Bigg Boss Kannada: ‘ಪ್ರಶಾಂತ್​ ಸಂಬರಗಿ ಕ್ಯಾರೆಕ್ಟರ್​ ಸರಿ ಇಲ್ಲ’! ನಿಧಿ ಸುಬ್ಬಯ್ಯ ಹೊರಿಸಿದ ಈ ಗಂಭೀರ ಆರೋಪಕ್ಕೆ ಕಾರಣ ಏನು?

BBK8: ಪ್ರಶಾಂತ್​ ಸಂಬರಗಿ ವರ್ತನೆಯಿಂದ ಅನೇಕರಿಗೆ ಕಿರಿಕಿರಿ ಆಗುತ್ತಿದೆ. ತಮ್ಮ ಅಸಮಾಧಾನವನ್ನು ನಟಿ ನಿಧಿ ಸುಬ್ಬಯ್ಯ ನೇರವಾಗಿ ಹೇಳಿಕೊಂಡಿದ್ದಾರೆ. ಇದರಿಂದ ದೊಡ್ಡ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ!

Bigg Boss Kannada: ‘ಪ್ರಶಾಂತ್​ ಸಂಬರಗಿ ಕ್ಯಾರೆಕ್ಟರ್​ ಸರಿ ಇಲ್ಲ’! ನಿಧಿ ಸುಬ್ಬಯ್ಯ ಹೊರಿಸಿದ ಈ ಗಂಭೀರ ಆರೋಪಕ್ಕೆ ಕಾರಣ ಏನು?
ನಿಧಿ ಸುಬ್ಬಯ್ಯ - ಪ್ರಶಾಂತ್​ ಸಂಬರಗಿ

Updated on: Mar 24, 2021 | 12:31 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಆಟ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಬೇರೆ ಬೇರೆ ಕ್ಷೇತ್ರದಿಂದ ಬಂದಿರುವ, ಭಿನ್ನ ಮನಸ್ಥಿತಿಯ ಹಲವು ಸ್ಪರ್ಧಿಗಳ ನಡುವೆ ಹೊಂದಿಕೊಂಡು ಜೀವನ ಮಾಡುವುದು ಕಷ್ಟದ ವಿಚಾರ. ಅದರ ಮಧ್ಯೆ ಯಾರಾದರೂ ಅನಗತ್ಯ ಕಿರಿಕಿರಿ ಮಾಡಿದರೆ ಮನೆಯೊಳಗಿನ ವಾತಾವರಣ ಇನ್ನಷ್ಟು ಕೆಡುವುದು ಗ್ಯಾರಂಟಿ. ಸದ್ಯ ಪ್ರಶಾಂತ್​ ಸಂಬರಗಿ ಮೇಲೆ ಅನೇಕರು ಅಂಥ ಆರೋಪ ಹೊರಿಸುತ್ತಿದ್ದಾರೆ.

ಪ್ರಶಾಂತ್​ ಸಂಬರಗಿ ಮೇಲೆ ಹಲವರಿಗೆ ಅಸಮಾಧಾನ ಇದೆ ಎಂಬುದು ನಿಜ. ಆದರೆ ನಟಿ ನಿಧಿ ಸುಬ್ಬಯ್ಯ ಅವರು ಒಂದು ಹೆಜ್ಜೆ ಮುಂದೆ ಹೋಗಿ ಪ್ರಶಾಂತ್​ ಅವರ ಕ್ಯಾರೆಕ್ಟರ್​ ಬಗ್ಗೆ ಮಾತನಾಡಿದ್ದಾರೆ. ‘ಆ ಮನುಷ್ಯನ ಕ್ಯಾರೆಕ್ಟರ್​ ಸರಿ ಇಲ್ಲ’ ಎಂದು ಎಲ್ಲರ ಎದುರಿನಲ್ಲಿ ನೇರವಾಗಿ ಹೇಳಿದ್ದಾರೆ. ಆದರೆ ಇದಿನ್ನೂ ಪ್ರಶಾಂತ್​ ಸಂಬರಗಿ ಕಿವಿಗೆ ಬಿದ್ದಿಲ್ಲ. ಒಂದು ವೇಳೆ ಈ ವಿಚಾರ ಪ್ರಶಾಂತ್​ಗೆ ಗೊತ್ತಾದರೆ ದೊಡ್ಮನೆಯಲ್ಲಿ ಅವರು ರಂಪಾಟ ಮಾಡುವ ಸಾಧ್ಯತೆ ಹೆಚ್ಚಿದೆ.

