ಯಾದಗಿರಿ: ಕರ್ತವ್ಯ ಲೋಪ ಹಿನ್ನೆಲೆ ಕಂದಾಯ ಇಲಾಖೆಯ 8 ಜನ ಅಧಿಕಾರಿಗಳು ಅಮಾನತು
ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆಯ ಎಂಟು ಜನ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಗೆ ಗೈರು ಜೊತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದ್ದಕ್ಕೆ ಒಂದೇ ದಿನ ಆರು ಜನ ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಅಮಾನತುಗೊಂಡಿದ್ದಾರೆ.
ಯದಾಗಿರಿ ಅ.31: ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆಯ (Department of Revenue) ಎಂಟು ಜನ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಗೆ ಗೈರು ಜೊತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದ್ದಕ್ಕೆ ಒಂದೇ ದಿನ ಆರು ಜನ ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಅಮಾನತುಗೊಂಡಿದ್ದಾರೆ. ಶ್ರೀಮಂತ, ಬಸವರಾಜ್, ಇಮ್ಯಾನುವೆಲ್, ಸಿದ್ದಲಿಂಗಪ್ಪ ಅಮಾನತಾದ ಗ್ರಾಮ ಆಡಳಿತಾಧಿಕಾರಿಗಳು. ಗಿರೀಶ್ ರಾಯಕೋಟಿ ಹಾಗೂ ಬಸವರಾಜ್ ಬಿದಾರಾರ ಅಮಾನತಾದ ಕಂದಾಯ ನಿರೀಕ್ಷಕರು. ಅಲ್ಲದೆ ಯಾದಗಿರಿ (Yadgiri) ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಡಿಎ ಸೂಗುರೇಶ್ ಹಾಗೂ ಎಫ್ಡಿಎ ಮಹೇಶ್ ಸಹ ಅಮಾನತುಗೊಂಡಿದ್ದಾರೆ.
ಹೆಚ್ಚಿನ ಮಾಹಿತಿ ಅಪ್ಡೇಟ್ ಮಾಡಲಾಗುವುದು
Published On - 8:56 am, Tue, 31 October 23