ಸಡಿಲ ಬಟ್ಟೆ ಧರಿಸಿ ಬೇಸಿಗೆ ಕಾಲದಲ್ಲಿ ಕೂಲ್ ಆಗಿರಿ

ರಸ್ತೆಯಲ್ಲಿ ನಡೆದು ಹೋಗಲಾರದಷ್ಟು ಸುಡು ಬಿಸಿಲು. ಕೂತರೂ.. ನಿಂತರೂ ಒಂದೇ ಸಮನೆ ಸೆಖೆ ನಾವು ಧರಿಸುವ ಉಡುಪಿನಿಂದಲೂ ಬಿಸಿಲ ಶಾಖ ಹೆಚ್ಚಾದಂತೆ ಅನಿಸುತ್ತದೆ. ಹಾಗಿದ್ದಲ್ಲಿ ಬೇಸಿಗೆ ಕಾಲಕ್ಕೆ ಯಾವ ತರಹದ ಉಡುಪು ಉತ್ತಮ ಎಂಬುದರ ವಿವರ ಇಲ್ಲಿದೆ.

ಸಡಿಲ ಬಟ್ಟೆ ಧರಿಸಿ ಬೇಸಿಗೆ ಕಾಲದಲ್ಲಿ ಕೂಲ್ ಆಗಿರಿ
ಬೇಸಿಗೆಯಲ್ಲಿ ಧರಿಸುವ ಉಡುಪು
Follow us
shruti hegde
| Updated By: ಆಯೇಷಾ ಬಾನು

Updated on: Mar 12, 2021 | 6:33 AM

ಅಬ್ಬಬ್ಬಾ ರಣ ಬಿಸಿಲು. ಶಿವರಾತ್ರಿ ಮುಗಿಯುವಷ್ಟರಲ್ಲೇ ಬಿಸಿಲಿನ ಆರ್ಭಟ ಜೋರಾಗಿಯೇ ಇದೆ. ಕೂತಲ್ಲಿ ಕೂರಲು ಸೆಖೆ. ಹೊರಗೆ ಓಡಾಡಿ ಬರೋಣ ಅಂದರೆ ಸುಡು ಬಿಸಿಲು.‌ ಫ್ಯಾನ್ ಗಾಳಿ ಕೂಡಾ ಬಿಸಿ ಅನಿಸುತ್ತಿದೆ. ಏನು ಮಾಡೋದು? ಸಂಜೆಯಾಗುತ್ತಿದ್ದಂತೆ ತಂಪಾದ ಗಾಳಿ ಬೀಸಲಿ ಎನ್ನುವ ಆಸೆ. ಕೆಲವು ಬಾರಿ ನಾವು ಧರಿಸುವ ಬಟ್ಟೆಯಿಂದಲೂ ಹೆಚ್ಚು ಸೆಖೆಯಾಗುತ್ತದೆ. ಬೇಸಿಗೆಕಾಲ ಇನ್ನೇನು ಪ್ರಾರಂಭವಾಗುತ್ತದೆ. ಯಾವ ತರಹದ ಬಟ್ಟೆ ಧರಿಸಬಹುದು ಎಂಬುದನ್ನು ಯೋಚಿಸಿ.

ಬೇಸಿಗೆಕಾಲ ಬರುತ್ತಿದ್ದಂತೆಯೇ ಕಬೋರ್ಡ್​ನಲ್ಲಿರುವ ಉಡುಪು ಬದಲಾಗಲಿ. ಚಳಿಗಾಲದಲ್ಲಿ ಬಳಸುತ್ತಿದ್ದ ಬೆಚ್ಚನೆಯ ಉಡುಪುಗಳನ್ನು ಬದಿಗಿಟ್ಟು. ತೆಳುವಾದ, ಸೆಖೆಗಾಲದಲ್ಲಿ ದೇಹಕ್ಕೆ ಹಿತವೆನಿಸುವ ಬಟ್ಟೆಯನ್ನು ಎದುರಿಗಿಡಿ. ಹೆಚ್ಚು ಹತ್ತಿ ಬಟ್ಟೆಗಳನ್ನು ಬಳಸುವುದು ದೇಹಕ್ಕೆ ಹಿತಕರ. ಕಾಲೇಜಿಗೆ ಹೋಗುವಾಗ, ಆಫೀಸ್ ಹೊರಡುವಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಫುಲ್ ತೋಳಿನ ಬಟ್ಟೆ ಧರಿಸುವ ಅಭ್ಯಾಸ ಮಾಡಿಕೊಳ್ಳಿ.‌ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಂಡು ಚರ್ಮ ಸುಡದಂತೆ ಕಾಪಾಡಿಕೊಳ್ಳಬಹುದು.

