ಅವರು ಎಲ್ಲೆಲ್ಲೋ ಮುಟ್ತಿದ್ದಾರೆ.. ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಟ್ಟ ನಿಧಿ ಸುಬ್ಬಯ್ಯ

ವೈರಸ್​ ತಂಡದವರು ಮನುಷ್ಯರ ತಂಡದ ಮೇಲೆ ಆರೋಪ ಮಾಡುತ್ತಿದ್ದಾರೆ, ಮನುಷ್ಯರ ತಂಡದವರು ವೈರಸ್​ ಮೇಲೆ ತಪ್ಪನ್ನು ಹೊರಿಸುತ್ತಿದ್ದಾರೆ.

ಅವರು ಎಲ್ಲೆಲ್ಲೋ ಮುಟ್ತಿದ್ದಾರೆ.. ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಟ್ಟ ನಿಧಿ ಸುಬ್ಬಯ್ಯ
ನಿಧಿ ಸುಬ್ಬಯ್ಯ
Edited By: ಆಯೇಷಾ ಬಾನು

Updated on: Mar 11, 2021 | 7:45 AM

ಬಿಗ್​ ಬಾಸ್​ ಮನೆಯಲ್ಲಿ ನೀಡಿದ ವೈರಸ್ ಟಾಸ್ಕ್​ ಎಲ್ಲೆಲ್ಲೋ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ನಡುವೆ ದೊಡ್ಡ ಮಟ್ಟದ ದ್ವೇಷದ ಬೆಂಕಿ ಕೂಡ ಹತ್ತಿಕೊಳ್ಳುತ್ತಿದೆ. ಹೀಗಿರುವಾಗಲೇ ಒಬ್ಬರಿಗೊಬ್ಬರು ಗಂಭೀರ ಆರೋಪವನ್ನು ಮಾಡಿಕೊಳ್ಳುತ್ತಿದ್ದಾರೆ. ವೈರಸ್​ ತಂಡಕ್ಕೆ ಪ್ರಶಾಂತ್​ ಸಂಬರಗಿ ಕ್ಯಾಪ್ಟನ್​. ಮನುಷ್ಯರ ತಂಡಕ್ಕೆ ಲ್ಯಾಗ್​ ಮಂಜು ನಾಯಕರಾಗಿದ್ದಾರೆ. ವೈರಸ್​ ತಂಡದವರು ಮನುಷ್ಯರ ತಂಡದ ಮೇಲೆ ಆರೋಪ ಮಾಡುತ್ತಿದ್ದಾರೆ, ಮನುಷ್ಯರ ತಂಡದವರು ವೈರಸ್​ ಮೇಲೆ ತಪ್ಪನ್ನು ಹೊರಿಸುತ್ತಿದ್ದಾರೆ. ಈ ನಡುವೆ ಮಂಜು ಮತ್ತು ಶಮಂತ್​ ವಿರುದ್ಧ ನಿಧಿ ಸುಬ್ಬಯ್ಯ  ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ.

ಮಂಜು ಮತ್ತು ಶಮಂತ್​ ಉದ್ದೇಶಪೂರ್ವಕವಾಗಿ ಪರಚುತ್ತಿದ್ದಾರೆ. ಬೇಕೆಂತಲೇ ಅವರು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ. ನಮ್ಮ ತಂಡದವರು ಯಾರೊಬ್ಬರೂ ಹುಡುಗಿಯನ್ನು ಮುಟ್ಟಿಲ್ಲ. ಆದರೆ, ಅವರು ತಂಡದವರು ಹಾಗಲ್ಲ. ಪ್ಲ್ಯಾನ್​ ಮಾಡಿ ಅವರು ಬಂದು ನಮ್ಮನ್ನು ಹಿಡಿದುಕೊಳ್ಳುತ್ತಿದ್ದಾರೆ. ತುಂಬಾನೇ ರಫ್​ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಮಂಜು ಬಂದು ನನ್ನನ್ನು ಎಲ್ಲೆಲ್ಲೋ ಮುಟ್ಟಿ ಎಸೆದಿದ್ದಾರೆ. ನಮಗೆ ಹೇಸಿಗೆ ಎನಿಸುತ್ತಿದೆ. ಈ ಆಟ ಸಾಕು ಇಲ್ಲಿಗೆ ನಿಲ್ಲಿಸಿ ಎಂದು ಕಣ್ಣೀರು ಹಾಕಿದ್ದಾರೆ.

ಆದರೆ, ಮಂಜು ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಪ್ರಶಾಂತ್​ ಜತೆ ಮಾತನಾಡುವಾಗ, ನಾನು ಯಾವುದನ್ನೂ ಉದ್ದೇಶಪೂರ್ವಕವಾಗಿ ಮಾಡಿಲ್ಲ. ನಮಗೆ ಖುಷಿಖುಷಿಯಾಗಿ ಆಡಬೇಕು ಎನ್ನುವ ಆಸೆ ಇತ್ತು. ಆದರೆ, ನೀವೇ ವೈಲೆಂಟ್​ ಆಗಿ ಆಡುವ ಮೂಲಕ ಆಟದ ದಿಕ್ಕನ್ನೇ ಬದಲಿಸಿದ್ದೀರಿ ಎಂದಿದ್ದಾರೆ.

ಇದನ್ನೂ ಓದಿ: BBK8: ವೈರಸ್​ನಿಂದ ಬಿಗ್​ ಮನೆಯಲ್ಲಿ ಹತ್ತಿದ ದ್ವೇಷದ ಬೆಂಕಿ; ಆರಿಸುವವರು ಯಾರು?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us