
ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡುತ್ತಿದ್ದರು. ನಾನು ಅವರನ್ನ ಕಾಪಿ ಮಾಡ್ತಿಲ್ಲ, ವಾಸ್ತವತೆ ಅರಿಯುತ್ತಿದ್ದೇನೆ ಎಂದು ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಜಾನುವಾರುಗಳಿಗೆ ಹುಲ್ಲು ಕೊಯ್ದ ಸಚಿವ ಬಿ.ಸಿ.ಪಾಟೀಲ್ ಬಳಿಕ ರಾಗಿ ಪೈರು ನಾಟಿ ಮಾಡಿದರು. ಜೊತೆಗೆ, ಹಸುವಿನ ಹಾಲು ಸಹ ಕರೆದರು. ಬಿ.ಸಿ.ಪಾಟೀಲ್‌ಗೆ ಸಚಿವ ನಾರಾಯಣ ಗೌಡ ಸಾಥ್ ಕೊಟ್ಟರು.
ಬಳಿಕ ಮಡುವಿನಕೋಡಿಗೆ ತೆರಳಿದ ಸಚಿವರು ಸಚಿವರು ಕುಮಾರಸ್ವಾಮಿ ಗ್ರಾಮದಲ್ಲಿ ಇದ್ದು ಮಲಗಿ ಹೋಗುತ್ತಿದ್ದರು. ನವು ಬೆಳಗ್ಗೆಯಿಂದ ರಾತ್ರಿವರೆಗೂ ಇದ್ದು ವಾಸ್ತವತೆ ಅರಿಯುತ್ತಿದ್ದೇವೆ.
ಪ್ರತಿ ಜಿಲ್ಲೆಗೂ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುತ್ತೇವೆ. ತಿಂಗಳಲ್ಲಿ 3 ದಿನ ಜಿಲ್ಲೆಗಳ ಭೇಟಿ ಕಾರ್ಯಕ್ರಮ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳನ್ನ ಸುತ್ತಿದ ಬಳಿಕ ಸಿಎಂಗೆ ವರದಿ ನೀಡುತ್ತೇನೆ ಎಂದು ಹೇಳಿದರು.
ಮೊದಲು ನಾನು ಎಲ್ಲಾ ಕೆಲಸ ಮಾಡಿದ್ದೇನೆ. ಆದರೆ, ಪೊಲೀಸ್ ಇಲಾಖೆ, ಸಿನಿಮಾಗೆ ಬಂದ್ಮೇಲೆ ಅನುಭವ ಸ್ವಲ್ಪ ಕಡಿಮೆಯಾಯ್ತು. ಹೀಗಾಗಿ, ಮೈ ಸ್ವಲ್ಪ ಬಗ್ಗುತ್ತಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಆದರೆ, ಈಗ ಮತ್ತೆ ಮೈಬಗ್ಗಿಸಿದ್ರೆ ರೈತರ ರೀತಿ ಕೆಲಸ ಮಾಡುತ್ತೇನೆ ಎಂದು ಮಡುವಿನಕೋಡಿಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.