ವಿಶ್ಲೇಷಣೆ | ಮುಂಬೈ ಪೊಲೀಸ್ ಕಮಿಷನರ್​ ಹುದ್ದೆಗೆ ಹೇಮಂತ್ ನಗರಾಳೆ ನೇಮಕದ ಮೂಲಕ ಮಹಾರಾಷ್ಟ್ರ ಸರ್ಕಾರ ಏನು ಸಾಧಿಸಲು ಹೊರಟಿದೆ?

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಡಿಜಿಪಿ ಹುದ್ದೆಯಲ್ಲಿದ್ದ ನಗರಾಳೆ ಅವರಿಗೆ ಪೊಲೀಸ್ ಕಮಿಷನರ್ ಹುದ್ದೆ ನೀಡಿದ್ದರ ಹಿಂದೆ ಹಲವು ಲೆಕ್ಕಾಚಾರಗಳಿವೆ. ಅಂಥ ಲೆಕ್ಕಾಚಾರಗಳನ್ನು ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ.

ವಿಶ್ಲೇಷಣೆ | ಮುಂಬೈ ಪೊಲೀಸ್ ಕಮಿಷನರ್​ ಹುದ್ದೆಗೆ ಹೇಮಂತ್ ನಗರಾಳೆ ನೇಮಕದ ಮೂಲಕ ಮಹಾರಾಷ್ಟ್ರ ಸರ್ಕಾರ ಏನು ಸಾಧಿಸಲು ಹೊರಟಿದೆ?
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮುಂಬೈ ನಗರ ಪೊಲೀಸ್ ಆಯುಕ್ತ ಹೇಮಂತ್ ನಗರಾಳೆ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ರಶ್ಮಿ ಕಲ್ಲಕಟ್ಟ

Updated on:Mar 21, 2021 | 4:08 PM

ಮುಂಬೈ ಪೊಲೀಸ್ ಆಯುಕ್ತರಾಗಿ ಕಳೆದ ಬುಧವಾರ (ಮಾರ್ಚ್ 17) ಹೇಮಂತ್ ನಗರಾಳೆ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪೊಲೀಸ್ ಇಲಾಖೆ ಕಳೆದುಕೊಂಡಿರುವ ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಸರಿಪಡಿಸುವುದೇ ನನ್ನ ಮುಖ್ಯ ಗುರಿ’ ಎಂದು ಹೇಳಿದ್ದರು. ವಾಸ್ತವವಾಗಿ ಅವರಿಗೆ ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಒಲಿದದ್ದು ಸಹ ಅದೇ ಕಾರಣಕ್ಕೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಡಿಜಿಪಿ ಹುದ್ದೆಯಲ್ಲಿದ್ದ ನಗರಾಳೆ ಅವರಿಗೆ ಪೊಲೀಸ್ ಕಮಿಷನರ್ ಹುದ್ದೆ ನೀಡಿದ್ದರ ಹಿಂದೆ ಹಲವು ಲೆಕ್ಕಾಚಾರಗಳಿವೆ. 1987ರ ಬ್ಯಾಚ್​ ಐಪಿಎಸ್ ಆಫೀಸರ್ ನಗರಾಳೆ ಇದೀಗ ವಿವಾದಾತ್ಮಕ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಮುಂಬೈನ ಹಿಂದಿನ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಸ್ಥಾನ ತುಂಬಿದ್ದಾರೆ.

ರಾಜಕೀಯ ವಿವಾದಗಳಿಂದ ದೂರವೇ ಉಳಿದಿರುವ ನಗರಾಳೆ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಎಲೆಮರೆಯ ಕಾಯಿಯಂತೆ (ಲೊ ಪ್ರೊಫೈಲ್) ತಮ್ಮಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುವ ಅಧಿಕಾರಿ ಎಂದೇ ಗುರುತಿಸಿಕೊಂಡವರು. ಮುಂಬೈ ಪೊಲೀಸ್​ ವಿಭಾಗದ ಜವಾಬ್ದಾರಿಯನ್ನು 2014ರಲ್ಲಿ ಕೆಲ ಸಮಯದವರೆಗೆ ಉಸ್ತುವಾರಿಯಾಗಿ ವಹಿಸಿಕೊಂಡಿದ್ದರು. ಕೇಂದ್ರೀಯ ತನಿಖಾ ದಳದಲ್ಲಿಯೂ (ಸಿಬಿಐ) ನಿಯೋಜನೆ ಮೇರೆಗೆ ಕೆಲಸ ಮಾಡಿದ್ದರು.

