ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸಾಕಷ್ಟು ಪೋಸ್ಟ್, ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಅದರಲ್ಲಿ ಕೆಲವೊಂದು ಮಿಲಿಯನ್ ವೀಕ್ಷಣೆಯ ಮೂಲಕ ಅಷ್ಟೇ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡುತ್ತಿರುತ್ತವೆ. ಈಗ ಕರಡಿಯೊಂದು 400 ಸೆಲ್ಫಿ ತೆಗೆಯುವ ಮೂಲಕ ಸಾಕಷ್ಟು ಮಟ್ಟಿಗೆ ವೈರಲ್ ಆಗಿದೆ. ಏನಪ್ಪಾ ಈ ಸ್ಟೋರಿ ನೀವೇ ನೋಡಿ. ಸೆಲ್ಫಿ ಕ್ರೇಜ್ ಎಷ್ಟರ ಮಟ್ಟಿಗೆ ಇದೇ ಅಂದರೆ, ಇದರಿಂದಾಗಿ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸೆಲ್ಫಿ ಕ್ರೇಜ್ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಶುರುವಾಗಿದೆ. ಇಲ್ಲೋಂದು ಕರಡಿ ಬರೋಬ್ಬರಿ 400 ಸೆಲ್ಫಿಗೆ ಪೋಸ್ ಕೊಟ್ಟಿದೆ. ಇದೇನಾಪ್ಪ ಅಂಥಾ ಅನ್ಕೋತಾ ಇದ್ದೀರಾ? ಹೌದು ಅಮೇರಿಕಾದಲ್ಲಿ ಈ ಘಟನೆ ನಡೆದಿದೆ. ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್ ಆಗಿ ವೈರಲ್ ಆಗುತ್ತಿದೆ. ಅಮೇರಿಕಾದ ಕೊಲೊರಾಡೋದಲ್ಲಿ ವನ್ಯಜೀವಿ ಕ್ಯಾಮೆರಾದಲ್ಲಿ 400 ಸೆಲ್ಫಿಗಳನ್ನು ಸೆರೆಹಿಡಿದಿದೆ.
Recently, a bear discovered a wildlife camera that we use to monitor wildlife across #Boulder open space. Of the 580 photos captured, about 400 were bear selfies.? Read more about we use wildlife cameras to observe sensitive wildlife habitats. https://t.co/1hmLB3MHlU pic.twitter.com/714BELWK6c
— Boulder OSMP (@boulderosmp) January 23, 2023
ಇದನ್ನೂ ಓದಿ: ಮಂಗನಂತೆ ತೆಂಗಿನ ಮರದ ಏರಿ ಇಳಿದ ಮೇಕೆ: ನೆಟ್ಟಿಗರು ಫುಲ್ ಶಾಕ್ ಮಾರಾಯ್ರೆ
ವನ್ಯಜೀವಿ ಛಾಯಾಗ್ರಾಹಕರೊಬ್ಬರು ರಾತ್ರಿ ವೇಳೆ ಅಳವಡಿಸಿದ್ದ ಕ್ಯಾಮರಾದಲ್ಲಿ ಕರಡಿಯ ಪೋಟೋ ಸೆರೆ ಸಿಕ್ಕಿದೆ. ಒಟ್ಟು 580 ಫೋಟೋಗಳಲ್ಲಿ 400 ಆ ಕರಡಿಯ ಸೆಲ್ಫಿಗಳನ್ನೇ ಕಾಣಬಹುದು. ಬೌಲ್ಡರ್ ಓಪನ್ ಸ್ಪೇಸ್ ಮತ್ತು ಮೌಂಟೇನ್ ಪಾರ್ಕ್ಸ್ ಖಾತೆಯಲ್ಲಿ ಜನವರಿ 24 ರಂದು ಕರಡಿ ತೆಗೆದ ಚಿತ್ರಗಳನ್ನು ಟ್ವೀಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಈಗಾಗಲೇ 1ಮಿಲಿಯನ್ ವೀಕ್ಷಣೆ ಕಂಡಿದೆ. ಜೊತೆಗೆ 8ಸಾವಿರ ಲೈಕ್ ಹಾಗೂ 2ಸಾವಿರದಷ್ಟು ರಿಟ್ವಿಟ್ಗಳನ್ನು ಕಾಣಬಹುದು. ಸೆಲ್ಫಿ ಕ್ರೇಜ್ ಪ್ರಾಣಿಗೂ ಬಂದಲ್ಲಾ ಎಂದು ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:58 pm, Thu, 2 February 23