‘ಬಿಗ್​ ಬಾಸ್​ ಸಾಕಾಗಿದೆ.. ನನಗೆ ಮನೆಯಿಂದ ಹೊರಬರಬೇಕು ಅನಿಸ್ತಾ ಇದೆ’

ನನಗೆ ಶೋನಿಂದ ಹೊರ ಬರೋ ಆಲೋಚನೆ ಬರುತ್ತಿದೆ. ಇದು ಸರಿಯಲ್ಲ. ನನಗೆ ಲೋನ್ಲಿ ಫೀಲ್​ ಆಗ್ತಿದೆ ಎಂದು ರಘು ಬೇಸರ ಹೊರ ಹಾಕಿದ್ದಾರೆ.

ಬಿಗ್​ ಬಾಸ್​ ಸಾಕಾಗಿದೆ.. ನನಗೆ ಮನೆಯಿಂದ ಹೊರಬರಬೇಕು ಅನಿಸ್ತಾ ಇದೆ
ರಘು ಗೌಡ - ಬಿಗ್​ ಬಾಸ್

Updated on: Mar 13, 2021 | 10:04 PM

ಸೋಶಿಯಲ್​ ಮೀಡಿಯಾದಲ್ಲಿ ಖ್ಯಾತಿ ಪಡೆದು, ಬಿಗ್​ ಬಾಸ್​ ಮನೆಯೊಳಗೆ ಕಾಲಿಡುವ ಅವಕಾಶ ಗಿಟ್ಟಿಸಿಕೊಂಡ ರಘು ಮೇಲೆ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಆದರೆ, ಅವರು ಅಂದುಕೊಂಡ ಮಟ್ಟಕ್ಕೆ ಆಟ ಆಡುತ್ತಿಲ್ಲ. ಈಗ ಅವರು ಬಿಗ್​ ಬಾಸ್​ ಮನೆಯಿಂದ ಹೊರಬರಬೇಕು ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ!

ಈ ಬಗ್ಗೆ ಕ್ಯಾಮೆರಾ ಮುಂದೆ ಮಾತನಾಡಿದ್ದಾರೆ ರಘು. ನಾನು ಯಾಕೋ ಒಂದು ರೀತಿ ಡಿಸ್ಟರ್ಬ್​ ಆಗ್ತಾ ಇದೀನಿ. ನನಗೆ ಇಲ್ಲಿ ಹಿಂಸೆ ಅನಸ್ತಾ ಇದೆ. ನನಗೆ ನಾನೇ ಮಾತಾಡಿಕೊಂಡು ಇದೆಲ್ಲದರಿಂದ ಹೊರಗೆ ಬರುವ ಪ್ರಯತ್ನ ಮಾಡುತ್ತಾ ಇದೀನಿ. ನನ್ನ ವಿರುದ್ಧ ನಾನೇ ಹೋರಾಡುತ್ತಾ ಇದೀನಿ ಎಂದಿದ್ದಾರೆ ಅವರು.

ನನಗೆ ಶೋನಿಂದ ಹೊರ ಬರೋ ಆಲೋಚನೆ ಬರುತ್ತಿದೆ. ಇದು ಸರಿಯಲ್ಲ. ನನಗೆ ಲೋನ್ಲಿ ಫೀಲ್​ ಆಗ್ತಿದೆ. ಫ್ಯಾಮಿಲಿ ಮಿಸ್​ ಮಾಡಿಕೊಳ್ಳುತ್ತಾ ಇದೀನಿ. ದೊಡ್ಡ ಶೋಗೆ ಬಂದಿದೀನಿ. ಅವಕಾಶ ಮಿಸ್​ ಮಾಡಿಕೊಳ್ಳಬಾರದೂ ಅನ್ನಿಸುತ್ತಿದೆ ಎಂದಿದ್ದಾರೆ ರಘು.

ಸಿಕ್ಕಾಪಟ್ಟೆ ದೈಹಿಕ ಸಾಮರ್ಥ್ಯ ಬೇಡುವ ಟಾಸ್ಕ್​ಗಳನ್ನು ಈಗ ಬಿಗ್​ ಬಾಸ್​ ನೀಡುತ್ತಿದ್ದಾರೆ. ಅದು ರಘು ಆತಂಕಕ್ಕೆ ಕಾರಣ ಆಗಿತ್ತು. ಇತ್ತೀಚೆಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ನಲ್ಲಿ ಅದು ರಘು ಗಮನಕ್ಕೆ ಬಂದಿತ್ತು. ಟಾಸ್ಕ್​ ನಡುವಿನ ಬಿಡುವಿನಲ್ಲಿ ತಮ್ಮ ದೌರ್ಬಲ್ಯದ ಬಗ್ಗೆ ಹಿರಿಯ ನಟ ಶಂಕರ್​ ಅಶ್ವತ್​ ಬಳಿ ರಘು ಬಾಯಿ ಬಿಟ್ಟಿದ್ದರು.

‘ಇಲ್ಲಿ ನನಗೊಂದು ಸಮಸ್ಯೆ ಆಗುತ್ತಿದೆ. ನಾನು ದೈಹಿಕವಾಗಿ ಅಷ್ಟೊಂದು ಫಿಟ್​ ಆಗಿಲ್ಲ. ಜೀವನದಲ್ಲಿ ಯಾವುದೇ ಫಿಜಿಕಲ್​ ಚಟುವಟಿಕೆಗಳೇ ಇಲ್ಲ. ಎಲ್ಲರೂ ನನ್ನನ್ನು ವೀಕ್​ ಅಂದುಕೊಳ್ಳುತ್ತಾರೆ. ಯಾರಾದರೂ ಬಂದು ನೀನು ಟಾಸ್ಕ್​ನಲ್ಲಿ ವೀಕ್​ ಎಂದರೆ ಬೇಜಾರಾಗುತ್ತದೆ’ ಎಂದು ಮುಖ ಬಾಡಿಸಿಕೊಂಡು ಮಾತನಾಡಿದ್ದರು ರಘು.

ವೀಕೆಂಡ್​ನಲ್ಲಿ ಸುದೀಪ್​ ಕೂಡ ಈ ವಿಚಾರ ಚರ್ಚೆ ಮಾಡಿದ್ದಾರೆ. ರಘು ಅವರೇ ನೀವು ಮನೆಯಿಂದ ಹೊರಬರಬೇಕು ಎಂದರೆ ನಾನು ಗೇಟ್​ ಓಪನ್​ ಮಾಡಿಸಿಕೊಡ್ತೇನೆ. ನೀವು ಮನೆಯಿಂದ ಹೊರಗೆ ಬರಲ್ಲ ಅಂತಾದ್ರೆ ಅದಕ್ಕೆ ಸೂಕ್ತ ಕಾರಣ ನೀಡಬೇಕು ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ರಘು, ನಾನು ಲೂಸರ್​ ಎನಿಸಿಕೊಳ್ಳಲ ಎಂದಿದ್ದಾರೆ.

ಇದನ್ನೂ ಓದಿ: BBK8: ಬಿಗ್​ ಬಾಸ್​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು; ಹೀಗೆ ಭವಿಷ್ಯ ನುಡಿದವರಾರು?

Published On - 9:45 pm, Sat, 13 March 21