ನಗರಾಳೆ ಅವನ್ನು ಮುಂಬೈ ಪೊಲೀಸ್ ಆಯುಕ್ತರಾಗಿ ನಿಯೋಜಿಸಿದ ಮುಖ್ಯ ಉದ್ದೇಶವೇ ಮುಂಬೈ ಪೊಲೀಸರಿಗೆ ಅಂಟಿರುವ ಗುಂಪುಗಾರಿಕೆಯ ಕಳಂಕ ತೊಳೆಯುವುದು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು. ವಿವಾದಗಳಿಂದ ದೂರವೇ ಉಳಿದಿರುವ ಮತ್ತು ಹಿರಿತನ ಹಾಗೂ ಅನುಭವದಲ್ಲಿಯೂ ಮುಂದಿರುವ ನಗರಾಳೆ ಈ ಉದ್ದೇಶಗಳನ್ನು ಈಡೇರಿಸಬಲ್ಲರು ಎಂಬ ವಿಶ್ವಾಸ ಸರ್ಕಾರಕ್ಕಿದೆ ಎಂದು ಎನ್​ಸಿಪಿಯ ಹೆಸರು ಹೇಳಲು ಇಚ್ಛಿಸದ ಸಚಿವರೊಬ್ಬರು ಹೇಳುತ್ತಾರೆ.

ಮುಕೇಶ್ ಆಂಬಾನಿ ಮನೆ ಎದುರು ಸ್ಫೋಟಕಗಳು ತುಂಬಿದ್ದ ಕಾರು ಪತ್ತೆಯಾದ ಪ್ರಕರಣದಲ್ಲಿ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಆಪ್ತ ಸಚಿನ್ ವಾಜೆ ಬಂಧನವು ಮಹಾರಾಷ್ಟ್ರ ಸರ್ಕಾರಕ್ಕೆ ಇರಿಸುಮುರಿಸು ತಂದಿತ್ತು. ಅಂಬಾನಿ ಮನೆ ಎದುರು ಪತ್ತೆಯಾದ ಸ್ಕಾರ್ಪಿಯೊ ಕಾರಿನ ಮಾಲೀಕ ಮನ್​ಸುಖ್ ಹಿರೇನ್​ ವಿಚಾರಣೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ ತಂಡದಲ್ಲಿ ವಾಜೆ ಸಹ ಇದ್ದರು. ಮನ್​ಸುಖ್ ಹಿರೇನ್ ಥಾಣೆ ಸಮೀಪದ ಸಾಗರ ತೀರದಲ್ಲಿ ಮಾರ್ಚ್ 5ರಂದು ಶವವಾಗಿ ಪತ್ತೆಯಾಗಿದ್ದರು. 2004ರಲ್ಲಿಯೇ ವಾಜೆಯನ್ನು ಪೊಲೀಸ್ ವಶದಲ್ಲಿದ್ದಾಗ ಮೃತಪಟ್ಟಿದ್ದ ಖ್ವಾಜಾ ಯೂನುಸ್ ಸಾವಿನ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಪರಮ್ ವೀರ್ ಸಿಂಗ್ ನೇತೃತ್ವದ ಸಮಿತಿಯು ವಾಜೆ ಮರುನಿಯೋಜನೆಗೆ ಅನುಮತಿ ನೀಡಿತ್ತು.

