ಸಂಪತ್ ರಾಜ್ ಎಸ್ಕೇಪ್ ವಿಚಾರದಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆ ಲಾಕ್? ವೈದ್ಯರ ಜೊತೆ ಇಂದು ಸಿಸಿಬಿ ವಿಚಾರಣೆ

ಸಂಪತ್ ರಾಜ್ ಎಸ್ಕೇಪ್ ವಿಚಾರದಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆ ಲಾಕ್? ವೈದ್ಯರ ಜೊತೆ ಇಂದು ಸಿಸಿಬಿ ವಿಚಾರಣೆ

ಬೆಂಗಳೂರು: ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಸಂಪತ್ ರಾಜ್ ಎಸ್ಕೇಪ್ ಪ್ರಕರಣಕ್ಕೆ ಸಂಬಂಧಿಸಿ ಸಂಪತ್ ರಾಜ್ ರಕ್ಷಣೆ ಮಾಡಲು ಹೋಗಿ ಆಸ್ಪತ್ರೆ ತಗಲಾಕಿಕೊಂಡಿದೆ. ಏಕೆಂದರೆ ನಿನ್ನೆ ಸಂಪತ್ ನೋಡಲು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಿಸಿಬಿಗೆ ಶಾಕ್ ಎದುರಾಗಿತ್ತು. ಸಂಪರ್ ರಕ್ಷಣೆ ಮಾಡಲು ಬ್ಯಾಪ್ಟಿಸ್ಟ್ ಆಸ್ಪತ್ರೆ ಮಹಾ ನಾಟಕವನ್ನೇ ಆಡಿದೆ. ಸಂಪತ್ ರಾಜ್ ಆಸ್ಪತ್ರೆಯಲ್ಲಿ ಎರಡು ತಿಂಗಳು ಠಿಕಾಣಿ ಹಾಕಿದ್ದರು. ಎರಡು ತಿಂಗಳಲ್ಲಿ 4 ಬಾರಿ ಆಡ್ಮಿಟ್, 4 ಬಾರಿ ಡಿಸ್ಚಾರ್ಜ್ ಆಗಿದ್ದಾರೆ. ಸಂಪತ್ ಮೆಡಿಕಲ್ ರಿಪೋರ್ಟ್ ನೋಡಿ […]

Ayesha Banu

|

Nov 04, 2020 | 8:11 AM

ಬೆಂಗಳೂರು: ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಸಂಪತ್ ರಾಜ್ ಎಸ್ಕೇಪ್ ಪ್ರಕರಣಕ್ಕೆ ಸಂಬಂಧಿಸಿ ಸಂಪತ್ ರಾಜ್ ರಕ್ಷಣೆ ಮಾಡಲು ಹೋಗಿ ಆಸ್ಪತ್ರೆ ತಗಲಾಕಿಕೊಂಡಿದೆ. ಏಕೆಂದರೆ ನಿನ್ನೆ ಸಂಪತ್ ನೋಡಲು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಿಸಿಬಿಗೆ ಶಾಕ್ ಎದುರಾಗಿತ್ತು. ಸಂಪರ್ ರಕ್ಷಣೆ ಮಾಡಲು ಬ್ಯಾಪ್ಟಿಸ್ಟ್ ಆಸ್ಪತ್ರೆ ಮಹಾ ನಾಟಕವನ್ನೇ ಆಡಿದೆ.

ಸಂಪತ್ ರಾಜ್ ಆಸ್ಪತ್ರೆಯಲ್ಲಿ ಎರಡು ತಿಂಗಳು ಠಿಕಾಣಿ ಹಾಕಿದ್ದರು. ಎರಡು ತಿಂಗಳಲ್ಲಿ 4 ಬಾರಿ ಆಡ್ಮಿಟ್, 4 ಬಾರಿ ಡಿಸ್ಚಾರ್ಜ್ ಆಗಿದ್ದಾರೆ. ಸಂಪತ್ ಮೆಡಿಕಲ್ ರಿಪೋರ್ಟ್ ನೋಡಿ ಸಿಸಿಬಿಗೆ ಶಾಕ್ ಆಗಿದೆ. ಮೊದಲು ಸೆಪ್ಟಂಬರ್ 14 ರಂದು ಅಸ್ಪತ್ರೆಗೆ ದಾಖಲಾಗಿದ್ರು. ಆದರೆ ಈ ವೇಳೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಸಿಸಿಬಿ ಅಧಿಕಾರಿಗಳಿಗೆ ಭೇಟಿ ನಿರಾಕರಿಸಿತ್ತು. ಮೊದಲ ಬಾರಿ ಚಿಕಿತ್ಸೆ ಅವಧಿ ಮುಗಿದ ಮೇಲೆ ಆಸ್ಪತ್ರೆ ಮತ್ತೊಂದು ಡ್ರಾಮಾ ಮಾಡಿದೆ. ಮಾಡ್ರೆಟೆಡ್ ವೈರಸ್ ಆಟ್ಯಾಕ್ ಆಗಿದೆ ಅನ್ನೋ ಕಾರಣ ನೀಡಿದ್ರು.

