Bloodbath in stock market: ಷೇರುಪೇಟೆಯಲ್ಲಿ ರಕ್ತದೋಕುಳಿ; 1900 ಪಾಯಿಂಟ್​​ಗೂ ಹೆಚ್ಚು ಕುಸಿದ ಸೆನ್ಸೆಕ್ಸ್

ಭಾರತದ ಷೇರು ಮಾರ್ಕೆಟ್ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಶುಕ್ರವಾರ ಭಾರೀ ಪ್ರಮಾಣದಲ್ಲಿ ಕುಸಿದಿವೆ. ಈ ಕುಸಿತಕ್ಕೆ ಕಾರಣವಾಗಿದ್ದು ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ಸ್ಟಾಕ್​ಗಳು.

Bloodbath in stock market: ಷೇರುಪೇಟೆಯಲ್ಲಿ ರಕ್ತದೋಕುಳಿ; 1900 ಪಾಯಿಂಟ್​​ಗೂ ಹೆಚ್ಚು ಕುಸಿದ ಸೆನ್ಸೆಕ್ಸ್
ಲಾಭದ ನಗದು
Follow us
Srinivas Mata
|

Updated on:Feb 26, 2021 | 4:32 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿಯಲ್ಲಿ ಫೆಬ್ರವರಿ 26ನೇ ತಾರೀಕಿನ ಶುಕ್ರವಾರ ರಕ್ತದೋಕುಳಿ ಆಗಿದೆ. ಮಧ್ಯಾಹ್ನ 1.15ರ ಹೊತ್ತಿಗೆ ಬಿಎಸ್​​ಇ ಸೆನ್ಸೆಕ್ಸ್ ಸೂಚ್ಯಂಕ 1,743.28 ಇಳಿಕೆ ಕಂಡು, 49,296.03ಪಾಯಿಂಟ್​​ನೊಂದಿಗೆ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ ಸೂಚ್ಯಂಕವು 510.8 ಪಾಯಿಂಟ್ ನೆಲ ಕಚ್ಚಿ, 14,586.55 ಪಾಯಿಂಟ್​ನೊಂದಿಗೆ ವಹಿವಾಟು ನಡೆಸಿತು.

ದಿನಾಂತ್ಯದ ವಹಿವಾಟು ಮುಕ್ತಾಯ ಆದಾಗ ಸೆನ್ಸೆಕ್ಸ್ 1939.32 ಪಾಯಿಂಟ್​​ಗಳಷ್ಟು ಕುಸಿತ ಕಂಡು, 49,099.99 ಪಾಯಿಂಟ್​ನಲ್ಲಿ ಕೊನೆಯಾಯಿತು. ಇನ್ನು ನಿಫ್ಟಿ 568.20 ಪಾಯಿಂಟ್ ಇಳಿದು 14,529.20 ಪಾಯಿಂಟ್ ತಲುಪಿತು. ನಿಫ್ಟಿ ಬ್ಯಾಂಕ್ 1745.40 ಪಾಯಿಂಟ್ ಇಳಿಕೆಯಾಯಿತು.

ಇಂದಿನ ವಹಿವಾಟಿನಲ್ಲಿ ಮಾರ್ಕೆಟ್ ನೆಲಕಚ್ಚಲು ಕಾರಣವಾಗಿದ್ದು ಬ್ಯಾಂಕಿಂಗ್ ಹಾಗೂ ಫೈನಾನ್ಷಿಯಲ್ ಷೇರುಗಳು. ಬ್ಯಾಂಕ್ ನಿಫ್ಟಿ, ಖಾಸಗಿ ಬ್ಯಾಂಕ್, ಪಿಎಸ್​ಯು ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸೂಚ್ಯಂಕಗಳು ತಲಾ 4 ಪರ್ಸೆಂಟ್​​ಗೂ ಹೆಚ್ಚು ಕುಸಿತ ಕಂಡವು. ನಿಫ್ಟಿಯಲ್ಲಿ ಯಾವುದೇ ಷೇರು ಏರಿಕೆ ಕಾಣಲಿಲ್ಲ. ಇನ್ನು ಇಳಿಕೆಯತ್ತ ಗಮನಿಸುವುದಾದರೆ ಒಎನ್​​ಜಿಸಿ, ಜೆಎಸ್​ಡಬ್ಲ್ಯು ಸ್ಟೀಲ್, ಹೀರೋ ಮೋಟೋಕಾರ್ಪ್, ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಕೊಟಕ್ ಮಹೀಂದ್ರಾ ಕಂಪೆನಿ ಷೇರುಗಳು ಕನಿಷ್ಠ 6 ಪರ್ಸೆಂಟ್ ಇಳಿಕೆ ಕಂಡವು.

ಇಂದು ಸರ್ಕಾರದಿಂದ ಜಿಡಿಪಿ ಅಂಕಿ- ಅಂಶ ಬಿಡುಗಡೆ ಆಗಲಿದೆ. ಅಕ್ಟೋಬರ್​​ನಿಂದ ಡಿಸೆಂಬರ್ ತ್ರೈಮಾಸಿಕದ ಅಂಕಿ- ಅಂಶ ಬಿಡುಗಡೆ ಆಗಲಿದ್ದು, ಅದು ಸಕಾರಾತ್ಮಕವಾಗಬಹುದು ಎಂಬ ನಿರೀಕ್ಷೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಸ್​ಬಿಐ, ಆ್ಯಕ್ಸಿಸ್, ಕೆನರಾ ಬ್ಯಾಂಕ್.. ಉಳಿತಾಯ ಖಾತೆಗೆ ಯಾವ ಬ್ಯಾಂಕ್​ನಲ್ಲಿ ಹೆಚ್ಚು ಬಡ್ಡಿ? ಇಲ್ಲಿದೆ ವಿವರ

Published On - 1:52 pm, Fri, 26 February 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