ಲೋಕ್​ಮತ್ ಸಂಸ್ಥೆಯ ‘ಮಹಾರಾಷ್ಟ್ರದ ವರ್ಷದ ವ್ಯಕ್ತಿ’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೃಹ ಸಚಿವ ಅನಿಲ್ ದೇಶ್​ಮುಖ್ ‘ಅವರ (ಪರಮ್ ವೀರ್ ಸಿಂಗ್) ವರ್ಗಾವಣೆಯು ಕೇವಲ ಆಡಳಿತಾತ್ಮಕ ನಿರ್ಧಾರವಷ್ಟೇ ಆಗಿರಲಿಲ್ಲ’ ಎಂದು ಹೇಳಿದ್ದರು. ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಮತ್ತು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ್ದ ತನಿಖೆಯಲ್ಲಿ ಪರಮ್​ ವೀರ್ ಸಿಂಗ್ ಅವರ ಸಹೋದ್ಯೋಗಿಗಳು ನಿರ್ಲಕ್ಷಿಸಲು ಸಾಧ್ಯವಿಲ್ಲದಂಥ ಕೆಲ ಆಕ್ಷೇಪಾರ್ಹ ಕೆಲಸಗಳನ್ನು ಮಾಡಿರುವುದು ಕಂಡು ಬಂದಿತ್ತು. ಈ ಬಗ್ಗೆ ನಾನು ಮತ್ತು ಮುಖ್ಯಮಂತ್ರಿ ಪರಸ್ಪರ ಚರ್ಚೆ ನಡೆಸಿದೆವು. ಪಾರದರ್ಶಕ ತನಿಖೆ ನಡೆಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಆಯುಕ್ತರನ್ನು ಬದಲಿಸಲು ನಿರ್ಧರಿಸಿದೆವು ಎಂದು ದೇಶ್​ಮುಖ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ದೂರಿದ್ದ ನಗರಾಳೆ ಇದೀಗ 58ರ ಹರೆಯದಲ್ಲಿರುವ ನಗರಾಳೆ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳೊಂದಿಗೆ ಸಮಾನ ಅಂತರ ಕಾಯ್ದುಕೊಂಡವರು. ನಗರಾಳೆ ನೇಮಕಕ್ಕೂ ಮೊದಲು ಸಿಂಗ್ ಅವರ ಸ್ಥಾನಕ್ಕೆ 1988ರ ಬ್ಯಾಚ್​ ಐಪಿಎಸ್ ಅಧಿಕಾರಿ ರಜನೀಶ್ ಶೇಟ್ ಅವರನ್ನು ನೇಮಿಸಿ, ಎನ್​ಸಿಪಿ ಋಣ ಸಂದಾಯ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ನಗರಾಳೆ ಅವರಂತೆಯೇ ಶೇಟ್ ಸಹ ಉತ್ತಮ ಅಧಿಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಗರಾಳೆಗೆ ‘ದಾದಾಕೆಬಾಝ್​’ (ಮುನ್ನುಗ್ಗುವ) ಸ್ವಭಾವವಿದೆ. ಈ ವಿಚಾರದಲ್ಲಿ ಶೇಟ್ ಸಪ್ಪೆ ಎನಿಸುತ್ತಿದ್ದರು’ ಎಂದು ಶಿವಸೇನೆಯ ಹೆಸರು ಹೇಳಲು ಇಚ್ಛಿಸದ ನಾಯಕರೊಬ್ಬರು ಹೇಳಿದ್ದರು.

ಎಲ್ಲವನ್ನೂ ಸರಿದೂಗಿಸುವ ಉದ್ದೇಶದಿಂದ ನಗರಾಳೆ ಅವರನ್ನು ಸರ್ಕಾರವು ಮುಂಬೈ ಆಯುಕ್ತರ ಸ್ಥಾನಕ್ಕೆ ನಿಯೋಜಿಸಿತು. ‘ಈ ಹಿಂದೆ ಅಂದರೆ 1998ರಿಂದ 2002ರವರೆಗೆ ನಗರಾಳೆ ಸಿಬಿಐನಲ್ಲಿ ಎಸ್​ಪಿ ಮತ್ತು ಡಿಐಜಿ ದರ್ಜೆಯ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಸಂದರ್ಭ ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಯೊಂದಿಗೆ ಮಹಾರಾಷ್ಟ್ರ ಸರ್ಕಾರದ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಅದನ್ನೂ ಸರಿಪಡಿಸಿಕೊಳ್ಳುವ ಅಗತ್ಯವಿತ್ತು. ನಗರಾಳೆ ನೇಮಕದ ಹಿಂದೆ ಈ ಉದ್ದೇಶವೂ ಕೆಲಸ ಮಾಡಿದೆ’ ಎನ್ನುತ್ತಾರೆ ಅವರು.

