ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ.. ಸೋಂಕಿತರನ್ನ ಆಸ್ಪತ್ರೆಗೆ ಕರೆದೊಯ್ಯಲು ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ
ಬೆಂಗಳೂರು ಜನರಿಗೆ ಕೊರೊನಾ ಶಾಕ್ ಕೊಡ್ತಿದೆ. ಸೋಂಕಿತರ ಪ್ರಮಾಣ ಔಟ್ ಬ್ರೇಕ್ ಆಗ್ತಿದೆ. ತಜ್ಞರು ಕೊಟ್ಟ ಸಲಹೆಯಂತೆಯೇ ಸೋಂಕಿತರ ಸಂಖ್ಯೆ ಡಬಲ್, ತ್ರಿಬಲ್ ಆಗ್ತಿದೆ. ಇದರಿಂದ ಎಚ್ಚೆತ್ತ ಬಿಬಿಎಂಪಿ ಇದೀಗ ಸೋಂಕಿತರ ಸಾಗಾಟಕ್ಕೆ ಉಚಿತ ಌಂಬುಲೆನ್ಸ್ ವ್ಯವಸ್ಥೆ ಮಾಡಿದೆ.

ಬೆಂಗಳೂರು: ಡೆಡ್ಲಿ ವೈರಸ್ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರಿಕೆ ಆಗ್ತಿದೆ. ಪ್ರತಿ ದಿನ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಸರ್ಕಾರಕ್ಕೆ ಟೆನ್ಶನ್ ಶುರುವಾಗಿದೆ. ಏಪ್ರಿಲ್ ಅಂತ್ಯ ಹಾಗೂ ಮೇ ವೇಳೆಗೆ ಸೋಂಕಿತರ ಸಂಖ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದ್ದು, ಕೊರೊನಾ ನಿಯಂತ್ರಿಸೋದು ಹೇಗಪ್ಪ ಅನ್ನೋ ಆತಂಕ ಮನೆ ಮಾಡಿದೆ.
ಸೋಂಕಿತರನ್ನ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಿಬಿಎಂಪಿ ಌಂಬುಲೆನ್ಸ್ ವ್ಯವಸ್ಥೆ ಮಾಡಿದೆ. ಮನೆಯಿಂದಲೇ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯಲು ಌಂಬುಲೆನ್ಸ್ ಸೇವೆ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಸಾಗಿಸಲು ಸಹ ಌಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಉಚಿತ ಌಂಬುಲೆನ್ಸ್ ಸೇವೆ ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ಕರೆದೊಯ್ಯಲು 260 ಹೊರಗುತ್ತಿಗೆ ಆ್ಯಂಬುಲೆನ್ಸ್‌ಗಳನ್ನ ನಿಯೋಜಿಸಲಾಗಿದೆ. ಇನ್ನು ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಸಾಗಿಸಲು 49 ಶವ ಸಾಗಾಣಿಕೆ ವಾಹನ ನಿಯೋಜನೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 13 ವಿದ್ಯುತ್ ಚಿತಾಗಾರಗಳಿದ್ದು, ಅವುಗಳ ಪೈಕಿ 7 ಚಿತಾಗಾರಗಳನ್ನ ಕೊರೊನಾದಿಂದ ಮೃತಪಟ್ಟವರಿಗೆ ಮೀಸಲಿಡಲಾಗಿದೆ. ಈ ಕುರಿತಂತೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದೆಲ್ಲದರ ಜೊತೆಗೆ ಸರ್ಕಾರ ರೆಮ್ಡಿಸಿವಿರ್ ಇಂಜೆಕ್ಷನ್, ಬೆಡ್ ವ್ಯವಸ್ಥೆ , ಐಸಿಯು ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಇಲ್ಲವಾದ್ರೆ ಮುಂದಿನ ದಿನದಲ್ಲಿ ಮತ್ತೊಮ್ಮೆ ಕರಾಳ ದಿನಗಳನ್ನ ಎದುರಿಸಬೇಕಾಗಬಹುದು. ಅಷ್ಟೇ ಅಲ್ಲ ಸಿಲಿಕಾನ್ ಸಿಟಿ ಬೆಂಗಳೂರಿನ ಜನ್ರು ಕೂಡ ಅಷ್ಟೇ ಎಚ್ಚರಿಕೆಯಿಂದ ಇರರ್ಬೇಕು. ಇಲ್ಲವಾದ್ರೆ ಕ್ರೂರಿ ಕೊರೊನಾ ಅಟ್ಯಾಕ್ ಆಗೋದ್ರಲ್ಲಿ ಯಾವುದೇ ಡೌಟಿಲ್ಲ.
