‘ನಿಮ್ಮ ಅರ್ಹತೆಗಿಂತ ಸುಂದರ ಹೆಂಡತಿ ಇದ್ದಾಳೆ’ ಎಂದು ಟ್ರೋಲ್ ಮಾಡಿದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಕ್ಲಾಸ್!

ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ಹಾಕಿರುವುದಕ್ಕೆ ಅಭಿಮಾನಿಗಳು ಬಹಳ ಸಂತಸ ಸೂಚಿಸಿದ್ದಾರೆ. ಇಂತಹ ಘಟನೆಗಳನ್ನು ಕಮೆಂಟ್ ಮೂಲಕ ಬಚ್ಚನ್ ಹ್ಯಾಂಡಲ್ ಮಾಡುವ ರೀತಿಗೆ ಖುಷಿಯಾಗಿದ್ದಾರೆ. ನಿಮ್ಮ ಹೆಮ್ಮೆಯ ಅಭಿಮಾನಿ ನಾನು ಎಂದು ಓರ್ವ ಬರೆದುಕೊಂಡಿದ್ದು, ಅಭಿಷೇಕ್ ಬಚ್ಚನ್​ಗೆ ಗೌರವ ಸೂಚಿಸಿದ್ದಾರೆ.

‘ನಿಮ್ಮ ಅರ್ಹತೆಗಿಂತ ಸುಂದರ ಹೆಂಡತಿ ಇದ್ದಾಳೆ’ ಎಂದು ಟ್ರೋಲ್ ಮಾಡಿದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಕ್ಲಾಸ್!
ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ
Updated By: ganapathi bhat

Updated on: Apr 05, 2022 | 1:17 PM

ಸಾಮಾಜಿಕ ಜೀವನದ ಭಾಗವಾಗಿರುವ ಸೆಲೆಬ್ರಿಟಿಗಳು ಟ್ರೋಲ್ ಆಗುವುದು ಸಾಮಾನ್ಯ ಎಂಬಂತಾಗಿದೆ. ಆದರೆ, ಟ್ರೋಲ್​​ಗಳು ಕೆಲವೊಮ್ಮೆ ತಮ್ಮ ಮಿತಿ ಮೀರಿ ತಾರೆಯರ ಮನಸನ್ನೂ ನೋಯಿಸಿಬಿಡುತ್ತದೆ. ಎಲ್ಲವನ್ನೂ ನಿರ್ಲಕ್ಷಿಸಲಾಗದು ಎಂದು ಸೆಲೆಬ್ರಿಟಿಗಳೂ ಟ್ರೋಲ್​​ಗೆ ಪ್ರತಿಕ್ರಿಯಿಸುವ ಘಟನೆ ನಡೆಯುತ್ತದೆ. ಸೆಲೆಬ್ರಿಟಿಗಳ ಈ ಬದುಕಿನ ಬಗ್ಗೆ ಇತ್ತೀಚೆಗೆ ಯಶ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಹಾಸನದ ಭೂಮಿ ವಿವಾದಕ್ಕೆ ಸಂಬಂದಿಸಿ ‘ಸೆಲೆಬ್ರಿಟಿಗಳಿಗೆ ಇದು ಶಾಪ’ ಎಂದು ಬೇಸರಿಸಿದ್ದರು. ಬಾಲಿವುಡ್ ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರಿಗೆ ಅಂಥ ಪರಿಸ್ಥಿತಿಯೊಂದು ಎದುರಾಗಿದೆ. ಮನೆ-ಮಡದಿ ವಿಷಯವನ್ನು ಪ್ರಸ್ತಾಪಿಸಿದವರಿಗೆ ಅಭಿಷೇಕ್ ಖಡಕ್ ಆಗಿಯೇ ಉತ್ತರಿಸಿದ್ದಾರೆ.

ಅಭಿಷೇಕ್ ಬಚ್ಚನ್ ನಟನೆಯ ಸಿನಿಮಾ ಬಿಗ್ ಬುಲ್ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದಕ್ಕೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬ, ‘ಅಭಿಷೇಕ್ ಬಚ್ಚನ್, ನೀವು ಯಾವುದಕ್ಕೂ ಲಾಯಕ್ಕಿಲ್ಲ.. ನಿಮ್ಮ ಒಂದೇ ವಿಷಯದ ಬಗ್ಗೆ ನಾನು ಹೊಟ್ಟೆಕಿಚ್ಚು ಪಡುವುದೆಂದರೆ ನಿಮಗೆ ತುಂಬಾ ಸುಂದರ ಮಡದಿ ಇದ್ದಾಳೆ..’ ಎಂದು ಬರೆದಿದ್ದರು. ಈ ಕೆಟ್ಟ ಕಮೆಂಟ್​ಗೆ ಅಭಿಷೇಕ್ ಬಚ್ಚನ್ ಖುದ್ದಾಗಿ ಪ್ರತಿಕ್ರಿಯಿಸಿ, ವ್ಯಂಗ್ಯವಾಡಿದ್ದಾರೆ.

ಒಕೆ. ಥ್ಯಾಂಕ್ಯು ಫಾರ್ ಯುವರ್ ಒಪಿನಿಯನ್ ಎಂದು ಮೊದಲು ಧನ್ಯವಾದ ತಿಳಿಸಿರುವ ಅಭಿಷೇಕ್ ಬಚ್ಚನ್, ಬಳಿಕ ಆತನನ್ನು ಪ್ರಶ್ನೆ ಮಾಡಿದ್ದಾರೆ. ಕಮೆಂಟ್​ನಲ್ಲಿ ಬಹಳಷ್ಟು ಜನರನ್ನು ಟ್ಯಾಗ್ ಮಾಡಲಾಗಿದೆ. ನೀವು ಯಾರನ್ನು ರೆಫರ್ ಮಾಡುತ್ತಿದ್ದೀರಾ? ಎಂದು ಮರುಪ್ರಶ್ನೆ ಹಾಕಿದ್ದಾರೆ.

ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ಹಾಕಿರುವುದಕ್ಕೆ ಅಭಿಮಾನಿಗಳು ಬಹಳ ಸಂತಸ ಸೂಚಿಸಿದ್ದಾರೆ. ಇಂತಹ ಘಟನೆಗಳನ್ನು ಕಮೆಂಟ್ ಮೂಲಕ ಬಚ್ಚನ್ ಹ್ಯಾಂಡಲ್ ಮಾಡುವ ರೀತಿಗೆ ಖುಷಿಯಾಗಿದ್ದಾರೆ. ನಿಮ್ಮ ಹೆಮ್ಮೆಯ ಅಭಿಮಾನಿ ನಾನು ಎಂದು ಓರ್ವ ಬರೆದುಕೊಂಡಿದ್ದು, ಅಭಿಷೇಕ್ ಬಚ್ಚನ್​ಗೆ ಗೌರವ ಸೂಚಿಸಿದ್ದಾರೆ.

ಇದನ್ನೂ ಓದಿ: Ind vs Eng 1st ODI: ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಕೃನಾಲ್ ಪಾಂಡ್ಯ ಭಾವುಕರಾಗಿ ಅತ್ತುಬಿಟ್ಟರು!

ತಮಿಳುನಾಡು ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ: ಮತದಾರರಿಗೆ ನೆನಪಾಗ್ತಾರಾ ಜಯಲಲಿತಾ?

Published On - 11:00 pm, Tue, 23 March 21