ಹೊಟ್ಟೆ ತುಂಬಾ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟ ಐನಾತಿಗಳು ಲಾಕ್
ಮೊನ್ನೆಯಷ್ಟೇ ಖೋಟಾ ನೋಟು ಪ್ರಿಂಟ್ ವಿಚಾರವಾಗಿ ರಾಯಚೂರಿನಲ್ಲಿ ನಾಲ್ವರ ಬಂಧನವಾಗಿತ್ತು. ಇದೀಗ ಅದರ ಬೆನ್ನಲ್ಲೇ ನಗರದಲ್ಲಿ ಫೇಕ್ ಕರೆನ್ಸಿ ಜಾಲ ಸಾರ್ವಜನಿಕರ ನಿದ್ದೆಗೆಡಿಸಿದೆ. ಹೋಟೆಲ್ವೊಂದರಲ್ಲಿ ಬಿರಿಯಾನಿ ತಿಂದು 500 ಖೋಟಾ ನೋಟು ಕೊಟ್ಟು ಆರೋಪಿಗಳಿಬ್ಬರು ಪರಾರಿಯಾಗಿರುವಂತಹ ಘಟನೆ ನಡೆದಿದೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು, ಮಾರ್ಚ್ 21: ಅವರು ಮದುವೆ ಸಾಲ ಸೇರಿದಂತೆ ಅದು, ಇದು ಅಂತ ಮೈ ತುಂಬ ಸಾಲ ಮಾಡ್ಕೊಂಡಿದ್ದ. ಸುಲಭವಾಗಿ ಹಣ ಗಳಿಸ್ಬೇಕು ಅಂತ ಇನ್ಸ್ಟಾಗ್ರಾಂ ಹಣ ಡಬ್ಲಿಂಗ್ (money Doubling) ವಿಡಿಯೋ ನೋಡಿದ್ದ. ಅದರಂತೆ ತನ್ನ ಸ್ನೇಹಿತನ ಜೊತೆ ಸೇರಿ ದೂರದ ಮಹಾರಾಷ್ಟ್ರದ ವ್ಯಕ್ತಿಯೊಂದಿಗೆ ಡೀಲ್ ಕುದುರಿಸಿದ್ದರು. ಮಹಾರಾಷ್ಟ್ರಕ್ಕೆ ಹೋಗಿ 1 ಲಕ್ಷ ರೂ ಅಸಲಿ ಹಣ ಕೊಟ್ಟು 7 ಲಕ್ಷ ರೂ ಖೋಟಾ ನೋಟು (Fake Currency) ತಂದಿದ್ದಾರೆ. ಬಳಿಕ ನಗರದಲ್ಲಿ 500 ಖೋಟಾ ನೋಟು ಚಲಾವಣೆ ಮಾಡಲು ಹೋಗಿ ಆರೋಪಿಗಳು ಪೊಲೀಸರಿಗೆ ಲಾಕ್ ಆಗಿದ್ದಾರೆ. ಬಾಕಿ ಉಳಿದ 6.5 ಲಕ್ಷ ರೂ ಖೋಟಾ ನೋಟಿನ ಬಗ್ಗೆ ತನಿಖೆ ನಡೆದಿದೆ.
500 ರೂ ನಕಲಿ ನೋಟು ಕೊಟ್ಟು ಪರಾರಿ
ಇದೇ ಮಾರ್ಚ್ 17 ರ ರಾತ್ರಿ ರಾಯಚೂರು ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಹೋಟೆಲ್ವೊಂದಕ್ಕೆ ಮಂಜುನಾಥ್ ಹಾಗೂ ರಮೇಶ್ ಅನ್ನೋರು ಹೋಗಿದ್ದಾರೆ. ಹೊಟ್ಟೆ ತುಂಬ ಚಿಕನ್ ಬಿರಿಯಾನಿ ಕೂಡ ಚಪ್ಪರಿಸಿ ತಿಂದಿದ್ದಾರೆ. ವಾಟರ್ ಬಾಟಲ್ ಎಲ್ಲಾ ಸೇರಿ 500 ರೂ.ಬಿಲ್ ಆಗಿತ್ತು. ಆದರೆ ಮಂಜುನಾಥ್ ಹಾಗೂ ರಮೇಶ್ ಹೋಟೆಲ್ನವ್ನಿಗೆ 500 ರೂ ನಕಲಿ ನೋಟು ಕೊಟ್ಟು ಪರಾರಿಯಾಗಿದ್ದಾರೆ. ಇದಾದ ಬಳಿಕ ಆ ನಕಲಿ ನೋಟನ್ನು ಹೋಟೆಲ್ ಸಿಬ್ಬಂದಿ ನೋಡಿ ಮಾರ್ಕೆಟ್ ಯಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಮಂಜುನಾಥ್ ಹಾಗೂ ರಮೇಶ್ ಕೆಲಹೊತ್ತಲ್ಲೇ ಲಾಕ್ ಆಗಿದ್ದಾರೆ.
