BBK8: ವೈರಸ್ನಿಂದ ಬಿಗ್ ಮನೆಯಲ್ಲಿ ಹತ್ತಿದ ದ್ವೇಷದ ಬೆಂಕಿ; ಆರಿಸುವವರು ಯಾರು?
ಮನುಷ್ಯರ ತಂಡದಲ್ಲಿದ್ದ ಮಂಜು ಎಲ್ಲರಿಗೂ ಪರಚುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನು, ಶುಭಾ-ನಿಧಿ ನಡುವೆ ಇದ್ದ ಗೆಳೆತನ ಕೂಡ ಮುರಿದು ಬೀಳುವ ಲಕ್ಷಣ ಕಾಣುತ್ತಿದೆ.
ಕನ್ನಡ ಬಿಗ್ ಬಾಸ್ ಎರಡನೇ ವಾರದಲ್ಲಿ ನೀಡಲಾದ ಮೊದಲ ಕಠಿಣ ಟಾಸ್ಕ್ಗೆ ಸ್ಪರ್ಧಿಗಳ ನಡುವೆ ದ್ವೇಷದ ಬೆಂಕಿ ಹತ್ತಿಕೊಂಡಿದೆ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ, ಮನೆಯಲ್ಲಿ ಎರಡು ತಂಡಗಳು ಸೃಷ್ಟಿಯಾಗಿವೆ. ಇದೊಂದು ಆಟ ಎನ್ನುವುದನ್ನು ಮರೆತು ಒಬ್ಬರಿಗೊಬ್ಬರು ಕೆಂಡ ಕಾರಿಕೊಳ್ಳುತ್ತಿದ್ದಾರೆ. ಟಾಸ್ಕ್ನ ಪ್ರಕಾರ ಟಾಸ್ಕ್ನ ನಿಯಮದಂತೆ ವೈರಸ್ ದಾಳಿಗೆ ತುತ್ತಾಗದಂತೆ ಮನುಷ್ಯರು ಎಚ್ಚರವಿರಬೇಕು. ವೈರಸ್ ತಂಡ ಮಾಡುವ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ಇದು ಸಾಧ್ಯವಾಗದೆ ಇದ್ದರೆ ಮನುಷ್ಯ ತಂಡದ ಒಬ್ಬ ಸದಸ್ಯ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ಅವಧಿ ಅರ್ಧ ಗಂಟೆ. ಈ ವೇಳೆ ಮನುಷ್ಯ ತಂಡದವರು ಹಗ್ಗ ಹಿಡಿದು ನಿಲ್ಲಬೇಕು. ಆಗ ವೈರಸ್ ತಂಡದವರು ತೊಂದರೆ ನೀಡಬೇಕು. ಆದರೆ, ಬಾಡಿ ಟಚ್ ಮಾಡುವಂತಿಲ್ಲ. ಒಂದೊಮ್ಮೆ, ಕ್ವಾರಂಟೈನ್ನಲ್ಲಿರುವವರು ಹಗ್ಗವನ್ನು ಕೈಬಿಟ್ಟರೆ ಅವರು ಸೋತಂತೆ. ಅವರು ಈ ಆಟದಿಂದ ಹೊರಗಿರಬೇಕು. ಕೊನೆಯಲ್ಲಿ ಯಾವ ತಂಡದಲ್ಲಿ ಹೆಚ್ಚು ಜನರು ಉಳಿಯುತ್ತಾರೋ ಅವರೇ ಗೆದ್ದಂತೆ.
ವೈರಸ್ ಆಟದಲ್ಲಿ ಎಲ್ಲರೂ ಹೆಚ್ಚು ಆಕ್ರಮಣಕಾರಿಯಾಗಿ ಭಾಗವಹಿಸಿದ್ದಾರೆ. ಆ ಮೂಲಕ ಮನೆಯೊಳಗೆ ಟೆನ್ಷನ್ ಸೃಷ್ಟಿ ಆಗಿದೆ. ತಮ್ಮ ತಮ್ಮ ಉಳಿವಿಗಾಗಿ ಎಲ್ಲರೂ ತೀವ್ರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈ ವೇಳೆ ಎಲ್ಲರ ಅಸಲಿ ಮುಖ ಹೊರಗೆ ಬರುತ್ತಿದೆ.
ಮನುಷ್ಯರ ತಂಡದಲ್ಲಿದ್ದ ಮಂಜು ಎಲ್ಲರಿಗೂ ಪರಚುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನು, ಶುಭಾ-ನಿಧಿ ನಡುವೆ ಇದ್ದ ಗೆಳೆತನ ಕೂಡ ಮುರಿದು ಬೀಳುವ ಲಕ್ಷಣ ಕಾಣುತ್ತಿದೆ. 10ನೇ ದಿನ ಮಾತನಾಡಿದ್ದ ಶುಭಾ, ನಾನು ನಿಧಿಗೆ ತುಂಬಾನೇ ಕನೆಕ್ಟ್ ಆಗಿದ್ದೆ. ಆದರೆ, ಈಗ ಅವರು ಈ ರೀತಿ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಅವರ ಬಗ್ಗೆ ಇದ್ದ ಒಳ್ಳೆಯ ಭಾವನೆ ಹೋಗಿಬಿಟ್ಟಿದೆ ಎಂದು ಹೇಳಿದ್ದಾರೆ.
ಸದ್ಯ, ಬಿಗ್ ಬಾಸ್ಮನೆಯಲ್ಲಿ ಎರಡು ತಂಡದ ನಡುವೆ ದ್ವೇಷದ ಬೆಂಕಿ ಹತ್ತಿಕೊಂಡಿದೆ. ನಿಧಿ ಈ ಆಟವೇ ಸಾಕು ಎಂದು ಹೇಳುತ್ತಿದ್ದಾರೆ. ಸದ್ಯ, ಮನೆಯಲ್ಲಿ ಆರಿಸಿದ ಬೆಂಕಿಯನ್ನು ಆರಿಸುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: Bigg Boss Kannada: ಅಯ್ಯೋ ಪಾಪ.. ನಿರ್ಮಲಾ ಕೈಗೆ ಇಷ್ಟೊಂದು ಏಟಾಗಿದೆಯಾ?