ಕನ್ನಡ ಬಿಗ್ ಬಾಸ್ 8 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ವೈರಸ್ ಇರುವ ಕಾರಣ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಮನೆ ಒಳಗೆ ಹೋಗುವ ಅಭ್ಯರ್ಥಿಗಳಿಗೆ ಕೊರೊನಾ ವೈರಸ್ ಪರೀಕ್ಷೆ ಮಾಡಿಸೋದು ಕಡ್ಡಾಯವಾಗಿದೆ. ಈಗ ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸಾಕಷ್ಟು ಬದಲಾವಣೆಯೊಂದಿಗೆ ಕಿಚ್ಚ ಸುದೀಪ್ ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ.
ಇಂದು ಕಲರ್ಸ್ ಕನ್ನಡ ವಾಹಿನಿಯವರು ಸಾಮಾಜಿಕ ಜಾಲತಾಣ ಫೆಸ್ಬುಕ್ನಲ್ಲಿ ಹೊಸ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಸುದೀಪ್ ತುಂಬಾನೇ ಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಬಟ್ಟೆ ತೊಟ್ಟಿರುವ ಅವರು, ತಲೆಗೆ ಪೇಟ ಸುತ್ತಿದ್ದಾರೆ. ಹಣೆಯಲ್ಲಿ ದೊಡ್ಡ ತಿಲಕವಿಟ್ಟಿದ್ದಾರೆ. ಕೊರಳಲ್ಲಿ ದೊಡ್ಡ ದೊಡ್ಡ ಸರಗಳನ್ನು ಧರಿಸಿದ್ದಾರೆ. ಭುಜಕ್ಕೆ ಶಾಲು ಕೂಡ ಇದೆ. ಒಟ್ಟಿನಲ್ಲಿ ಪಕ್ಕಾ ಜೋಯಿಸರ ಲುಕ್ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಇಲ್ಲಿ ಗಮನಿಸಲೇಬೇಕಾದ ಮತ್ತೊಂದು ವಿಚಾರ ಎಂದರೆ ಬಿಗ್ ಬಾಸ್ ಕಣ್ಣು ಕೂಡ ಕೆಂಪಾಗಿದೆ.
ಕೊರೊನಾ ವೈರಸ್ ಸಂದರ್ಭದಲ್ಲಿ ಲಾಕ್ಡೌನ್ 1.0, ಲಾಕ್ಡೌನ್ 2.0 ಎಂದು ಕರೆಯುತ್ತಾ ಬರಲಾಗಿತ್ತು. ಈಗ ಬಿಗ್ ಬಾಸ್ಗೂ ಲಾಕ್ಡೌನ್ 8.0 ಎಂದು ಕರೆದಿರೋದು ವಿಶೇಷ. ಲಾಕ್ಡೌನ್ ಎಂದರೆ ಮನೆಯಿಂದ ಯಾರೂ ಹೊರ ಬರುವಂತಿರಲಿಲ್ಲ. ಬಿಗ್ ಬಾಸ್ ಮನೆ ಕೂಡ ಅದೇ ರೀತಿ ಆಗಿರುವುದರಿಂದ ಹೀಗೆ ಕರೆದಿರಬಹುದು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು?
ಈ ಬಗ್ಗೆ ಬರೆದಿರುವ ಪೋಸ್ಟ್ನಲ್ಲಿ, ಲಾಕ್ಡೌನ್ 8.O ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್ನಲ್ಲಿ ಹೇಳಿ ಎಂದು ಬರೆದಿದ್ದಾರೆ. ಆದರೆ, ಎಲ್ಲಿಯೂ ಬಿಗ್ ಬಾಸ್ ಆರಂಭದ ದಿನ ಬರೆದುಕೊಂಡಿಲ್ಲ.
ಈ ಮಧ್ಯೆ, ಬಿಗ್ ಬಾಸ್ ಮನೆ ಒಳಗೆ ಯಾರೆಲ್ಲ ಹೋಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಪ್ರತಿಬಾರಿಯೂ ಬಿಗ್ ಬಾಸ್ ಆರಂಭದ ದಿನವೇ ಮನೆ ಒಳಗೆ ಹೋಗುವ ಅಭ್ಯರ್ಥಿಯ ಹೆಸರು ಅಧಿಕೃತವಾಗುತ್ತದೆ. ಆದಾಗ್ಯೂ, ಕೆಲವರು ಹೆಸರು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಹರಿದಾಡುತ್ತವೆ.ಈ ಬಾರಿ, ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ ಜಕ್ಕರ್, ಗಾಯಕ ಹನುಮಂತ, ನಯನಾ, ಟಿವಿ ಆ್ಯಂಕರ್ ಅಮರ್ ಪ್ರಸಾದ್, ಕಿರುತೆರೆ ನಟಿ ವೈಷ್ಣವಿ ಗೌಡ, ನಟ ಸುನಿಲ್, ವಿನಯ್ ಗುರೂಜಿ, ರವಿಶಂಕರ್ ಗೌಡ ಬಿಗ್ ಬಾಸ್ ಮನೆ ಸೇರಲಿರುವ ಅಭ್ಯರ್ಥಿಗಳು ಎನ್ನಲಾಗುತ್ತಿದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಕನ್ನಡ-8 ಆರಂಭಕ್ಕೆ ಮುಹೂರ್ತ ಫಿಕ್ಸ್, ಫೆಬ್ರವರಿ 28ಕ್ಕೆ ಗ್ರ್ಯಾಂಡ್ ಎಂಟ್ರಿ?
ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಆರಂಭಗೊಳ್ಳುತ್ತಿತ್ತು. ಆದರೆ, ಈ ಬಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬಿಗ್ ಬಾಸ್ ಆರಂಭ ತಡವಾಗಿದೆ. ಕೊರೊನಾ ಮಧ್ಯೆ ಬಿಗ್ ಬಾಸ್ ನಡೆಯೋದೆ ಅನುಮಾನ ಎಂದೂ ಹೇಳಲಾಗಿತ್ತು. ಆದರೆ, ಕೊನೆಗೂ ಬಿಗ್ ಬಾಸ್ ಪ್ರಸಾರಗೊಳ್ಳುತ್ತಿದೆ. ಈ ಬಾರಿ ಮನೆ ಒಳಗೆ ಹೋಗುವ ಅಭ್ಯರ್ಥಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಎನ್ನಲಾಗುತ್ತಿದೆ. ಕೊರೊನಾ ನೆಗೆಟಿವ್ ಬಂದ ನಂತರವೇ ಅಭ್ಯರ್ಥಿಗಳನ್ನು ಮನೆ ಒಳಗೆ ಬಿಡುವ ಸಾಧ್ಯತೆ ಇದೆ.
Published On - 1:20 pm, Fri, 12 February 21