ಪರಿಹಾರ ಕೇಳಿದ್ರೂ ಮೌನ ಮುರಿಯದ ಪ್ರಧಾನಿ ಮೋದಿ?

ಬೆಂಗಳೂರು: ಭೀಕರ ಪ್ರವಾಹ ಕರುನಾಡನ್ನೇ ಮುಳುಗಿಸಿಬಿಡ್ತು. ಮನೆ, ಮಠ, ಬೆಳೆ, ರಸ್ತೆ, ಸೇತುವೆ ಎಲ್ಲವನ್ನೂ ಹಾಳುಗೆಡವಿಬಿಡ್ತು. ಆದ್ರೆ, ಅದೆಲ್ಲವನ್ನೂ ಮರುನಿರ್ಮಾಣ ಮಾಡೋಕೆ ಸರ್ಕಾರ ಮಾಡ್ತಿರೋ ಹರಸಾಹಸ ಅಷ್ಟಿಷ್ಟಲ್ಲ. ಕೇಂದ್ರದ ನೆರವಿಗಾಗಿ ಸಿಎಂ ಬಿಎಸ್​ವೈ ಹಲವು ಬಾರಿ ಮನವಿ ಮಾಡಿದ್ರು. ಆದ್ರೆ, ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಕೇಂದ್ರ ಸರ್ಕಾರ ಮೊದಲ ಹಂತವಾಗಿ 1200ಕೋಟಿ ಪರಿಹಾರ ಕೊಟ್ಟು ಸುಮ್ಮನಾಗಿತ್ತು. ಹೀಗಾಗಿ, ಕೇಂದ್ರದಿಂದ ಇನ್ನೂ ಹೆಚ್ಚಿನ ಪರಿಹಾರ ಪಡೆದೇ ಸಿದ್ಧ ಅನ್ನೋ ಹಠಕ್ಕೆ ಸಿಎಂ ಬಿಎಸ್​ವೈ ಬಿದ್ದಿದ್ದಾರೆ. ನಿನ್ನೆ ತುಮಕೂರಲ್ಲಿ […]

ಪರಿಹಾರ ಕೇಳಿದ್ರೂ  ಮೌನ ಮುರಿಯದ ಪ್ರಧಾನಿ ಮೋದಿ?
Follow us
ಸಾಧು ಶ್ರೀನಾಥ್​
|

Updated on: Jan 03, 2020 | 7:17 AM

ಬೆಂಗಳೂರು: ಭೀಕರ ಪ್ರವಾಹ ಕರುನಾಡನ್ನೇ ಮುಳುಗಿಸಿಬಿಡ್ತು. ಮನೆ, ಮಠ, ಬೆಳೆ, ರಸ್ತೆ, ಸೇತುವೆ ಎಲ್ಲವನ್ನೂ ಹಾಳುಗೆಡವಿಬಿಡ್ತು. ಆದ್ರೆ, ಅದೆಲ್ಲವನ್ನೂ ಮರುನಿರ್ಮಾಣ ಮಾಡೋಕೆ ಸರ್ಕಾರ ಮಾಡ್ತಿರೋ ಹರಸಾಹಸ ಅಷ್ಟಿಷ್ಟಲ್ಲ. ಕೇಂದ್ರದ ನೆರವಿಗಾಗಿ ಸಿಎಂ ಬಿಎಸ್​ವೈ ಹಲವು ಬಾರಿ ಮನವಿ ಮಾಡಿದ್ರು. ಆದ್ರೆ, ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಕೇಂದ್ರ ಸರ್ಕಾರ ಮೊದಲ ಹಂತವಾಗಿ 1200ಕೋಟಿ ಪರಿಹಾರ ಕೊಟ್ಟು ಸುಮ್ಮನಾಗಿತ್ತು. ಹೀಗಾಗಿ, ಕೇಂದ್ರದಿಂದ ಇನ್ನೂ ಹೆಚ್ಚಿನ ಪರಿಹಾರ ಪಡೆದೇ ಸಿದ್ಧ ಅನ್ನೋ ಹಠಕ್ಕೆ ಸಿಎಂ ಬಿಎಸ್​ವೈ ಬಿದ್ದಿದ್ದಾರೆ. ನಿನ್ನೆ ತುಮಕೂರಲ್ಲಿ ತುಂಬಿದ ಕಾರ್ಯಕ್ರಮದಲ್ಲೇ ಪರಿಹಾರ ಕೊಡ್ಬೇಕು ಅಂತಾ ಮನವಿ ಮಾಡ್ಕೊಂಡ್ರು.

