Bigg Boss Kannada Voice: ‘ಬಿಗ್​ ಬಾಸ್​ ಧ್ವನಿ ಚೇಂಜ್​ ಮಾಡ್ರೋ, ಕೇಳೋಕೆ ಆಗ್ತಿಲ್ಲ’; ಆಕ್ರೋಶ ಹೊರ ಹಾಕಿದ ವೀಕ್ಷಕರು!

ಪ್ರೊಮೋ ಸಂದರ್ಭದಲ್ಲೂ ಕಿಚ್ಚ ಸುದೀಪ್​ ಜ್ಯೋತಿಷ್ಯ ಹೇಳುವವರ ಅವತಾರ ಎತ್ತಿದ್ದರು. ಈ ಮೂಲಕ ಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದರು. ಇದು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಹೀಗೆ ಪ್ರತಿ ಹಂತದಲ್ಲೂ ಹೊಸ ವಿಚಾರವನ್ನು ತೋರಿಸಲಾಗಿತ್ತು.

Bigg Boss Kannada Voice: ಬಿಗ್​ ಬಾಸ್​ ಧ್ವನಿ ಚೇಂಜ್​ ಮಾಡ್ರೋ, ಕೇಳೋಕೆ ಆಗ್ತಿಲ್ಲ; ಆಕ್ರೋಶ ಹೊರ ಹಾಕಿದ ವೀಕ್ಷಕರು!
ಬಿಗ್​ ಬಾಸ್​

Updated on: Mar 02, 2021 | 4:23 PM

ಬಿಗ್​ ಬಾಸ್​ ಮನೆಯಲ್ಲಿ ಯಾರೆಲ್ಲ ಸ್ಪರ್ಧಿಗಳು ಹೋಗುತ್ತಾರೆ ಎನ್ನುವುದು ಎಷ್ಟು ಮುಖ್ಯವೋ ಅದೇ ರೀತಿ, ಬಿಗ್​ ಬಾಸ್​ ಮನೆಯ ವಿನ್ಯಾಸ, ಅದರಲ್ಲಿ ಬರುವ ಬಿಗ್​ ಬಾಸ್​ ಧ್ವನಿ, ವೀಕೆಂಡ್​ನಲ್ಲಿ ಸುದೀಪ್​ ತೊಡುವ ಬಟ್ಟೆ ಎಲ್ಲವೂ ತುಂಬಾನೇ ಮುಖ್ಯ. ಇದನ್ನು ಪ್ರೇಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಇದರಲ್ಲಿ ಸ್ವಲ್ಪ ಬದಲಾವಣೆ ಆದರೂ ಪ್ರೇಕ್ಷಕ ಮಹಾಶಯ ಇದನ್ನು ಸಹಿಸಿಕೊಳ್ಳುವುದಿಲ್ಲ. ಈ ಬಾರಿಯೂ ಹಾಗೆಯೇ ಆಗಿದೆ! ಬಿಗ್​ ಬಾಸ್​-8ರಲ್ಲಿ ಆದ ಮಹತ್ವದ ಬದಲಾವಣೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಬಿಗ್​ ಬಾಸ್​​-8 ಸಂಪೂರ್ಣ ಹೊಸ ರೀತಿಯಲ್ಲಿ ಬರಲಿದೆ ಎಂದು ಕಲರ್ಸ್​ ಕನ್ನಡ ವಾಹಿನಿ ಹೇಳಿಕೊಂಡಿತ್ತು. ಅದೇ ರೀತಿ ಬಿಗ್​ ಬಾಸ್​ ಮನೆಯ ವಿನ್ಯಾಸ ಬದಲಾಗಿದೆ. ಗಾರ್ಡನ್​ ಏರಿಯಾ, ಬಿಗ್​ ಬಾಸ್​ ಮನೆ ಒಳಭಾಗದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೀಗಾಗಿ, ಬಿಗ್​ ಬಾಸ್​ ಮನೆ ಮತ್ತಷ್ಟು ರಿಚ್​ ಆಗಿ ಕಾಣುತ್ತಿದೆ.

ಪ್ರೊಮೋ ಸಂದರ್ಭದಲ್ಲೂ ಕಿಚ್ಚ ಸುದೀಪ್​ ಜ್ಯೋತಿಷ್ಯ ಹೇಳುವವರ ಅವತಾರ ಎತ್ತಿದ್ದರು. ಈ ಮೂಲಕ ಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದರು. ಇದು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಹೀಗೆ ಪ್ರತಿ ಹಂತದಲ್ಲೂ ಹೊಸ ವಿಚಾರವನ್ನು ತೋರಿಸಲಾಗಿತ್ತು.

ಈಗ ಬಿಗ್​ ಬಾಸ್​-8ರಲ್ಲಿ ಮಾಡಿದ ಮಹತ್ವದ ಬದಲಾವಣೆಯೊಂದರ ಬಗ್ಗೆ ಪ್ರೇಕ್ಷಕರು ಸಿಟ್ಟಾಗಿದ್ದಾರೆ. ಅದುವೇ ಧ್ವನಿಯ ವಿಚಾರ. ಸ್ಪರ್ಧಿಗಳು ಮನೆಯಲ್ಲಿ ಕೂತಿದ್ದಾಗ ‘ಇದು ಬಿಗ್​ ಬಾಸ್​​…’ ಎಂದು ಕಮಾಂಡ್​ ನೀಡುವ ಧ್ವನಿ ಬರುತ್ತಿತ್ತು. ಆದರೆ, ಈ ಬಾರಿ ಆ ಧ್ವನಿ ಬದಲಾಗಿದೆ. ಬೇರೆಯದೇ ವಾಯ್ಸ್​ ಈ ಬಾರಿ ಕಮಾಂಡ್​ ನೀಡುತ್ತಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಬಿಗ್​ ಬಾಸ್​ ವಾಯ್ಸ್​ನಲ್ಲಿ ಗತ್ತು-ಖದರ್​ ಎರಡೂ ಇಲ್ವಲ್ಲ ಗುರೂ. ಹಳೆಯ ಬಿಗ್​ ಬಾಸ್​ ಧ್ವನಿ ಬೇಕು ನಮಗೆ. ಹೊಸ ಬಿಗ್​ ಬಾಸ್​ಗೆ ಗಂಟಲು ಕಿರಿಕಿರಿ ಆಗಿರುವ ರೀತಿಯಲ್ಲಿ ಲೋ ಟೋನ್​ನಲ್ಲಿ ವಾಯ್ಸ್​ ನೀಡುತ್ತಿದ್ದಾರೆ. ಇದರಲ್ಲಿ ಕಮಾಂಡಿಂಗ್​ ಇಲ್ಲವೇ ಇಲ್ಲ ಎಂದು ಕೆಲವರು ಬೇಸರ ಹೊರ ಹಾಕಿದರೆ, ಇನ್ನೂ ಕೆಲವರು ಬಿಗ್​ ಬಾಸ್​ ಧ್ವನಿ ಚೇಂಜ್​ ಮಾಡ್ರೋ, ಕೇಳೋಕೆ ಆಗ್ತಿಲ್ಲ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bigg Boss Kannada Day 1: ಬ್ರೋ ಗೌಡಗೆ ದಿವ್ಯಾ ಸುರೇಶ್ ಮೇಲೆ ಪ್ರೀತಿ?; ಬಿಗ್​ ಬಾಸ್​ ಮನೆಯಲ್ಲಿ ತ್ರಿಕೋನ ಪ್ರೇಮ ಕಥೆ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us