ಮದ್ವೆಗೆ ಸಿದ್ದವಾಯ್ತಾ ಬಾಲಿವುಡ್ ಕ್ಯೂಟ್ ಜೋಡಿ, ರಣಬೀರ್ ಅಪಾರ್ಟ್ಮೆಂಟ್ನಲ್ಲೇ ಪ್ಲ್ಯಾಟ್ ಖರೀದಿಸಿದ ಆಲಿಯಾ..
ಬಾಲಿವುಡ್‌ನ ಕ್ಯೂಟ್ ಕಪಲ್ಸ್‌ಗಳ ಸಾಲಿಗೆ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಕೂಡ ಸೇರ್ತಾರೆ. ಈ ಜೋಡಿ ಈಗಾಗಲೇ ರಿಲೇಶನ್ ಶಿಪ್‌ನಲ್ಲಿದೆ ಅನ್ನೋದಕ್ಕೆ ಹಲವು ಘಟನೆಗಳು ಸಾಕ್ಷಿಯಾಗಿವೆ. ಆಗಾಗ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗ್ತಿರೋದು ನೋಡಿದ್ರೆ ಸದ್ಯದಲ್ಲಿಯೇ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆದ ತಕ್ಷಣವೇ ಮದುವೆ ಶಾಸ್ತ್ರಕ್ಕೆ ರೆಡಿಯಾಗ್ತಾರಾ ಅನ್ನೋ ಅನುಮಾನ ಮೂಡಿಸಿದೆ.

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ಬಗ್ಗೆ ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿ ಹೆಚ್ಚಾಗ್ತಿದೆ. ಕೆಲವು ವರ್ಷಗಳಿಂದ ಇವರಿಬ್ಬರ ನಡುವಿನ ಆತ್ಮೀಯತೆ ನೋಡಿ ಅಭಿಮಾನಿಗಳು ಹಾಗೂ ಬಾಲಿವುಡ್ ಮಂದಿ ಕೂಡ ಸದ್ಯದಲ್ಲಿಯೇ ಇವ್ರ ರಿಲೇಷನ್‌ಶಿಪ್‌ನ ಮಾಹಿತಿಯನ್ನ ಅಧಿಕೃತವಾಗಿ ಬಹಿರಂಗಪಡಿಸಬಹುದು ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.
32 ಕೋಟಿ ಬೆಲೆ ಬಾಳೋ ಪ್ಲಾಟ್ ಖರೀದಿಸಿದ ಆಲಿಯಾ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ಬಗ್ಗೆ ಒಂದಲ್ಲಾ ಒಂದು ಸುದ್ದಿ ತಳುಕು ಹಾಕಿಕೊಳ್ತಾನೆ ಇದೆ. ಸದ್ಯ ಆಲಿಯಾ ಭಟ್ ಬರೋಬ್ಬರಿ 32 ಕೋಟಿ ಬೆಲೆ ಬಾಳೋ ಪ್ಲಾಟ್‌ವೊಂದನ್ನ ಮುಂಬೈನಲ್ಲಿ ಖರೀದಿಸಿದ್ದಾರೆ. ಅದ್ರಲ್ಲೇನಿದೆ ವಿಶೇಷ ಅಂತೀರಾ.. ಈ ಪ್ಲಾಟ್ ಮುಂಬೈನ ಬಾಂದ್ರಾ ಬಳಿಯ ಪಾಲಿ ಹಿಲ್ಸ್ ಪ್ರದೇಶದಲ್ಲಿದೆ. ಆದ್ರೆ ಈಗಾಗಲೇ ರಣಬೀರ್ ಕಪೂರ್ ಕೂಡ ಅದೇ ಅಪಾರ್ಟ್ಮೆಂಟ್ನಲ್ಲಿರೋದ್ರಿಂದ ಇವರಿಬ್ಬರ ನಡುವೆ ಏನೋ ನಡೀತಿದೆ ಅನ್ನೋ ಊಹಾಪೋಹಕ್ಕೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ.
ಸದ್ಯ ಆಲಿಯಾ ಭಟ್ ಖರೀದಿಸಿರೋ ಪ್ಲಾಟ್ ಕಪೂರ್ ಕುಟುಂಬದ ನಿವಾಸಕ್ಕೆ ಹತ್ತಿರವಾಗಿದೆ. ಪಾಲಿ, ಹಿಲ್ಸ್‌ನ ಕೃಷ್ಣರಾಜ ಬಂಗ್ಲೋಗೆ ಹತ್ತಿರವಾಗಿರೋದು ಒಂದು ವಿಶೇಷವಾದ್ರೆ ಆಲಿಯಾ ಇರೋ ಅಪಾರ್ಟ್‌ಮೆಂಟ್‌ನಲ್ಲಿಯೇ ರಣಬೀರ್ ಕಪೂರ್ 7ನೇ ಮಹಡಿಯಲ್ಲಿದ್ದಾರೆ. ಆಲಿಯಾ ಭಟ್ 5ನೇ ಮಹಡಿಯಲ್ಲಿ ಬರೋಬ್ಬರಿ 32 ಕೋಟಿ ಹಣ ಕೊಟ್ಟು ಖರೀದಿಸಿದ್ದಾರೆ.
ಸದ್ಯ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸ್ತಿದ್ದಾರೆ. ಹೀಗಾಗಿ ಈ ಸಿನಿಮಾ ರಿಲೀಸ್ ಆದ ತಕ್ಷಣವೇ ಕುಟುಂಬದ ಸಮ್ಮುಖದಲ್ಲೇ ಮದುವೆ ಶಾಸ್ತ್ರಕ್ಕೆ ಸಿದ್ಧವಾಗುತ್ತಾ ಜೋಡಿ ಅನ್ನೋ ಅನುಮಾನ ಮೂಡಿಸಿದೆ. ಈಗಾಗ್ಲೇ ಕೆಲ ಫ್ಯಾನ್ಸ್ ಎಡಿಟ್ ಮಾಡಿದ್ದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸದ್ದಿಲ್ಲದೇ ಜೋಡಿ ಹಸೆಮಣೆ ಏರುತ್ತಾ ಅನ್ನೋ ಅನುಮಾನ ಶುರುವಾಗಿತ್ತು. ಆದ್ರೆ ಮುಂದಿನ ದಿನಗಳಲ್ಲಿ ಈ ಎಲ್ಲಾ ಬೆಳವಣಿಗೆ ಬಗ್ಗೆ ಜೋಡಿ ಏನ್ ಉತ್ತರ ನೀಡುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ.