ಉಡುಪು ಸಡಿಲವಾಗಿರಲಿ ಬೇಸಿಗೆಗಾಲದಲ್ಲಿ ಮೈಗೆ ಅಂಟುವ ಉಡುಪು ಧರಿಸುವುದು ಅಷ್ಟೊಂದು ಹಿತ ಅನಿಸುವುದಿಲ್ಲ. ಬೇಸಿಗೆಗೆ ಮೈ ಬೆವರುತ್ತದೆ. ಬೆವರ ಹನಿಗಳು ಉಡುಪಿಗೆ ಅಂಟುವುದರಿಂದ ದೇಹಕ್ಕೆ ಕಿರಿ ಕಿರಿ ಅನಿಸುವುದು. ಹಾಗಾಗಿ ಕೊಂಚ ಸಡಿಲವಾದ ಉಡುಪು ಧರಿಸಿ. ಹತ್ತಿ ಉಡುಪನ್ನು ಬೇಸಿಗೆಯ ಸಮಯದಲ್ಲಿ ಧರಿಸುವುದು ಉತ್ತಮ. ದೇಹಕ್ಕೆ ಹಗುರವಾಗಿ ಹಾಗೂ ಹಿತ ಅನಿಸುತ್ತದೆ.

ತಿಳಿ ಬಣ್ಣದ ಬಟ್ಟೆ ಧರಿಸಿ ಬೇಸಿಗೆ ಸಮಯದಲ್ಲಿ ಆದಷ್ಟು ಹೆಚ್ಚು ಡಾರ್ಕ್ ಬಣ್ಣದ ಬಟ್ಟೆಗಳ ಬದಲಾಗಿ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ.‌ ಕಪ್ಪು ಬಣ್ಣದಂತಹ ಡಾರ್ಕ್​ ಬಣ್ಣದ ಬಟ್ಟೆಗಳನ್ನು ಆದಷ್ಟು ಧರಿಸದಿರಿ. ಝರಿಯ ಬಟ್ಟೆಗಳು, ಸ್ಟೋನ್ ವರ್ಕ್, ಸ್ಟಿಕ್ಕರ್ ವರ್ಕ್ ಈ ರೀತಿಯ ಉಡುಗಳನ್ನು ಧರಿಸದಿರಿ. ಬೇಸಿಗೆಯ ಬಿಸಿಲಿನ ಬೆವರಿನ ಜೊತೆ, ಸ್ಟೋನ್ ವರ್ಕ್ ಡಿಸೈನ್​ಗಳು ಮೈಗೆ ಚುಚ್ಚುವಂತಿದ್ದರೆ ಮನಸ್ಸಿಗೆ ಕಿರಿಕಿರಿ ಅನುಭವ ಉಂಟಾಗುತ್ತದೆ. ಹಾಗೂ ಸ್ಟೋನ್​ಗಳಿರುವ ಉಡುಪುಗಳು ಹೆಚ್ಚು ಭಾರವಾಗಿರುತ್ತದೆ. ಸೆಖೆಗಾಲದಲ್ಲಿ ಹೆಚ್ಚು ಭಾರದ ಉಡುಪನ್ನು ಧರಿಸಲು ದೇಹ ಒಗ್ಗಿಕೊಳ್ಳುವುದಿಲ್ಲ. ಕಾಲರ್​​ ಇರುವ ಅಥವಾ ಕುತ್ತಿಗೆ ಮುಚ್ಚುವ ಹತ್ತಿ ಬಟ್ಟೆ ಬಳಸಿ. ಇದರಿಂದ ಸೂರ್ಯನ ಶಾಖಕ್ಕೆ ಚರ್ಮ ಸುಡುವುದನ್ನು ತಪ್ಪಿಸಬಹುದು. ಜೊತೆಗೆ ಬಿಸಿಲಿನಲ್ಲಿ ಹೊರಗಡೆ ಓಡಾಡುವಾಗ ಮುಖವನ್ನೂ ಮುಚ್ಚಿಕೊಂಡು ಓಡಾಡುವ ಅಭ್ಯಾಸ ಮಾಡಿಕೊಳ್ಳಿ.

ಇದನ್ನೂ ಓದಿ: ಬೇಸಿಗೆಕಾಲದಲ್ಲಿ ಒಣ ಚರ್ಮದ ಸಮಸ್ಯೆಗೆ ರಾಮಬಾಣ ಅಲೋವೆರಾ

ಇದನ್ನೂ ಓದಿ: ಬೇಸಿಗೆ ಕಾಲಿಡುತ್ತಿದ್ದಂತೆ.. ನಾಗರಹೊಳೆ ಅರಣ್ಯಕ್ಕೆ ಬಿದ್ದ ಬೆಂಕಿ; 20 ಹೆಕ್ಟೇರ್‌ನಷ್ಟು ಅರಣ್ಯ ಆಹುತಿ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