ಜಾತಿ, ಧರ್ಮ ಬದಿಗೊತ್ತಿ ಬೇವು ಬೆಲ್ಲ ಸವಿದ ಗ್ರಾಮಸ್ಥರು: ಯಾದಗಿರಿಯಲ್ಲಿ ವಿಶಿಷ್ಟವಾಗಿ ಯುಗಾದಿ ಆಚರಣೆ
ಯುಗಾದಿ ಹಬ್ಬವನ್ನ ಹಿಂದೂಗಳು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳನ್ನ ತೊಟ್ಟು ಸಂಬಂಧಿಕರ ಮನೆಗಳಿಗೆ ಹೋಗಿ ಬೇವು ಬೆಲ್ಲವನ್ನ ಸವಿಯುತ್ತ ಸಂಬಂಧವನ್ನ ಗಟ್ಟಿಗೊಳಿಸುವ ಕೆಲಸ ಮಾಡುತ್ತಾರೆ. ಆದರೆ ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಮಾತ್ರ ಈ ಹಬ್ಬ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತೆ.
ಯಾದಗಿರಿ, ಏಪ್ರಿಲ್ 09: ನಾಡಿನಾದ್ಯಂತ ಯುಗಾದಿ (Ugadi) ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಯುಗಾದಿ ಹಬ್ಬವನ್ನ ಹಿಂದೂ ಧರ್ಮದ ಪ್ರಕಾರ ಹೊಸ ವರ್ಷ ಆರಂಭವಾಗುತ್ತೆ. ಇದೆ ಯುಗಾದಿ ಹಬ್ಬವನ್ನ ಆ ಪಟ್ಟಣದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತೆ. ಹಿಂದೂ ಧರ್ಮದ ಹಬ್ಬವನ್ನ ಮುಸ್ಲಿಂರು ಸಹ ಆಚರಿಸುತ್ತಾರೆ. ಹಿಂದೂ-ಮುಸ್ಲಿಮರು ಸೇರಿ ಬೇವು ಬೆಲ್ಲವನ್ನ ಸವಿಯುವ ಮೂಲಕ ಸೌಹಾರ್ದತೆಯ ಸಂದೇಶವನ್ನ ಸಾರಲಾಗಿದೆ.
ನಾಡಿನಾದ್ಯಂತ ಇವತ್ತು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಯುಗಾದಿ ಹಬ್ಬವನ್ನ ಆಚರಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಇವತ್ತಿನಿಂದ ಹೊಸ ವರ್ಷ ಆರಂಭವಾಗುತ್ತೆ ಅಂತ ಹೇಳಲಾಗುತ್ತೆ. ಈ ಹಬ್ಬವನ್ನ ಹಿಂದೂಗಳು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳನ್ನ ತೊಟ್ಟು ಸಂಬಂಧಿಕರ ಮನೆಗಳಿಗೆ ಹೋಗಿ ಬೇವು ಬೆಲ್ಲವನ್ನ ಸವಿಯುತ್ತ ಸಂಬಂಧವನ್ನ ಗಟ್ಟಿಗೊಳಿಸುವ ಕೆಲಸ ಮಾಡುತ್ತಾರೆ. ಆದರೆ ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಮಾತ್ರ ಈ ಹಬ್ಬ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತೆ.
ಇದನ್ನೂ ಓದಿ: Ugadi 2024: ಕಡಪದ ಈ ದೇಗುಲಕ್ಕೆ ಯುಗಾದಿಯಂದು ಬರುತ್ತಾರೆ ಸಾಲು ಸಾಲು ಮುಸ್ಲಿಮರು!
ಹಿಂದೂ ಧರ್ಮದ ಹಬ್ಬವಾದ ಯುಗಾದಿಯನ್ನ ಮುಸ್ಲಿಂರು ಕೂಡ ಆಚರಿಸುತ್ತಾರೆ. ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಯುವಕರ ಬಳಗದಿಂದ ಯುಗಾದಿ ಹಬ್ಬವನ್ನ ಆಚರಿಸಲಾಯ್ತು. ವಿಶೇಷ ಅಂದರೆ ಈ ಯುವಕರ ಬಳಗದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಯುವಕರಿದ್ದಾರೆ. ಹೀಗಾಗಿ ಬೆಳಗ್ಗೆ ಎದ್ದು ಯುವಕರ ತಂಡ ಹಣವನ್ನ ಸಂಗ್ರಹ ಮಾಡಿ ಬೇವು ಬೆಲ್ಲವನ್ನ ತಯಾರಿಸಲು ಬೇಕಾದ ವಸ್ತುಗಳನ್ನ ಖರೀದಿ ಮಾಡುತ್ತಾರೆ. ಉದಾಹರಣೆಗೆ ಹಣ್ಣು, ಮಡಕೆ ಸೇರಿದಂತೆ ಬೇವು ಬೆಲ್ಲ ಮಾಡಲು ಬೇಕಾದ ವಸ್ತುಗಳನ್ನ ಖರೀದಿ ಮಾಡಿಕೊಂಡು ಬಂದು ಆಂಜನೇಯ ದೇವಸ್ಥಾನದಲ್ಲಿ ಸೇರುತ್ತಾರೆ. ಇಲ್ಲಿಗೆ ಬಂದು ಎಲ್ಲರೂ ಒಂದೆ ಕಡೆ ಕುಳಿತುಕೊಂಡು ಬೇವು ಬೆಲ್ಲವನ್ನ ತಯಾರಿಸುತ್ತಾರೆ.