ಅಷ್ಟಕ್ಕೂ ನಿಧಿಗೆ ಪ್ರಶಾಂತ್​ ಮೇಲೆ ಇಂತಹ ಭಾವನೆ ಬರಲು ಕಾರಣ ಏನು? ಪ್ರಶಾಂತ್​ ಅವರದ್ದು ಸ್ವಲ್ಪ ಮೊಂಡುತನ ಜಾಸ್ತಿ. ತಾವು ಹೇಳಿದ್ದೇ ಸರಿ ಎಂದು ಅವರು ಆಗಾಗ ವಾದ ಮಾಡುತ್ತಾರೆ. ಇತರೆ ಸ್ಪರ್ಧಿಗಳನ್ನು ಹಲವು ಬಾರಿ ಅವರು ಕೀಳಾಗಿ ಕಂಡ ಉದಾಹರಣೆ ಇದೆ. ಇತ್ತೀಚೆಗೆ ನಡೆದ ಒಂದು ಟಾಸ್ಕ್​ನಲ್ಲಿ ನಿಧಿಗೂ ಇದೇ ರೀತಿ ಫೀಲ್​ ಆಗಿದೆ. ನಿಧಿ ಅವರನ್ನು ಪ್ರಶಾಂತ್​ ಪದೇಪದೇ ವೀಕ್ ಎಂದು​ ಹೇಳಿದ್ದು ಅವರಿಗೆ ಇಷ್ಟ ಆಗಿಲ್ಲ. ಬೇರೆಯವರಿಗೆ ಸ್ವಾತಂತ್ರ್ಯ ನೀಡದೇ ಎಲ್ಲರ ಮೇಲೂ ತಮ್ಮ ಅಭಿಪ್ರಾಯವನ್ನು ಹೇರಲು ಪ್ರಯತ್ನಿಸುತ್ತಿರುವ ಪ್ರಶಾಂತ್​ರನ್ನು ಕಂಡರೆ ಸದ್ಯಕ್ಕೆ ಅನೇಕರಿಗೆ ಹಿಡಿಸುತ್ತಿಲ್ಲ.

ಈ ವಾರ ಕ್ಯಾಪ್ಟನ್​ ಅರವಿಂದ್​ ಕೆ.ಪಿ. ಅವರನ್ನು ಹೊರತುಪಡಿಸಿ ಬೇರೆ ಎಲ್ಲ ಸದಸ್ಯರೂ ನಾಮಿನೇಟ್​ ಆಗಿದ್ದಾರೆ. ಹಾಗಾಗಿ ಎಲ್ಲರ ಮೇಲೂ ಎಲಿಮಿನೇಷನ್​ ಕತ್ತಿ ತೂಗುತ್ತಿದೆ. ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಟ ಆಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂಥ ಸಂದರ್ಭದಲ್ಲಿ ಪ್ರಶಾಂತ್​ ಸಂಬರಗಿ ತೋರಿಸುತ್ತಿರುವ ವರ್ತನೆಗೆ ನಿಧಿ ಸುಬ್ಬಯ್ಯ ಮಾತ್ರವಲ್ಲದೆ ರಘು ಗೌಡ ಕೂಡ ಬೇಸತ್ತಿದ್ದಾರೆ. ಮುಂದೇನಾಗುತ್ತದೆ ಎಂಬ ಕೌತುಕ ವೀಕ್ಷಕರಲ್ಲೂ ಮನೆ ಮಾಡಿದೆ.

ಇದನ್ನೂ ಓದಿ: ಹೆಂಡತಿಯನ್ನು ನೆನಪಿಸಿಕೊಂಡು ಗಳಗಳನೆ ಅತ್ತ ಪ್ರಶಾಂತ್​ ಸಂಬರಗಿ..

ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us