ಅರವಿಂದ್​​-ದಿವ್ಯಾ ಉರುಡುಗ ಮದುವೆ ಆಗ್ತಾರಾ? ಚಂದನ್​-ನಿವೇದಿತಾ ಥರ ಇನ್ನೊಂದು ಜೋಡಿ!

ಬಿಗ್​ ಬಾಸ್​ ಮನೆಯೊಳಗೆ ಪ್ರೀತಿ ಪ್ರೇಮ ಸಹಜ. ಅದನ್ನು ಕೆಲವರು ಅಲ್ಲೇ ಬಿಟ್ಟು ಬರುತ್ತಾರೆ. ಮತ್ತೆ ಕೆಲವರು ಗಂಭೀರವಾಗಿ ಸ್ವೀಕರಿಸಿ ಮದುವೆಯೂ ಆಗ್ತಾರೆ.

ಅರವಿಂದ್​​-ದಿವ್ಯಾ ಉರುಡುಗ ಮದುವೆ ಆಗ್ತಾರಾ? ಚಂದನ್​-ನಿವೇದಿತಾ ಥರ ಇನ್ನೊಂದು ಜೋಡಿ!
ಅರವಿಂದ್​-ದಿವ್ಯಾ
Updated By: ರಾಜೇಶ್ ದುಗ್ಗುಮನೆ

Updated on: Mar 21, 2021 | 4:08 PM

ದಿನದಿಂದ ದಿನಕ್ಕೆ ಬಿಗ್​ ಬಾಸ್ ಮನೆಯಲ್ಲಿ ಪ್ರೀತಿ-ಪ್ರೇಮದ ಪರಿಮಳ ಹೆಚ್ಚಾಗುತ್ತಿದೆ. ಮೊದಲು ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ನಡುವೆ ಹೆಚ್ಚು ಆಪ್ತತೆ ಕಾಣಿಸಿತು. ಈಗ ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ನಡುವೆ ಸಂಬಂಧ ಗಟ್ಟಿ ಆಗುತ್ತಿದೆ. ವೀಕ್ಷಕರಿಗೆ ಅದು ಸ್ಪಷ್ಟವಾಗಿ ಕಾಣುತ್ತಿದೆ.

ಮನೆಯ ಸದಸ್ಯರು ಕೂಡ ಅರವಿಂದ್ ಹಾಗೂ ದಿವ್ಯಾ ಉರುಡುಗ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ದಿವ್ಯಾಗೆ ಅರವಿಂದ್​ ಮನಸೋತಿದ್ದಾರೆ ಎಂದು ಪ್ರಶಾಂತ್​ ಸಂಬರಗಿ ಅಭಿಪ್ರಾಯ ಪಟ್ಟಿದ್ದಾರೆ. ಅದಕ್ಕೆ ಗೀತಾ ಭಾರತಿ ಭಟ್​ ಕೂಡ ಧ್ವನಿ ಗೂಡಿಸಿದ್ದಾರೆ. ಎಷ್ಟರಮಟ್ಟಿಗೆಂದರೆ, ದಿವ್ಯಾ-ಅರವಿಂದ್​ ಮದುವೆ ಆಗೋದು ಖಚಿತ ಎಂಬ ರೀತಿಯಲ್ಲಿ ಗೀತಾ-ಪ್ರಶಾಂತ್ ಮಾತನಾಡಿದ್ದಾರೆ.

ಜೋಡಿ ಟಾಸ್ಕ್​ನಲ್ಲಿ ದಿವ್ಯಾ ಮತ್ತು ಅರವಿಂದ್ ಜೊತೆಯಾಗಿ ಆಟ ಆಡಿದರು. ಆದರೆ ಆ ಟಾಸ್ಕ್​ ಮುಗಿದು ಎರಡು ದಿನ ಕಳೆದರೂ ಕೂಡ ಅವರಿಬ್ಬರು ಜೊತೆಜೊತೆಯಾಗಿಯೇ ಕಾಲ ಕಳೆಯುತ್ತಿದ್ದಾರೆ. ಎಲ್ಲರ ಮನದಲ್ಲಿ ಅನುಮಾನ ಮೂಡಲು ಇದೇ ಕಾರಣ ಆಗಿದೆ. ‘ಇರಲಿ.. ಇಬ್ಬರಿಗೂ ಇದರಿಂದ ಒಳ್ಳೆಯದಾದರೆ ಸಾಕು’ ಎಂದು ಗೀತಾ ಹೇಳಿದ್ದಾರೆ.

‘ಮದುವೆ ಮಾಡಿಸಲು ಯಾರ್ಯಾರೋ ಏನೇನೋ ಪ್ರಯತ್ನ ಮಾಡುತ್ತಾರೆ. ಇದು ಕೂಡ ಒಂದು ಪ್ರಯತ್ನ. ಬಿಗ್ ಬಾಸ್​ ಪ್ರಯತ್ನ’ ಎಂದು ಪ್ರಶಾಂತ್​ ಹೇಳಿದ್ದಾರೆ. ‘ನಮಗೆಲ್ಲ ಒಂದು ಮದುವೆ ಊಟ ಸಿಕ್ಕಂತೆ ಆಗುತ್ತದೆ. ಹೇಗಿದ್ದರೂ ಶುಭಾ ಅಕ್ಕನ ಮದುವೆ ಊಟಕ್ಕೆ ನಾವೆಲ್ಲ ಹೋಗುತ್ತೇವೆ. ಅದರ ಜೊತೆಗೆ ಇದೂ ಒಂದು ಆಗುತ್ತದೆ’ ಎಂದು ಹೇಳಿದ್ದಾರೆ ಗೀತಾ.

ಬಿಗ್​ ಬಾಸ್​ ಕನ್ನಡ ಸೀಸನ್​ 5ರಲ್ಲಿ ಸ್ಪರ್ಧಿಗಳಾಗಿದ್ದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವೆ ಇದೇ ರೀತಿ ಪ್ರೀತಿ ಚಿಗುರಿತ್ತು. ಮನೆಯಿಂದ ಹೊರಬಂದ ಬಳಿಕ ಅವರಿಬ್ಬರು ಮದುವೆ ಆಗುವ ನಿರ್ಧಾರಕ್ಕೆ ಬಂದರು. ಅದೇ ಮಾರ್ಗದಲ್ಲಿ ದಿವ್ಯಾ ಮತ್ತು ಅರವಿಂದ್​ ಕೂಡ ಸಾಗುವ ಲಕ್ಷಣ ಗೋಚರಿಸುತ್ತಿದೆ. ಅಥವಾ ಇದೆಲ್ಲರೂ ಆಟದ ಸ್ಟ್ರ್ಯಾಟಜಿ ಆಗಿದ್ದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ ಮನೆಯಿಂದ ಹೊರಬಂದ ಗೀತಾ? ‘ಬ್ರಹ್ಮಗಂಟು’ ನಟಿಯ ಆಟ ಅಂತ್ಯ

BBK8: ತಂದೆ-ಮಗಳ ಪ್ರೀತಿ ಮೇಲೆಯೇ ಶಂಕರ್​ ಅಶ್ವತ್ಥ್​ಗೆ ಅನುಮಾನ! ಮಾನವೀಯತೆಗೆ ಬೆಲೆ ಇಲ್ವಾ?