ಟ್ಯಾಬ್ ವಾಪಸ್ ಮಾಡದಿದ್ದರೆ ಎಲೆಕ್ಷನ್​ ಸ್ಪರ್ಧೆಗೆ ಅಡ್ಡಿ: ಕಾರ್ಪೋರೇಟರ್ಸ್​ಗೆ BBMP ಎಚ್ಚರಿಕೆ

ಟ್ಯಾಬ್ ವಾಪಸ್ ಮಾಡದಿದ್ದರೆ ಎಲೆಕ್ಷನ್​ ಸ್ಪರ್ಧೆಗೆ ಅಡ್ಡಿ: ಕಾರ್ಪೋರೇಟರ್ಸ್​ಗೆ BBMP ಎಚ್ಚರಿಕೆ

ಬೆಂಗಳೂರು: ತಾನು ಈ ಹಿಂದೆ ಕೊಟ್ಟಿರವ ಐಫೋನ್‌ ಟ್ಯಾಬ್ ವಾಪಸ್ ಕೊಡದೆ ಹೋದ್ರೆ, ಎಲೆಕ್ಷನ್​ನಲ್ಲಿ ಸ್ಪರ್ಧಿಸಲು ಅಡ್ಡಿಯಾಗುತ್ತೆ ಎಂದು ಬಿಬಿಎಂಪಿ, 198 ಮಾಜಿ ಕಾರ್ಪೋರೇಟರ್ಸ್​ಗೆ ಖಡಕ್ ಎಚ್ಚರಿಕೆ ನೀಡಿದೆ. ಕೌನ್ಸಿಲ್​ನ ಕಡತಗಳನ್ನ ಮತ್ತು ನಿರ್ಣಯಗಳನ್ನ ನೋಡಲು ಬಿಬಿಎಂಪಿ ಕಾರ್ಪೋರೇಟರ್ಸ್​ಗೆ ಟ್ಯಾಬ್ ನೀಡಲಾಗಿತ್ತು. ಆದರೆ ಅಧಿಕಾರ ಅವಧಿ ಮುಕ್ತಾಯಗೊಂಡರೂ ಟ್ಯಾಬ್ ವಾಪಸ್ ನೀಡಿಲ್ಲ. ಹೀಗಾಗಿ ಟ್ಯಾಬ್ ವಾಪಸ್ ನೀಡದೆ ಹೋದರೆ ಚುನಾವಣೆ ಸ್ಪರ್ಧಿಸಲು ತೊಂದರೆ ಆಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ. 198 ಕಾರ್ಪೋರೇಟರ್ಸ್​ ಪೈಕಿ 196 ಕಾರ್ಪೋರೇಟರ್ಸ್​ಗೆ ಐಫೋನ್‌ […]

Ayesha Banu

| Edited By: sadhu srinath

Nov 17, 2020 | 1:37 PM

ಬೆಂಗಳೂರು: ತಾನು ಈ ಹಿಂದೆ ಕೊಟ್ಟಿರವ ಐಫೋನ್‌ ಟ್ಯಾಬ್ ವಾಪಸ್ ಕೊಡದೆ ಹೋದ್ರೆ, ಎಲೆಕ್ಷನ್​ನಲ್ಲಿ ಸ್ಪರ್ಧಿಸಲು ಅಡ್ಡಿಯಾಗುತ್ತೆ ಎಂದು ಬಿಬಿಎಂಪಿ, 198 ಮಾಜಿ ಕಾರ್ಪೋರೇಟರ್ಸ್​ಗೆ ಖಡಕ್ ಎಚ್ಚರಿಕೆ ನೀಡಿದೆ.

ಕೌನ್ಸಿಲ್​ನ ಕಡತಗಳನ್ನ ಮತ್ತು ನಿರ್ಣಯಗಳನ್ನ ನೋಡಲು ಬಿಬಿಎಂಪಿ ಕಾರ್ಪೋರೇಟರ್ಸ್​ಗೆ ಟ್ಯಾಬ್ ನೀಡಲಾಗಿತ್ತು. ಆದರೆ ಅಧಿಕಾರ ಅವಧಿ ಮುಕ್ತಾಯಗೊಂಡರೂ ಟ್ಯಾಬ್ ವಾಪಸ್ ನೀಡಿಲ್ಲ. ಹೀಗಾಗಿ ಟ್ಯಾಬ್ ವಾಪಸ್ ನೀಡದೆ ಹೋದರೆ ಚುನಾವಣೆ ಸ್ಪರ್ಧಿಸಲು ತೊಂದರೆ ಆಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ. 198 ಕಾರ್ಪೋರೇಟರ್ಸ್​ ಪೈಕಿ 196 ಕಾರ್ಪೋರೇಟರ್ಸ್​ಗೆ ಐಫೋನ್‌ ಟ್ಯಾಬ್ ನೀಡಲಾಗಿತ್ತು. ಸದ್ಯ ಈಗ ಕೇವಲ 18 ಜನ ಕಾರ್ಪೋರೇಟರ್ಸ್​ ಟ್ಯಾಬ್ ವಾಪಸ್ ಮಾಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ರು.

Follow us on

Related Stories

Most Read Stories

Click on your DTH Provider to Add TV9 Kannada