CAA, NRC ಪ್ರತಿಭಟನೆಗಾಗಿ Al-Hind ಸಂಘಟನೆಯಿಂದ ಹಣ ಸರಬರಾಜು
ಬೆಂಗಳೂರು: ಕಾವಲ್ ಭೈರಸಂದ್ರದ ಗಲಾಟೆಯಲ್ಲಿ ಶಾಮೀಲಾಗಿದ್ದ ಕೆಲ ಗಲಭೆಕೋರರೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಇದೀಗ ಅಲ್-ಹಿಂದ್ ಸಂಘಟನೆ ಚಟುವಟಿಕೆಗಳ ಮೇಲೆ ಬೆಳಕು ಬಿದ್ದಿದೆ. ಇದೀಗ, ನಗರದಲ್ಲಿ ನಡೆದ ಹಾಗೂ ಮುಂದೆ ನಡೆಯಲಿರುವ CAA ಮತ್ತು NRC ವಿರೋಧಿ ಪ್ರತಿಭಟನೆಗಳಿಗೂ ಅಲ್ ಹಿಂದ್ ಸಂಘಟನೆಗೆ ಸಂಬಂಧವಿದೆ ಎಂಬ ವಿಷಯ ಸಿಸಿಬಿ ತನಿಖೆಯಲ್ಲಿ ಬಹಿರಂಗವಾಗಿದೆ. ನಗರದಲ್ಲಿ CAA ಮತ್ತು NRC ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದ ನಾರಿ (NARI) ಪ್ರತಿಷ್ಠಾನಕ್ಕೆ ಅಲ್ ಹಿಂದ್ ಸಂಘಟನೆ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿದೆ ಎಂದು […]

ಬೆಂಗಳೂರು: ಕಾವಲ್ ಭೈರಸಂದ್ರದ ಗಲಾಟೆಯಲ್ಲಿ ಶಾಮೀಲಾಗಿದ್ದ ಕೆಲ ಗಲಭೆಕೋರರೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಇದೀಗ ಅಲ್-ಹಿಂದ್ ಸಂಘಟನೆ ಚಟುವಟಿಕೆಗಳ ಮೇಲೆ ಬೆಳಕು ಬಿದ್ದಿದೆ.
ಇದೀಗ, ನಗರದಲ್ಲಿ ನಡೆದ ಹಾಗೂ ಮುಂದೆ ನಡೆಯಲಿರುವ CAA ಮತ್ತು NRC ವಿರೋಧಿ ಪ್ರತಿಭಟನೆಗಳಿಗೂ ಅಲ್ ಹಿಂದ್ ಸಂಘಟನೆಗೆ ಸಂಬಂಧವಿದೆ ಎಂಬ ವಿಷಯ ಸಿಸಿಬಿ ತನಿಖೆಯಲ್ಲಿ ಬಹಿರಂಗವಾಗಿದೆ.
ನಗರದಲ್ಲಿ CAA ಮತ್ತು NRC ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದ ನಾರಿ (NARI) ಪ್ರತಿಷ್ಠಾನಕ್ಕೆ ಅಲ್ ಹಿಂದ್ ಸಂಘಟನೆ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿದೆ ಎಂದು ಮಾಹಿತಿ ತಿಳಿದುಬಂದಿದೆ. ನಾರಿ ಫೌಂಡೇಷನ್ ಈ ಹಣವನ್ನು CAA ಮತ್ತು NRC ಪ್ರತಿಭಟನೆಗಳಿಗೆ ಬಳಸಿದೆಯಂತೆ.
ನಾರಿ ಫೌಂಡೇಷನ್ ಬ್ಯಾಂಕ್ ಅಕೌಂಟ್ ಪರಿಶೀಲನೆ ವೇಳೆ ಈ ಅಂಶ ಬಯಲಾಗಿದೆ. ಹೀಗಾಗಿ, ಇಡೀ ನಾರಿ ಫೌಂಡೇಷನ್‌ನ ಸದಸ್ಯರನ್ನು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆಂದು ವಶಕ್ಕೆ ಪಡೆಯಲು ಸಿಸಿಬಿ ತಂಡ ಚಿಂತನೆ ನಡೆಸುತ್ತಿದೆ.
Published On - 1:12 pm, Thu, 20 August 20