ಅವರದೇ ದರ್ಜೆಯ ಇತರ ಅಧಿಕಾರಿಗಳಿಗೆ ಹೋಲಿಸಿದರೆ ನಗರಾಳೆ ರಾಜಕೀಯ ವಿವಾದಗಳಿಂದ ದೂರವೇ ಉಳಿದವರು. ಆದರೆ ಕೌಟುಂಬಿಕ ಜಗಳವೊಂದು ಅವರ ವೃತ್ತಿಯಲ್ಲಿಯೂ ಇಣುಕಿತ್ತು. 2008ರಲ್ಲಿ ನಗರಾಳೆ ಅವರ ಪತ್ನಿ ಪ್ರತಿಮಾ ಹಿರಿಯ ಅಧಿಕಾರಿಗಳು ಮತ್ತು ಸಚಿವರಿಗೆ ಪತ್ರಬರೆದು, ಪತಿಯಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ಆಗುತ್ತಿದೆ ಎಂದು ದೂರಿದ್ದರು. ಮಹಾರಾಷ್ಟ್ರ ವಿದ್ಯುತ್ ಮಂಡಳಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನಿಯುಕ್ತರಾಗಿದ್ದಾಗಲೂ ನಗರಾಳೆ ವಿರುದ್ಧ ಅವರ ಪತ್ನಿಯೇ ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆಯ ಆರೋಪ ಮಾಡಿದ್ದರು. ಈ ಎರಡೂ ವಿಷಯಗಳು ನಗರಾಳೆ ವೃತ್ತಿ ಜೀವನದ ಕಪ್ಪುಚುಕ್ಕೆಗಳಾಗಿ ಉಳಿದುಕೊಂಡಿವೆ.

2014ರಲ್ಲಿ ಅಂದಿನ ಡಿjಇಪಿ ಸಂಜೀವ್ ದಯಾಳ್ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಸಂಜಯ್ ಬಾರ್ವೆ, ಹಿಮಾಂಷು ರಾಯ್ ಅವರೊಂದಿಗೆ ನಗರಾಳೆ ಸಹ ರಾಜ್ಯದ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಇದೂ ಸಹ ಅಂದು ದೊಡ್ಡ ವಿವಾದವಾಗಿತ್ತು.

26/11ರ ಕಾರ್ಯಾಚರಣೆಯಲ್ಲಿ ಸಕ್ರಿಯ ಪಾತ್ರ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆ ಮೂಲದ ನಗರಾಳೆ 1989ರಲ್ಲಿ ವೃತ್ತಿಜೀವನ ಆರಂಭಿಸಿದರು. ನಕ್ಸಲ್ ಪ್ರಭಾವಿತ ರಾಜ್​ಪುರ ಪಟ್ಟಣದ ಸಹಾಯಕ ಎಸ್​ಪಿ ಆಗಿ ಕೆಲಸ ಆರಂಭಿಸಿದರು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ದೇಶವ್ಯಾಪಿ ಕೋಮು ಸಂಘರ್ಷ ಕಾಣಿಸಿಕೊಂಡಿದ್ದಾಗ ಸೊಲ್ಲಾಪುರದ ಡಿಸಿಪಿ ಆಗಿದ್ದ ನಗರಾಳೆ ಆ ನಗರವನ್ನು ಕೋಮುದಳ್ಳುರಿಯಿಂದ ಕಾಪಾಡಲು ಶ್ರಮಿಸಿದ್ದರು. 1994ರಲ್ಲಿ ರತ್ನಗಿರಿಯ ಎಸ್​ಪಿಯಾಗಿ ನಿಯೋಜನೆಗೊಂಡರು. 1996ರಲ್ಲಿ ಸಿಐಡಿಯ ಎಸ್​ಪಿ ಆಗಿ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪ್ರಶ್ನಪತ್ರಿಕೆ ತನಿಖೆ ನಡೆಸಿದ್ದರು. ಅಂಜನಾಬಾಯಿ ಗಾವಿಟ್ ಕುಟುಂಬ ಭಾಗಿಯಾಗಿದ್ದ ಹಲವು ಅಪಹರಣ ಮತ್ತು ಹತ್ಯೆ ಪ್ರಕರಣಗಳ ತನಿಖೆ ನಡೆಸಿದ್ದು ನಗರಾಳೆ. ಈ ಪ್ರಕರಣದಲ್ಲಿ ಇಬ್ಬರಿಗೆ ಸುಪ್ರೀಂಕೋರ್ಟ್​ ಮರಣದಂಡನೆ ವಿಧಿಸಿತ್ತು. ಕೇತನ್ ಪಾರೀಖ್​ ಬ್ಯಾಂಕ್ ಹಗರಣ, ಹರ್ಷದ್ ಮೆಹ್ತಾ ಹಗರಣದ ಪ್ರಕರಣಗಳನ್ನು ಸಿಬಿಐನಲ್ಲಿದ್ದಾಗ ನಗರಾಳೆ ನಿರ್ವಹಿಸಿದ್ದರು. ತೆಲಗಿ ಛಾಪಾ ಕಾಗದ ಹಗರಣದ ತನಿಖೆಯಲ್ಲಿಯೂ ನಗರಾಳೆ ಪ್ರಧಾನ ಪಾತ್ರ ನಿರ್ವಹಿಸಿದ್ದರು.

