ಕನ್ನಡ ಹಾಡಿನ ಮೂಲಕ ಬಿಗ್ ಬಾಸ್ ಮನೆಯಲ್ಲಿ ಮುಂಜಾನೆ ಆರಂಭವಾಗುತ್ತದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ 11ನೇ ದಿನ ಯಾವುದೇ ಹಾಡು ಪ್ಲೇ ಆಗೇ ಇಲ್ಲ. ಇದನ್ನು ನೋಡಿ ಮನೆ ಮಂದಿ ತುಂಬಾನೇ ಅಚ್ಚರಿ ಮತ್ತು ಭಯಗೊಂಡಿದ್ದಾರೆ! ಇಷ್ಟಕ್ಕೆಲ್ಲ ಕಾರಣ ಏನು ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಬಿಗ್ ಬಾಸ್ ಎರಡನೇ ವಾರದಲ್ಲಿ ನೀಡಲಾಗಿದ್ದ ಕಠಿಣ ಟಾಸ್ಕ್ ಅನ್ನು ಯಶಸ್ವಿಗೊಳಿಸಲು ಮನೆಯ ಸದಸ್ಯರು ವಿಫಲರಾಗಿದ್ದರು. ಹಾಯಾಗಿ, ನಗು ನಗುತ್ತ ಆಡಬೇಕಿದ್ದ ಟಾಸ್ಕ್ನಲ್ಲಿ ಒಬ್ಬರಿಗೊಬ್ಬರು ಕಿತ್ತಾಟ ಮಾಡಿಕೊಂಡು, ಪರಸ್ಪರ ದ್ವೇಷ ಬೆಳೆಸಿಕೊಂಡಿದ್ದರು. ಇದಕ್ಕೆ ಸಿಟ್ಟಾದ ಬಿಗ್ ಬಾಸ್ ಟಾಸ್ಕ್ ಕ್ಯಾನ್ಸಲ್ ಮಾಡಿದ್ದಾರೆ. ಇದಕ್ಕೆ ಮನೆ ಮಂದಿಗೆ ಸೂಕ್ತ ಶಿಕ್ಷೆ ನೀಡುತ್ತಿದ್ದಾರೆ ಬಿಗ್ ಬಾಸ್.
ಬಿಗ್ ಬಾಸ್ ಮನೆಯಲ್ಲಿ ವೈರಸ್ ಹಾಗೂ ಮನುಷ್ಯರು ಎನ್ನುವ ಆಧಾರದ ಮೇಲೆ ಟಾಸ್ಕ್ ನೀಡಲಾಗಿತ್ತು. ಮನೆಯ ಒಂದಷ್ಟು ಸದಸ್ಯರು ವೈರಸ್ ಆದರೆ, ಮತ್ತೊಂದಷ್ಟು ಸದಸ್ಯರು ಮನುಷ್ಯರು. ವೈರಸ್ ತಂಡಕ್ಕೆ ಪ್ರಶಾಂತ್ ಸಂಬರಗಿ ಕ್ಯಾಪ್ಟನ್. ಮನುಷ್ಯರ ತಂಡಕ್ಕೆ ಲ್ಯಾಗ್ ಮಂಜು ನಾಯಕರಾಗಿದ್ದರು. ವೈರಸ್ ದಾಳಿಗೆ ತುತ್ತಾಗದಂತೆ ಮನುಷ್ಯರು ಎಚ್ಚರವಿರಬೇಕು. ವೈರಸ್ ತಂಡ ಮಾಡುವ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ಇದು ಸಾಧ್ಯವಾಗದೆ ಇದ್ದರೆ ಮನುಷ್ಯ ತಂಡದ ಒಬ್ಬ ಸದಸ್ಯ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ಅವಧಿ ಅರ್ಧ ಗಂಟೆ. ಈ ವೇಳೆ ಮನುಷ್ಯ ತಂಡದವರು ಹಗ್ಗ ಹಿಡಿದು ನಿಲ್ಲಬೇಕು. ಆಗ ವೈರಸ್ ತಂಡದವರು ತೊಂದರೆ ನೀಡಬೇಕು. ಆದರೆ, ಬಾಡಿ ಟಚ್ ಮಾಡುವಂತಿಲ್ಲ. ಒಂದೊಮ್ಮೆ, ಕ್ವಾರಂಟೈನ್ನಲ್ಲಿರುವವರು ಹಗ್ಗವನ್ನು ಕೈಬಿಟ್ಟರೆ ಅವರು ಸೋತಂತೆ. ಅವರು ಈ ಆಟದಿಂದ ಹೊರಗಿರಬೇಕು. ಕೊನೆಯಲ್ಲಿ ಯಾವ ತಂಡದಲ್ಲಿ ಹೆಚ್ಚು ಜನರು ಉಳಿಯುತ್ತಾರೋ ಅವರೇ ಗೆದ್ದಂತೆ.
ಈ ಟಾಸ್ಕ್ನಲ್ಲಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡರು. ಕ್ರೀಡಾ ಸ್ಫೂರ್ತಿ ಮರೆತು ಪರಸ್ಪರ ದ್ವೇಷ ಬೆಳೆಸಿಕೊಂಡರು. ಇದಕ್ಕೆ ಬಿಗ್ ಬಾಸ್ ಸಿಟ್ಟಾಗಿ ಟಾಸ್ಕ್ ರದ್ದುಗೊಳಿಸುವ ಘೋಷಣೆ ಮಾಡಿದ್ದರು. ಇದಾದ ಮರುದಿನವೇ ಬಿಗ್ ಬಾಸ್ ಮುಂಜಾನೆ ಸಾಂಗ್ ಹಾಕಿಲ್ಲ. ಇದನ್ನು ನೋಡಿದ ಸ್ಪರ್ಧಿಗಳು ಬಿಗ್ ಬಾಸ್ ತುಂಬಾನೇ ಗರಂ ಆಗಿದ್ದಾರೆ ಎಂದಿದ್ದಾರೆ!
Published On - 9:46 pm, Thu, 11 March 21