ಇದನ್ನೂ ಓದಿ: ವಾಟ್ಸಪ್ ಗ್ರೂಪಿನಲ್ಲಿ ಹಾಸ್ಯಾಸ್ಪದ ಎಮೋಜಿ ಹಾಕಿದ್ದಕ್ಕೆ ಕಿರಿಕ್: ಮನೆಗೆ ನುಗ್ಗಿ ದಾಂಧಲೆ
ಆರೋಪಿ ಮಂಜುನಾಥ್ ಮದುವೆ ಸಾಲ ಸೇರಿ ಅದು, ಇದು ಅಂತ ಸುಮಾರು 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದನಂತೆ. ಹೀಗಾಗಿ ಸುಲಭವಾಗಿ ಹಣ ಗಳಿಸುವ ಯೋಚನೆ ಮಾಡಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನ ಹುಡುಕ್ತಿದ್ದ. ಆಗ ಮಹಾರಾಷ್ಟ್ರ ಮೂಲದ ಓರ್ವ ಆನ್ಲೈನ್ನಲ್ಲೇ ಈತನನ್ನ ನಂಬಿಸಿ 1 ಲಕ್ಷಕ್ಕೆ 3.5 ಲಕ್ಷ ರೂ ಅಸಲಿ ಹಣ ಕೊಡುತ್ತೇವೆ. ಇದು ಸತ್ಯ ಯಾರಿಗೂ ಹೇಳ್ಬೇಡ. ಇದು ಪುಣ್ಯದ ಕೆಲಸ ಅಂತ ಮೈಂಡ್ ವಾಷ್ ಮಾಡಿದ್ದ.
ತನಿಖೆಯಲ್ಲಿ ಬಯಲಾದ ಅಸಲಿಯತ್ತೇನು?
ಆಗ ಮಂಜುನಾಥ್ ತನ್ನ ಸ್ನೇಹಿತ ರಮೇಶ್ನನ್ನ ಕರೆದುಕೊಂಡು ಸೀದಾ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ 1 ಲಕ್ಷ ರೂ ಅಸಲಿ ಹಣ ನೀಡಿ 3.5 ಲಕ್ಷ ರೂ ಹಣ ಪಡೆದಿದ್ದ. ನಂತರ ಅದು ಅಸಲಿ ಹಣ ಅಂತ ನಂಬಿಕೊಂಡು ಬಂದಿದ್ದಾರೆ. ಆದರೆ ಟ್ರೈನ್ನಲ್ಲಿ ಬರುವಾಗ ಅದೆಲ್ಲಾ ನಕಲಿ ಅನ್ನೋದು ಗೊತ್ತಾಗಿದೆ. ಆ ನೋಟುಗಳ ಮೇಲೆ ಚಿಲ್ರನ್ ಬ್ಯಾಂಕ್ ಆಫ್ ಇಂಡಿಯಾ ಅಂತಿದೆ. ಹೀಗಾಗಿ ಎಲ್ಲಾ ನಕಲಿ ನೋಟಿನ ಬಂಡಲ್ಗಳನ್ನ ಟ್ರೈನ್ನಿಂದ ಹೊರಗಡೆ ಬಿಸಾಡಿದ್ದಾರೆ. ಆದರೆ 50 ಸಾವಿರದ ಒಂದು ಕಟ್ಟನ್ನ ರಮೇಶ್ ಕದ್ದು ಮುಚ್ಚಿ ತೆಗೆದಿಟ್ಟಿದ್ದ. ನಂತರ ರಾಯಚೂರಿಗೆ ಬಂದು ಆ ಹಣವನ್ನ ಬಿರಿಯಾನಿ ತಿಂದು ಚಲಾವಣೆ ಮಾಡಿದ್ದ ಅನ್ನೋದು ತನಿಖೆಯಲ್ಲಿ ಬಯಲಾಗಿದೆ.
ಮೊಮ್ಮೆಯಷ್ಟೇ ಖೊಟಾ ನೋಟುಗಳನ್ನ ಪ್ರಿಂಟ್ ಮಾಡುವ ನಾಲ್ಕು ಜನ ಐನಾತಿಗಳನ್ನ ಇದೇ ರಾಯಚೂರು ಪೊಲೀಸರು ಅರೆಸ್ಟ್ ಮಾಡಿದ್ದರು. ಇದರ ಬೆನಲ್ಲೇ ಈಗ ನಕಲಿ ನೋಟು ಚಲಾವಣೆ ಆಗಿದೆ. ಆಂಧ್ರ-ತೆಲಂಗಾಣ ಗಡಿಯಲ್ಲಿ ರಾಯಚೂರು ಇರೋದ್ರಿಂದ ಸುಲಭವಾಗಿ ನಕಲಿ ಹಣದ ವಹಿವಾಟು ನಡೆಯುತ್ತಿರಬಹುದು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿ ಎಂದು ಸ್ಥಳೀಯರಾದ ಅಶೋಕ್ ಜೈನ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕಕ್ಕೆ ಬಿಸಿಲಾಘಾತ: ರಾಜ್ಯ ವಿಪತ್ತು ಎಂದು ಘೋಷಿಸಲು ಆಗ್ರಹ
ಅದೆನೆ ಇರ್ಲಿ ಎರಡೇ ದಿನದ ಅಂತರದಲ್ಲಿ ಎರಡು ಖೋಟಾ ನೋಟಿಗೆ ಸಂಬಂಧಿಸಿದ ಕೇಸ್ಗಳು ಬುಕ್ ಆಗಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದೆ. ಹಿಂದುಳಿದ ಜಿಲ್ಲೆಯಲ್ಲಿ ಅತೀ ಸುಲಭವಾಗಿ ನಕಲಿ ನೋಟಿನ ಚಲಾವಣೆ ನಡೆಯುತ್ತಿದೆಯಾ ಎಂಬ ಅನುಮಾನಗಳು ಕೂಡ ಮೂಡಿವೆ. ಹೀಗಾಗಿ ಗೃಹ ಇಲಾಖೆ ಈ ಬಗ್ಗೆ ಉನ್ನತ ಪಟ್ಟದ ತನಿಖೆ ನಡೆಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.