ಇನ್ನು ಹಿಂದೂ-ಮುಸ್ಲಿಂ ಯುವಕರು ಸೇರಿ ಬೇವು ಬೆಲ್ಲವನ್ನ ಸಿದ್ದ ಪಡಿಸುತ್ತಾರೆ. ಬಳಿಕ ಗ್ರಾಮದ ಸರ್ವ ಧರ್ಮದವರನ್ನ ಆಹ್ವಾನ ನೀಡುತ್ತಾರೆ. ಜಾತಿ ಧರ್ಮವನ್ನ ಬದಿಗೊತ್ತಿ ಯುವಕರು ಮತ್ತು ಹಿರಿಯರು ಸೇರುತ್ತಾರೆ. ಬಳಿಕ ಮಡಿಕೆಯಲ್ಲಿ ಸಿದ್ದ ಪಡಿಸಿದ ಬೇವು ಬೆಲ್ಲವನ್ನ ಹಿಂದೂ ಧರ್ಮದವರು ಮುಸ್ಲಿಂ ಧರ್ಮದವರಿಗೆ ಕುಡಿಸಿದ್ರೆ ಮುಸ್ಲಿಂ ಧರ್ಮವರು ಹಿಂದೂ ಧರ್ಮದವರಿಗೆ ಕುಡಿಸಿ ಭಾವೈಕ್ಯತೆಯನ್ನ ಸಾರುತ್ತಾರೆ. ಇದಕ್ಕೂ ಮೊದಲು ಇದೆ ದೇವಸ್ಥಾನದಲ್ಲಿ ಸೇರುವ ಪ್ರತಿಯೊಬ್ಬರು ಎಲ್ಲರೂ ಒಂದಾಗಿರಬೇಕು ಎನ್ನುವ ಸಂದೇಶ ಸಾರುವ ಮಾತುಗಳನ್ನ ಆಡುತ್ತಾರೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ; ಮುಗಿಲು ಮುಟ್ಟಿದ ಮಾದಪ್ಪನ ಜಯಘೋಷ
ಯಾವುದೇ ಕಾರಣಕ್ಕೂ ಬರುವ ಯುಗಾದಿ ತನಕ ಯಾರು ಕೂಡ ಜಾತಿ, ಧರ್ಮ ಅಂತ ಕಚ್ಚಾಡದೆ ಹೀಗೆ ಒಂದೆ ತಾಯಿ ಮಕ್ಕಳಂತೆ ಇರಬೇಕು ಎನ್ನುವ ಸಂದೇಶ ಸಾರುವ ಮಾತುಗಳನ್ನ ಎರಡು ಧರ್ಮದ ಹಿರಿಯ ಕಡೆ ಬರುತ್ತವೆ. ಇದಾದ ಬಳಿಕ ಪ್ರತಿಯೊಬ್ಬರು ಬೇವು ಬೆಲ್ಲವನ್ನ ಸವಿಯುತ್ತಾರೆ. ಮುಸ್ಲಿಂ ನಮಾಜ್ ಟೈಮ್ ಆದ್ರು ದೇವಸ್ಥಾನಕ್ಕೆ ಬಂದು ಬೇವು ಬೆಲ್ಲವನ್ನ ಸವಿದು ಮುಂದಿನ ಕೆಲಸವನ್ನ ಮಾಡುತ್ತಾರೆ. ಇನ್ನು ಈ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ ಈ ಪದ್ದತಿ ನಡೆದುಕೊಂಡು ಬಂದಿದೆ. ಇನ್ನು ಮುಸ್ಲಿಂ ಧರ್ಮದ ಯಾವುದೇ ಹಬ್ಬಗಳು ಬಂದ್ರೆ ಇಡೀ ಪಟ್ಟಣದ ಜನ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಕೋಮು ಗಲಭೆ, ಜಾತಿ ಧರ್ಮಗಳ ನಡುವೆ ಜಗಳಕ್ಕೆ ನಾವು ಯಾವತ್ತೂ ಆಸ್ಪದ ಕೊಡಲ್ಲ ಅಂತಾರೆ.
ಜಾತಿ, ಧರ್ಮಗಳ ನಡುವೆ ಸಣ್ಣ ಸಣ್ಣ ಕಾರಣಕ್ಕೆ ಕೋಮು ಗಲಭೆಗಳು ನಡೆಯುವಂತ ಕಾಲದಲ್ಲೂ ನಾವೆಲ್ಲ ಒಂದೆ ಎನ್ನುವ ಸಂದೇಶವನ್ನ ವಡಗೇರ ಪಟ್ಟಣದ ಜನ ತೋರಿಸುತ್ತಿದ್ದಾರೆ. ಈ ಪಟ್ಟಣದ ಜನ ಯಾವತ್ತಿಗೂ ಹೀಗೆ ಒಂದೆ ತಾಯಿಯ ಮಕ್ಕಳಂತೆ ಸೌಹಾರ್ದತೆಯಿಂದ ಬಾಳಲಿ ಎನ್ನುವುದೆ ನಮ್ಮ ಆಶಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:12 pm, Tue, 9 April 24