ಬೆಂಗಳೂರಿನಲ್ಲಿ 10 ಸಾವಿರ ಗಡಿ ದಾಟಿ ಅಬ್ಬರಿಸಿದೆ ಮಹಾಮಾರಿ ಇದು ನಿಜಕ್ಕೂ ಎಲ್ಲರನ್ನೂ ಆತಂಕಕ್ಕೆ ಈಡು ಮಾಡೋ ವಿಚಾರ. ರಾಜ್ಯದಲ್ಲಿ ದಿನೇದಿನೇ ಸೋಂಕಿನ ವಿಸ್ಫೋಟ ಆಗ್ತಿದ್ದು, ಏಪ್ರಿಲ್ 15ರಂದು ಕಿಲ್ಲರ್ ಕೊರೊನಾ ಕಳೆದೊಂದು ತಿಂಗಳ ದಾಖಲೆಯನ್ನ ಮುರಿದು ಮುನ್ನುಗ್ಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಂತೂ ಹೆಮ್ಮಾರಿ ಸೋಂಕು ರುದ್ರ ನರ್ತನ ನಡೆಸಿದ್ದು. ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಜನರ ದೇಹ ಹೊಕ್ಕಿ. ತಾನೆಷ್ಟು ಡೇಂಜರ್ ಅನ್ನೋದನ್ನ ಜನರಿಗೆ ತೋರಿಸಿದೆ.
ರಾಜಧಾನಿಗೆ ಬಿಗ್ ಶಾಕ್! ರಾಜ್ಯದಲ್ಲಿ ನಿನ್ನೆ ಬರೋಬ್ಬರಿ 14 ಸಾವಿರದ 738ಮಂದಿ ಮೇಲೆ ಕಿಲ್ಲರ್ ದಾಳಿ ನಡೆಸಿದೆ. ರಾಜ್ಯದ ಒಟ್ಟು ಕೇಸ್ನಲ್ಲಿ, ಸಾವಿನಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ಬೆಂಗಳೂರಿನಲ್ಲಿ ನಿನ್ನೆ ಒಟ್ಟು 10 ಸಾವಿರದ 497 ಹೊಸ ಕೇಸ್ ಪತ್ತೆಯಾಗಿವೆ. ರಾಜ್ಯದಲ್ಲಿ ಕಿಲ್ಲರ್ ಕೊರೊನಾ ಬರೋಬ್ಬರಿ 66 ಮಂದಿಯನ್ನ ಬಲಿಪಡೆದಿದ್ದು, ಬೆಂಗಳೂರು ಒಂದ್ರಲ್ಲೇ, 30 ಜನ ಕೊರೊನಾಗೆ ಉಸಿರು ಚೆಲ್ಲಿದ್ದಾರೆ.
ಒಂದ್ಕಡೆ ಸೋಂಕಿತರ ನಂಬರ್ ರಾಕೆಟ್ವೇಗದಲ್ಲಿ ಏರ್ತಾ ಇದ್ರೆ, ಇನ್ನೊಂದ್ಕಡೆ ಕೊರೊನಾ ಹೊಡೆತಕ್ಕೆ ಜನರು ಚಿಕಿತ್ಸೆ ಸಿಗದೇ ಪರದಾಡ್ತಿದ್ದಾರೆ. ಸರ್ಕಾರ ಎಷ್ಟೇ ಕಠಿಣ ಕ್ರಮಗಳನ್ನ ತೆಗೆದುಕೊಂಡಿದ್ರೂ.. ಜನ ಮಾಸ್ಕ್ ಧರಿಸಿದ್ರೂ.. ಎಷ್ಟೇ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡ್ರು ಕೊರೊನಾಗೆ ಬ್ರೇಕ್ ಹಾಕಲು ಸಾಧ್ಯವೇ ಆಗ್ತಿಲ್ಲ.
ಇದನ್ನೂ ಓದಿ: Explainer: ವಿದೇಶಿ ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲು ತುದಿಗಾಲಲ್ಲಿ ನಿಂತಿದೆ ಭಾರತ ಸರ್ಕಾರ; ಉಂಟಾ ಏನಾದರೂ ಪ್ರಯೋಜನ?