ಚುನಾವಣಾ ಆಯೋಗಕ್ಕೆ ಡೋಂಟ್ ಕೇರ್! ಗ್ರಾ. ಪಂ. ಸದಸ್ಯ ಸ್ಥಾನ ಹರಾಜು, ಪ್ರಜಾಪ್ರಭುತ್ವದ ಮಾನವೂ ಹರಾಜು
ಜಿಲ್ಲೆಯ ನಾಗಮಂಗಲ ತಾಲೂಕಿನ ಭೈರನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಹರಾಜು ಪ್ರಕ್ರಿಯೆ ನಡೆದಿದ್ದು, ಚುನಾವಣಾ ಆಯೋಗದ ಎಚ್ಚರಿಕೆ ನಡುವೆಯೂ ಈ ರೀತಿಯ ಬಹಿರಂಗ ಹರಾಜು ನಡೆದಿರುವುದು ವಿಪರ್ಯಾಸವಾಗಿದೆ.
ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಭೈರನಹಳ್ಳಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಹರಾಜು ಪ್ರಕ್ರಿಯೆ ನಡೆದಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಈ ಸದಸ್ಯ ಸ್ಥಾನಕ್ಕೆ 7ರಿಂದ 8 ಲಕ್ಷ ರೂಪಾಯಿ ವರೆಗೆ ಹರಾಜು ಕೂಗಲಾಗಿದೆ. ಚುನಾವಣಾ ಆಯೋಗದ ಎಚ್ಚರಿಕೆ ನಡುವೆಯೂ ಈ ರೀತಿಯ ಬಹಿರಂಗ ಹರಾಜು ನಡೆದಿರುವುದು ವಿಪರ್ಯಾಸವಾಗಿದೆ.
ಭೈರನಹಳ್ಳಿ ಗ್ರಾಮದ ಗೌರಮ್ಮ, ಸಾವಿತ್ರಮ್ಮರ ನಡುವೆ ಪೈಪೋಟಿ ನಡೆದಿದ್ದು, ಅಂತಿಮವಾಗಿ 8 ಲಕ್ಷ ರೂಪಾಯಿಗೆ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆ. ನಾಗಮಂಗಲದ ಬಿದರಕೆರೆ ಬಳಿ ಗ್ರಾಮದ ಆವರಣದಲ್ಲಿ ಕುಳಿತು ಗ್ರಾಮಸ್ಥರು ಹರಾಜು ಕೂಗಿದ್ದಾರೆ.
ಹರಾಜು ನಡೆದ ನಂತರದಲ್ಲಿ ಈಗ ಭೈರನಹಳ್ಳಿಯಲ್ಲೂ ಇದೇ ಪ್ರಕ್ರಿಯೆ ಮುಂದುವರಿದಿದೆ. ಸದ್ಯ ಹರಾಜು ಕೂಗುತ್ತಿರೊ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹರಾಜು ಪ್ರಕ್ರಿಯೆ ಹೆಚ್ಚಾಗುತ್ತಿದೆ.
ದುಡ್ಡಿದ್ರೆ ಅಧಿಕಾರ ನಿಮ್ದು.. ಲಕ್ಷಾಂತರ ರೂಪಾಯಿಗೆ ಗ್ರಾ.ಪಂ. ಸದಸ್ಯ ಸ್ಥಾನ ಹರಾಜು