ಬ್ಯಾಂಕ್​ ಮ್ಯಾನೇಜರ್​ನ ಅನ್​ ಲಕ್ಕಿ ಕಥೆ ಇಲ್ಲಿದೆ.

ಕೋಟ್ಯಂತರ ರೂ. ದೋಚಿದ್ದವ ಸಿಕ್ಕಿಬಿದ್ದ: ಲಕ್ಕಿ ಭಾಸ್ಕರ್ ಆಗಲು ಹೋದ ಬ್ಯಾಂಕ್​ ಮ್ಯಾನೇಜರ್​ನ ಅನ್​ ಲಕ್ಕಿ ಕಥೆ!
ನರೇಂದ್ರ ರೆಡ್ಡಿ, ಅರುಣಾ ದೇವಿ
ಭೀಮೇಶ್​​ ಪೂಜಾರ್
| Edited By: |

Updated on: Apr 08, 2025 | 7:55 PM

Share

ರಾಯಚೂರು, (ಏಪ್ರಿಲ್ 08): ಆತ ಐನಾತಿಗಳಲ್ಲೇ ಐನಾತಿ. ಲಕ್ಕಿ ಭಾಸ್ಕರ್ (Lucky Bhaskar) ಸಿನೆಮಾದಂತೆ ಕೋಟಿ ಕೋಟಿ ವಂಚಿಸಿದ್ದ ಬ್ಯಾಂಕ್​ನ ಮ್ಯಾನೇಜರ್ ನನ್ನು ರಾಯಚೂರು ಪೊಲೀಸರು (Raichur Police) ಕೂಡ ಸಿನೆಮಾ ಸ್ಟೈಲ್​​ನಲ್ಲೇ ಹೆಡೆಮುರಿಕಟ್ಟಿದ್ದಾರೆ. ಅಷ್ಟೇ ಅಲ್ಲ ಆತನಿಗೆ ಸಪೋರ್ಟ್ ಮಾಡುತ್ತಿದ್ದ ಆಂಧ್ರ ಪ್ರದೇಶದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಕೂಡ ಲಾಕ್ ಆಗಿದ್ದು, ತನ್ನ ಗುರುತು ಮರೆಮಾಚಲು ಆ ಕಿಲಾಡಿ ತನ್ನ ಗೆಟಪ್​​ ಅನ್ನೇ ಬದಲಿಸಿಕೊಂಡಿದ್ದ. ಆದರೂ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು ನಗರದ ಬ್ಯಾಂಕ್​ ಆಫ್ ಮಹಾರಾಷ್ಟ್ರ (Bank of Maharashtra) ಶಾಖೆಯ ಮ್ಯಾನೇಜರ್ ನರೇಂದ್ರ ರೆಡ್ಡಿ ತೆಲುಗಿನ ಲಕ್ಕಿ ಭಾಸ್ಕರ್ ಸಿನೆಮಾದಂತೆ ವಿವಿಧ ರೀತಿ ತಾಂತ್ರಿಕವಾಗಿ ಯಾಮಾರಿಸಿ ಕೋಟಿ ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದು. ಆದ್ರೆ ಆ ಸಿನಿಮಾ ಲಕ್ಕಿ ಭಾಸ್ಕರ್​ ಸಕ್ಸಸ್ ಆಗಿದ್ದರೆ, ಉತ್ತ ಅದೇ ಮಾದರಿಯಲ್ಲೇ ಹಣ ಮಾಡಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ನರೇಂದ್ರ ರೆಡ್ಡಿ ಸಿಕ್ಕಿಬಿದ್ದಿದ್ದಾನೆ.

