AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಸ್ಟ್ ಮಿಸ್: ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಅಗ್ನಿಶಾಮಕ ಸಿಬ್ಬಂದಿ ಮುಖದ ಮುಂದೆಯೇ ಬ್ಲಾಸ್ಟ್! ಮುಂದೇನಾಯ್ತು?

ಬುಧವಾರ ತಡರಾತ್ರಿ ಮನೆಯ ಗೇಟ್​ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ.

ಜಸ್ಟ್ ಮಿಸ್: ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಅಗ್ನಿಶಾಮಕ ಸಿಬ್ಬಂದಿ ಮುಖದ ಮುಂದೆಯೇ ಬ್ಲಾಸ್ಟ್! ಮುಂದೇನಾಯ್ತು?
ಜಸ್ಟ್ ಮಿಸ್: ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಅಗ್ನಿಶಾಮಕ ಸಿಬ್ಬಂದಿ ಮುಖದ ಮುಂದೆಯೇ ಬ್ಲಾಸ್ಟ್!
TV9 Web
| Edited By: |

Updated on:Nov 18, 2021 | 11:22 AM

Share

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಬುಧವಾರ ತಡರಾತ್ರಿ ಮನೆಯ ಗೇಟ್​ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ. ಬೆಂಕಿ ನಂದಿಸುತ್ತಿದ್ದ ಮೂವರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ. ಮೂವರು ಅಗ್ನಿಶಾಮಕ ಸಿಬ್ಬಂದಿಗೆ ಗಾಯಗಳಾಗಿವೆ. ಬೆಂಕಿಯಿಂದ ಒಂದು ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ. ಕಿಶೋರ್ ಎಂಬುವರಿಗೆ ಸೇರಿದ ಮನೆ ಮತ್ತು ಕಾರು ಇದಾಗಿದೆ. ಹರೀಶ್, ರಾಜಶೇಖರ್ ಮತ್ತು ಮುತ್ತಪ್ಪ ಗಾಯಗೊಂಡಿರುವ ಅಗ್ನಿಶಾಮಕ ಸಿಬ್ಬಂದಿ.

ಏನಾಯ್ತು?: ಬೆಂಗಳೂರಿನಲ್ಲಿ ಆಕಸ್ಮಿಕ ಬೆಂಕಿಯಿಂದ ಕಾರು ಭಸ್ಮ ಪ್ರಕರಣದಲ್ಲಿ ಮೊದಲು ಮನೆಯಲ್ಲಿದ್ದ UPS ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಜ್ವಾಲೆಗಳು ಇಡೀ ಮನೆಯನ್ನೇ ಆವರಿಸಿದೆ. ಬಳಿಕ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕಾರಿಗೆ ಬೆಂಕಿ ಹೊತ್ತಿದ ಬಳಿಕ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದಿಂದ ಮೂವರು ಸಿಬ್ಬಂದಿಗೆ ಗಾಯಗಳಾಗಿವೆ.

ಘಟನೆ ವೇಳೆ ಮನೆಯಲ್ಲಿದ್ದ ಮೂವರು ಅದೃಷ್ಟವಶಾತ್‌ ಪಾರಾಗಿದ್ದಾರೆ. ಬೆಂಕಿ ಬಿದ್ದ ಕೂಡಲೇ ಟೆರೇಸ್ ಮೂಲಕ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಟೆರೇಸ್‌ನಲ್ಲಿದ್ದ ಗೇಟ್ ಒಡೆದ ಈ ಮೂವರೂ, ಪಕ್ಕದ ಬಿಲ್ಡಿಂಗ್‌ಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಮನೆ, ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ.

Car Blast: ಎದ್ನೋ ಬಿದ್ನೋ ಅಂತಾ ಓಡಿದ ಜನ, ಅಗ್ನಿಶಾಮಕ ಸಿಬ್ಬಂದಿ |Tv9 kannada

(blast during extinguishing of fire in front of house in ittamadu bengaluru)

Published On - 10:06 am, Thu, 18 November 21

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!