ಬೆಂಗಳೂರು ಕೇಂದ್ರ ವಿವಿ ಪರೀಕ್ಷೆ ದಿನಾಂಕ ಪ್ರಕಟ: ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಹೀಗಿದೆ
ಅಂತಿಮ ಸ್ನಾತಕೋತ್ತರ ಪರೀಕ್ಷೆ ಆಗಸ್ಟ್ 2ನೇ ವಾರದಲ್ಲಿ ನಡೆಯುತ್ತದೆ. 2021-22ನೇ ಶೈಕ್ಷಣಿಕ ವರ್ಷ ಅಕ್ಟೋಬರ್ 1ರಿಂದ ಆರಂಭ ಆಗಲಿದೆ ಎಂದು ಬೆಂಗಳೂರು ಕೇಂದ್ರ ವಿವಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಪರೀಕ್ಷೆ ದಿನಾಂಕ ಪ್ರಕಟವಾಗಿದೆ. ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಇಂದು (ಜುಲೈ 20) ಬಿಡುಗಡೆ ಮಾಡಲಾಗಿದೆ. ಈ ಮೊದಲು, ಕೊರೊನಾ ಹಿನ್ನೆಲೆಯಲ್ಲಿ ಪದವಿ ಪರೀಕ್ಷೆಗಳನ್ನ ಮುಂದೂಡಲಾಗಿತ್ತು. ಮುಂದೂಡಲಾದ ಪದವಿ ಪರೀಕ್ಷೆಗಳ ವೇಳಾಪಟ್ಟಿ ಈ ಬಿಡುಗಡೆ ಮಾಡಲಾಗಿದೆ.
ವೇಳಾಪಟ್ಟಿಯ ವಿವರದಂತೆ ಆಗಸ್ಟ್ 10 ರಿಂದ ಪದವಿ ಪರೀಕ್ಷೆಗಳು ಆರಂಭ ಆಗಲಿವೆ. ಆಗಸ್ಟ್ 10 ರಿಂದ ಆಗಸ್ಟ್ 31ರ ಒಳಗೆ ಬಾಕಿ ಉಳಿದ ಪದವಿ ಪರೀಕ್ಷೆಗಳು ನಡೆಯಲಿವೆ. ಆಗಸ್ಟ್ 28ರಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭ ಆಗಲಿದೆ. ಸಪ್ಟೆಂಬರ್ 20ರ ಒಳಗೆ ಫಲಿತಾಂಶ ಪ್ರಕಟಿಸಿ ಸ್ನಾತಕೋತ್ತರ ಪದವಿಗೆ ಅನುವು ಮಾಡಿಕೊಡಲಾಗುವ ಬಗ್ಗೆ ತಿಳಿಸಲಾಗಿದೆ.
ಬಾಕಿ ಉಳಿದ ಸ್ನಾತಕೋತ್ತರ ಪರೀಕ್ಷೆ ಆಗಸ್ಟ್ 10ರಿಂದ ಆರಂಭ ಆಗಲಿದ್ದು, ಸ್ನಾತಕೋತ್ತರ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಫಲಿತಾಂಶವನ್ನು ಆಂತರಿಕ ಅಂಕಗಳು ಹಾಗೂ ಹಿಂದಿನ ಸೆಮಿಸ್ಟರ್ ಅಂಕ ಆಧರಿಸಿ ನೀಡಲಾಗುವುದು. ಅಂತಿಮ ಸ್ನಾತಕೋತ್ತರ ಪರೀಕ್ಷೆ ಆಗಸ್ಟ್ 2ನೇ ವಾರದಲ್ಲಿ ನಡೆಯುತ್ತದೆ. 2021-22ನೇ ಶೈಕ್ಷಣಿಕ ವರ್ಷ ಅಕ್ಟೋಬರ್ 1ರಿಂದ ಆರಂಭ ಆಗಲಿದೆ ಎಂದು ಬೆಂಗಳೂರು ಕೇಂದ್ರ ವಿವಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಕೂಡ ಇಂದು ಪ್ರಕಟವಾಗಿದೆ. ಆಗಸ್ಟ್ 19 ರಿಂದ ಸಪ್ಟೆಂಬರ್ 3ರ ವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ಪರೀಕ್ಷೆ ತಿರಸ್ಕರಿಸಿದ ವಿದ್ಯಾರ್ಥಿಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಜುಲೈ 30ರ ಒಳಗೆ ಮಾಹಿತಿ ಪರೀಕ್ಷಾ ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಜುಲೈ 31ರ ಒಳಗೆ ಪರೀಕ್ಷಾ ಅರ್ಜಿಗಳನ್ನು ಸಲ್ಲಿಸಬೇಕು. ಕೇಂದ್ರ ಕಚೇರಿಗೆ ತಲುಪಿಸಲು ಆಗಸ್ಟ್ 2 ಕೊನೆಯ ದಿನ ಎಂದು ತಿಳಿಸಲಾಗಿದೆ.
ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಜುಲೈ 30 ಒಳಗೆ ಮಾಹಿತಿ ಪಡೆಯಬಹುದು ಎಂದು ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಲಿಕ ವೇಳಾಪಟ್ಟಿ ಪ್ರಕಟವಾಗಿದೆ. ದಿನಾಂಕ 19/08/2021 ರಿಂದ 03/09/2021 ರ ವರೆಗೆ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
Karnataka PUC Exams 2021: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
(Bangalore University VV Degree Exam Time Table 2021 Details here GBD)
Published On - 7:28 pm, Tue, 20 July 21