ಅದು ಬ್ಯಾಂಕ್​ನಲ್ಲಿ ಡಿಪಾಸಿಟ್ ಮಾಡುವವರು ಹಾಗೂ ಗೋಲ್ಡ್ ಲೋನ್ ಪಡೆಯುವ ಗ್ರಾಹಕರನ್ನ ಬೆಚ್ಚಿ ಬೀಳುವಂತೆ ಮಾಡಿದ್ದ ಪ್ರಕರಣ.  ರಾಯಚೂರು ನಗರದ ಬ್ಯಾಂಕ್​ ಆಫ್ ಮಹಾರಾಷ್ಟ್ರ ಶಾಖೆಯ ಮ್ಯಾನೇಜರ್ ನರೇಂದ್ರ ರೆಡ್ಡಿ ತೆಲುಗಿನ ಲಕ್ಕಿ ಭಾಸ್ಕರ್ ಸಿನೆಮಾದಂತೆ ವಿವಿಧ ರೀತಿ ತಾಂತ್ರಿಕವಾಗಿ ಯಾಮಾರಿಸಿ ಕೋಟಿ ಕೋಟಿ ವಂಚಿಸಿದ್ದ. 2022-2025 ರ ವರೆಗೆ ಸಣ್ಣ ಸುಳಿವೂ ಸಿಗದೇ ಇರೋ ಹಾಗೇ ಚಾಲಾಕಿ ನರೇಂದ್ರ ರೆಡ್ಡಿ ತನ್ನ ವ್ಯಾಪ್ತಿಯಲ್ಲಿ ಅವ್ಯವಹಾರ ಎಸಗಿದ್ದ. ಬ್ಯಾಂಕ್ ಆಫ್ ಮಹಾರಾಷ್ಟ್ರ ದಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದ. ಆ ಪೈಕಿ 29 ಖಾತೆಗಳಿಗೆ ಹಣ ವರ್ಗಾವಣೆಯನ್ನೂ ಮಾಡಿ ಒಂದೊಂದು ರೂಪಾಯಿ ಬಿಡದಂತೆ ಹಣ ಎಗರಿಸುತ್ತಲೇ ಇದ್ದ. ನಕಲಿ ಗೋಲ್ಡ್ ತಾನೇ ಇಟ್ಟು ಅಸಲಿ ಗೋಲ್ಡ್ ಲೋನ್ ಮಂಜೂರು ಮಾಡಿ ಆ ಹಣವನ್ನ ನಕಲಿ ಖಾತೆಗಳಿಗೆ ವರ್ಗಾಯಿಸುತ್ತಿದ್ದ. ಇದಲ್ಲದೇ ಅಸಲಿ ಗೋಲ್ಡ್ ಲೋನ್ ಹೊಂದಿದವರಿಗೂ ತನ್ನದೇ ಸ್ಟೈಲ್ ನಲ್ಲಿ ಮೋಸ ಮಾಡಿ ವಿವಿಧ ಮಾದರಿಯಲ್ಲಿ‌ ಬರೋಬ್ಬರಿ 10 ಕೋಟಿ‌ 97 ಲಕ್ಷ ರೂ. ವಂಚಿಸಿದ್ದ. ಆದ್ರೆ, ಆಡಿಟ್ ವೇಳೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಬ್ಯಾಂಕ್​ನ ಹಿರಿಯ ಅಧಿಕಾರಿಗಳು ರಾಯಚೂರಿನ ಸಿಇಎನ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದರು.ಇದರ ಬೆನ್ನಲ್ಲೇ ಎಸ್ಕೇಪ್ ಆಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್​ನನ್ನ ರಾಯಚೂರು ಪೊಲೀಸರು ಈಗ ಸದ್ದಲಿಲ್ಲದೇ ಹೆಡೆಮುರಿ ಕಟ್ಟಿ ಲಕ್ಕಿ ಭಾಸ್ಕರನನ್ನ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ರಾಯಚೂರು RDCC ಬ್ಯಾಂಕ್​ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ! ತನಿಖೆಯಲ್ಲಿ ಬಯಲಾಯ್ತು ಮ್ಯಾನೇಜರ್ ಕಳ್ಳಾಟ

ವೇಷ ಬದಲಿಸಿಕೊಂಡು ತಿರುಗುತ್ತಿದ್ದ ಆರೋಪಿ

10 ಕೋಟಿ ವಂಚನೆ ಬಳಿಕ ಆರೋಪಿ ವಿವಿಧ ರೀತಿ ತನ್ನ ಗುರುತನ್ನೇ ಬದಲಿಸಿಕೊಂಡಿದ್ದ. ಮೊದಲು ಟಿಪ್ ಟಾಪ್ ಆಗಿ ಬ್ಲೇಜರ್ ಹಾಕಿ ಫೋಸು ಕೊಡುತ್ತಿದ್ದ ಆರೋಪಿ ಮ್ಯಾನೇಜರ್ ನರೇಂದ್ರ ರೆಡ್ಡಿ ತಲೆ ಮರೆಸಿಕೊಂಡ ಬಳಿಕ ಬಿಳಿ ಗಡ್ಡ ಬಿಟ್ಟಿದ್ದ. ಅಲ್ಲದೇ ಸಾದಾ ಬಟ್ಟೆಗಳನ್ನ ಹಾಕಿಕೊಂಡು ಕಣ್ಣಿಗೆ ಸ್ಪೆಕ್ಟ್ಸ್ ಕೂಡ ಹಾಕಿಕೊಂಡಿದ್ದ. ಈ ಮೂಲಕ ತನ್ನ ಗುರುತು ಪತ್ತೆಯಾಗದ ರೀತಿ ಓಡಾಡುತ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ. ಇದಲ್ಲದೇ ಆರೋಪಿ ಬರೀ ವಾಟ್ಸಪ್ ಕಾಲ್​ನಲ್ಲಿ ಮಾತನಾಡೋದು,ವಿವಿಧ ಪುಣ್ಯ ಕ್ಷೇತ್ರಗಳಿಗೆ ಹೋಗಿ ಅಲ್ಲೇ ತಲೆ ಮರೆಸಿಕೊಳ್ಳುತ್ತಿದ್ದ. ಈ ವಿಚಾರವನ್ನು ತಿಳಿದ ಖಾಕಿ ಪಡೆ ಕಾರ್ಯಚರಣೆಗಿಳಿತು.