ಎರಡು ತಿಂಗಳಲ್ಲಿ 4 ಬಾರಿ ಆಡ್ಮಿಟ್, 4 ಬಾರಿ ಡಿಸ್ಚಾರ್ಜ್ ಆಗಿದ್ದ ಸಂಪತ್ ರಾಜ್ ರಿಪೋರ್ಟ್ ನೋಡಿದ ಸಿಸಿಬಿ ಆಸ್ಪತ್ರೆ ನಡೆಯ ಬಗ್ಗೆ ಕೆಎಂಸಿ ದೂರು ನೀಡಲು ಮುಂದಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಅಲರ್ಟ್ ಆಗಿದ್ದ ಬ್ಯಾಪ್ಟಿಸ್ಟ್ ಆಸ್ಪತ್ರೆ ಆಡಳಿತ ಮಂಡಳಿ ಮೆಂಬರ್ಸ್ ಕೆಎಂಸಿ ಅಧಿಕಾರಿಗಳ ಕಣ್ಣೋರೆಸೋಕೆ ಹೊಸ ಪ್ಲಾನ್ ಮಾಡಿದ್ದರು. ಮಾಡ್ರೆಟೆಡ್ ವೈರಸ್ ಆಟ್ಯಾಕ್ ಆಗಿದೆ ಅನ್ನೋ ಕಾರಣ ನೀಡಿದ್ರು. ಸಂಪತ್ ರಾಜ್ 2 ತಿಂಗಳ ಅವಧಿಯನ್ನ ನಾಲ್ಕು ಬಾರಿ ಡಿವೈಡ್ ಮಾಡಿದ್ದರು. ಪ್ರತಿ 15ನೇ ದಿನ ಡಿಸ್ಚಾರ್ಜ್ ಹಾಗೂ 17 ನೇ ದಿನ ಆಡ್ಮಿಟ್ ಮಾಡಿಕೊಂಡಿದ್ದರು. ಈ ರೀತಿ ದಾಖಲೆಗಳನ್ನ ರೆಡಿ ಮಾಡಿಕೊಂಡಿದ್ದ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು ಅಡ್ಮೀಟ್ ಆಗಿ ಡಿಸ್ಚಾರ್ಜ್ ಆಗಿರೋ ರಿಪೋರ್ಟ್ ರೆಡಿ ಮಾಡಿದ್ದ ಆರೋಪ ಕೇಳಿ ಬಂದಿದೆ. ಸದ್ಯ ಸಿಸಿಬಿ ತಂಡ ಮೆಡಿಕಲ್ ರಿಪೋರ್ಟ್ ಸೀಜ್ ಮಾಡಿದೆ.

ಸಿಸಿಬಿ ಎಸಿಪಿ ವೇಣುಗೋಪಾಲ್ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ವೈದ್ಯನಿಗೆ ನೊಟೀಸ್ ನೀಡಿದೆ. ಈಗಾಗಲೆ ಒಂದು ಬಾರಿ ನೋಟೀಸು ನೀಡಿ ವಿಚಾರಣೆ ನಡೆಸಲಾಗಿತ್ತು. ಡಾ.ಡಾಮ್ನಿಕ್​ ಬೆಂಜಮಿನ್​ ಸಿಸಿಬಿ ಮುಂದೆ ವಿಚಾರಣಗೆ ಹಾಜರಾಗಿದ್ರು. ಮತ್ತೆ ವಿಚಾರಣೆಗೆ ಹಾಜರಾಗಲು ನೊಟೀಸ್ ಜಾರಿಯಾಗಿದೆ. ಇನ್ನೂ ಡಾಕ್ಟರ್ ಬೆಂಜಮಿನ್ ಇಲ್ಲಿತನಕ 16 ಡಿಗ್ರಿ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಉಸ್ತುವಾರಿ ಸಹ ಹೊಂದಿದ್ದಾರೆ. ಸಿಸಿಬಿ ವಿಚಾರಣೆ ಬಳಿಕ ಡಾಕ್ಟರ್ ಭವಿಷ್ಯ ಸಹ ನಿರ್ಧಾರ ಸಾಧ್ಯತೆ ಇದೆ. ಆರೋಪಿ ಶೆಲ್ಟರ್ ನೀಡುವುದು ಸಹ ಅಪರಾಧದ ಭಾಗವಾಗಲಿದೆ. ಈ ಹಿನ್ನಲೆ ಆಸ್ಪತ್ರೆ ಮತ್ತು ಡಾಕ್ಟರ್ ವಿರುದ್ದ ಸಿಸಿಬಿ ಏನು ಮಾಡಲಿದೆ.? ಇಂದು ಮಧ್ಯಾಹ್ನ ವೈದ್ಯ ಡಾಮ್ನಿಕ್ ಬೆಂಜಮಿನ್ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ಮಾಜಿ ಮೇಯರ್ ಸಂಪತ್ ರಾಜ್ ಪರಾರಿ: ಬ್ಯಾಪ್ಟಿಸ್ಟ್ ಅಸ್ಪತ್ರೆಯ 6 ಮಂದಿಗೆ CCB ಡ್ರಿಲ್

Follow us on

Related Stories

Most Read Stories

Click on your DTH Provider to Add TV9 Kannada