ಬಿಎಸ್​ವೈ ಪರಿಹಾರ ಕೇಳಿದ್ರೂ ಮೋದಿ ಮೌನ: ನಿನ್ನೆ ತುಮಕೂರಿನಲ್ಲಿ ಕಾರ್ಯಕ್ರಮದ ವೇಳೆಯೇ ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿಗೆ ಮನವಿ ಮಾಡಿದ್ರು. ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ಬಹಳಷ್ಟು ಹಾನಿ ಮಾಡಿದೆ. ಸೂರು, ರಸ್ತೆ, ಸೇತುವೆಗಳೆಲ್ಲಾ ಕೊಚ್ಚಿಕೊಂಡು ಹೋಗಿವೆ. ಹೀಗಾಗಿ, ರಾಜ್ಯಕ್ಕೆ 50ಸಾವಿರ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಕೊಡಬೇಕು ಅಂತಾ ಬಹಿರಂಗವಾಗೇ ಮನವಿ ಮಾಡಿದ್ರು. ಆದ್ರೆ, ಪ್ರಧಾನಿ ಮೋದಿ ಮಾತ್ರ ಬಿಎಸ್​ವೈ ಮನವಿಗೆ ಸ್ಪಂದಿಸಲೇ ಇಲ್ಲ. ನೆರೆ ಪರಿಹಾರದ ಬಗ್ಗೆ ಮಾತೇ ಆಡಲಿಲ್ಲ. ಹೀಗಾಗಿ, ಮತ್ತೊಮ್ಮೆ ರಾಜಭವನದಲ್ಲಿ ಪರಿಹಾರದ ಬಗ್ಗೆ ಮನವಿ ಮಾಡ್ತೇನೆ ಅಂತಾ ಸಿಎಂ ಹೇಳಿದ್ರು.

ಐದೇ ನಿಮಿಷದಲ್ಲಿ ಮುಗಿದ ಮೋದಿ, ಬಿಎಸ್​ವೈ ಭೇಟಿ: ತುಮಕೂರಿನಲ್ಲಿ ಸಿಎಂ ನೆರೆ ಪರಿಹಾರ ಕೇಳಿದ್ದಕ್ಕೆ ಪ್ರಧಾನಿ ಮೋದಿ ಮಾತೇ ಆಡಲಿಲ್ಲ. ಹೀಗಾಗಿ, ಬೆಂಗಳೂರಿನ ರಾಜಭವನದಲ್ಲಿ ಬಿಎಸ್​ವೈ ಮತ್ತೊಮ್ಮೆ ಮೋದಿ ಭೇಟಿಯಾದ್ರು. ಈ ವೇಳೆ, ಮೋದಿಗೆ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನ ಮಾಡಿದ್ರು. ಬಳಿಕ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ನೆರೆ ಪರಿಹಾರ ಕೋರಿ ಮನವಿಪತ್ರ ಸಲ್ಲಿಸಿ ಸಿಎಂ ಯಡಿಯೂರಪ್ಪ ಐದೇ ನಿಮಿಷದಲ್ಲಿ ವಾಪಸಾದ್ರು.

ಒಟ್ನಲ್ಲಿ, ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲೇಬೇಕು ಅನ್ನೋ ಛಲಕ್ಕೆ ಸಿಎಂ ಬಿಎಸ್​ವೈ ಬಿದ್ದಿದ್ದಾರೆ. ನಿನ್ನೆ ತುಮಕೂರಿನಲ್ಲಿ ನೆರೆ ಪರಿಹಾರಕ್ಕೆ ಮನವಿ ಮಾಡಿದ್ದ ಸಿಎಂ, ರಾಜಭವನದಲ್ಲಿ ಮತ್ತೆ ಮನವಿ ಮಾಡಿದ್ರು. ಆದ್ರೆ, ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವ ರೀತಿ ಸ್ಪಂದಿಸಿದ್ರು ಅನ್ನೋದೇ ಕುತೂಹಲ.

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್