ಇದನ್ನೂ ಓದಿ
Image
ರಾಯಚೂರು ಪೊಲೀಸರು ಥಳಿಸಿದ್ದಕ್ಕೆ ವ್ಯಕ್ತಿ ಸಾವು ಕೇಸ್​ಗೆ ಟ್ವಿಸ್ಟ್
Image
ರಾಯಚೂರಿನ ಈ ಹೊಸ ತಾಲ್ಲೂಕಿಗೆ ಹೋಗಲು ಜನರು ಹಿಂದೇಟು: ಕಾರಣವೇನು?
Image
ಹೊಟ್ಟೆ ತುಂಬಾ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟ ಐನಾತಿಗಳು ಲಾಕ್​​
Image
ಲಿಂಗಸುಗೂರು: ತಹಶೀಲ್ದಾರ್ ಕಚೇರಿಯ ಖಾತೆಗಳಲ್ಲಿದ್ದ ಹಣ ಅಕ್ರಮವಾಗಿ ವರ್ಗಾವಣೆ

ಆರೋಪಿ ಚಾಪೆ ಕೆಳಗೆ ನುಗ್ಗಿದ್ರೆ, ರಂಗೋಲಿ ಕೆಳಗೆ ಪೊಲೀಸ್ರು

ಬ್ಯಾಂಕ್​ನಲ್ಲಿ ಕೈಚಳಕ ತೋರಿದ್ದ ನರೇಂದ್ರ ರೆಡ್ಡಿ ಜೊತೆ ಆತನ ಜೊತೆ ಕೈ ಜೋಡಿಸಿದ್ದ ಅರುಣಾ ದೇವಿಯನ್ನೂ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಈ ಖತರ್ನಾಕ್ ನರೇಂದ್ರ ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗಿದ್ರು. ಸಿನೆಮಾ ಸ್ಟೈಲ್​ನಲ್ಲಿ ಗ್ರಾಹಕರಿಗೆ ಚಮಕ್ ಕೊಟ್ಟಿದ್ರೆ, ರಾಯಚೂರು ಪೊಲೀಸರು ಕೂಡ ಸಿನೆಮಾ ಸ್ಟೈಲ್​ನಲ್ಲೇ ಆತನಿಗೆ ಖೆಡ್ಡಾ ತೋಡಿದ್ದಾರೆ. ಟೆಕ್ನಿಕಲ್ ಆಯಾಮದಲ್ಲೇ ರಾಯಚೂರು ಸಿಇಎನ್ ಪೊಲೀಸರು ಆಗಂತುಕನ್ನ ಬಂಧಿಸಿದ್ದಾರೆ. ತನಿಖೆ ವೇಳೆ ಆಂಧ್ರ ಮೂಲದ ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಅರುಣಾ ದೇವಿ ಹಾಗೂ ನರೇಂದ್ರ ಇಬ್ಬರು ಆಂಧ್ರಪ್ರದೇಶದಲ್ಲಿ ಮಾಜಿ ಸಹೋದ್ಯೋಗಿಗಳು. ಅಲ್ಲಿನ ಪರಿಚಯಂದಿಂದ ನರೇಂದ್ರ ಇಲ್ಲಿ ಕೃತ್ಯ ಎಸಗುವುದರಲ್ಲಿ ಆಕೆ ಕೂಡ ಭಾಗಿಯಾಗಿದ್ದಾಳೆ. ಹೀಗಾಗಿ ಆಕೆಗೂ ಸಹ ಪೊಲೀಸರು ಜೈಲೂಟ ಬಡಿಸಿದ್ದಾರೆ.

ಇತ್ತ 10 ಕೋಟಿ ರೂ. ವಂಚನೆಯಲ್ಲಿ ನರೇಂದ್ರನಿಂದ ಸದ್ಯ ಬರೀ 78 ಸಾವಿರ ರೂಪಾಯಿ ಮಾತ್ರ ಸೀಜ್ ಆಗಿದೆ. ಉಳಿದ ಹಣ ಎಲ್ಲಿಟ್ಟಿದ್ದಾರೆ? ಹೇಗೆಲ್ಲಾ ಬಳಕೆ ಮಾಡಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ನಕಲಿ ಖಾತೆಗಳಿಗೆ ಸಂಬಂಧಿಸಿದಂತೆಯೂ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