ನವೆಂಬರ್ 26, 2008ರಲ್ಲಿ ಮುಂಬೈ ನಗರದ ಮೇಲೆ ಉಗ್ರರ ದಾಳಿ ನಡೆದಾಗ ನಗರಾಳೆ ಮಹಾರಾಷ್ಟ್ರ ವಿದ್ಯುತ್ ಮಂಡಳಿಯ ವಿಶೇಷ ಘಟಕದ ಐಜಿಪಿ ಆಗಿದ್ದರು. ತಾಜ್ ಹೋಟೆಲ್​ ಸಮೀಪದಲ್ಲಿಯೇ ಇರಿಸಿದ್ದ ಆರ್​ಡಿಎಕ್ಸ್​ ಸ್ಫೋಟಕವಿದ್ದ ಬ್ಯಾಗ್ ಪತ್ತೆ ಮಾಡಿದ್ದ ನಗರಾಳೆ ಆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯನ್ನು ಕರೆಸಿಕೊಂಡಿದ್ದರು. ತಾಜ್ ಹೊಟೆಲ್​ಗೆ ನುಗ್ಗಿ, ಅಲ್ಲಿದ್ದವರನ್ನು ಆಸ್ಪತ್ರೆಗಳಿಗೆ ಸಾಗಿಸಲು ಮತ್ತು ಶವಗಳನ್ನು ತೆರವುಗೊಳಿಸಲು ಶ್ರಮಿಸಿದ್ದರು.

2014ರಲ್ಲಿ ಅಂದಿನ ಮುಂಬೈ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ರಾಜಕೀಯ ಸೇರಲೆಂದು ಸ್ವಯಂ ನಿವೃತ್ತಿ ತೆಗೆದುಕೊಂಡಾಗ ನಗರಾಳೆ ಹೆಚ್ಚುವರಿಯಾಗಿ ನಗರ ಪೊಲೀಸ್ ಆಯುಕ್ತರ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ಮೇ 2016ರಿಂದ ಜುಲೈ 2018ರವರೆಗೆ ನವಿ ಮುಂಬೈ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು. ಅಕ್ಟೋಬರ್ 2018ರಲ್ಲಿ ನಗರಾಳೆ ಅವರಿಗ ಬಡ್ತಿ ನೀಡಿ, ಡಿಜಿ ಹುದ್ದೆಗೆ ಮೇಲ್ದರ್ಜೆಗೆ ಏರಿಸಲಾಗಿತ್ತು. ಇದೇ ವರ್ಷ ಅಂದರೆ 2021ರ ಜನವರಿ ತಿಂಗಳಲ್ಲಿ ನಗರಾಳೆ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸ್ಥಾನಕ್ಕೆ ಮಹಾ ವಿಕಾಸ ಅಘಾಡಿ ಸರ್ಕಾರ ನೇಮಿಸಿತ್ತು.

ಇದನ್ನೂ ಓದಿ: ಮುಂಬೈ ಪೊಲೀಸ್​ ಆಯುಕ್ತ ಎತ್ತಂಗಡಿ.. ಮುಕೇಶ್​ ಅಂಬಾನಿಯ ಮುಟ್ಟಲು ಹೋಗಿ ಕೈಸುಟ್ಟುಕೊಂಡ ಮುಂಬೈ ಪೊಲೀಸ್!

Published On - 3:55 pm, Sun, 21 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